Shivamogga LiveShivamogga LiveShivamogga Live
Font ResizerAa
  • Home
  • NEWS
    • SHIVAMOGGA CITY
    • CRIME NEWS
    • SPORTS NEWS
    • LIFE STYLE
    • BUSINESS NEWS
    • EDUCATION NEWS
    • AGRICULTURE & APMC
    • FATAFAT NEWS
    • 1 MINUTE NEWS
    • STATE HIGHLIGHTS
    • NATIONAL HIGHLIGHTS
  • TALUK NEWS
    • SHIVAMOGGA
    • BHADRAVATHI
    • THIRTHAHALLI
    • SAGARA
    • HOSANAGARA
    • SORABA
    • SHIKARIPURA
  • POLITICS
  • SPECIALS NEWS
    • AUTOMOBILES
    • CINEMA
    • DEGULA DARSHANA
    • FOOT PATH BADUKU
    • INSPIRATION
    • RANGABHOOMI
    • REAL ESTATE
    • TECHNOLOGY
  • ENGLISH NEWS
  • ADVERTISEMENTS
    • JOB JUNCTION
Shivamogga LiveShivamogga Live
Font ResizerAa
  • Home
  • NEWS
  • TALUK NEWS
  • POLITICS
  • SPECIALS NEWS
  • ENGLISH NEWS
  • ADVERTISEMENTS
  • Home
  • NEWS
    • SHIVAMOGGA CITY
    • CRIME NEWS
    • SPORTS NEWS
    • LIFE STYLE
    • BUSINESS NEWS
    • EDUCATION NEWS
    • AGRICULTURE & APMC
    • FATAFAT NEWS
    • 1 MINUTE NEWS
    • STATE HIGHLIGHTS
    • NATIONAL HIGHLIGHTS
  • TALUK NEWS
    • SHIVAMOGGA
    • BHADRAVATHI
    • THIRTHAHALLI
    • SAGARA
    • HOSANAGARA
    • SORABA
    • SHIKARIPURA
  • POLITICS
  • SPECIALS NEWS
    • AUTOMOBILES
    • CINEMA
    • DEGULA DARSHANA
    • FOOT PATH BADUKU
    • INSPIRATION
    • RANGABHOOMI
    • REAL ESTATE
    • TECHNOLOGY
  • ENGLISH NEWS
  • ADVERTISEMENTS
    • JOB JUNCTION

Home » ಶಿವಮೊಗ್ಗದಲ್ಲಿ ಗ್ರೀನ್ ಪಟಾಕಿ ಗೊಂದಲ, ಹೇಗಿದೆ ಖರೀದಿ? ಏನಿದು ಹಸಿರು ಪಟಾಕಿ?

ಶಿವಮೊಗ್ಗದಲ್ಲಿ ಗ್ರೀನ್ ಪಟಾಕಿ ಗೊಂದಲ, ಹೇಗಿದೆ ಖರೀದಿ? ಏನಿದು ಹಸಿರು ಪಟಾಕಿ?

14/11/2020 7:59 PM
ನಿತಿನ್‌ ಕೈದೊಟ್ಲು

119060214 954258745054036 6933822829653446782 o.jpg? nc cat=105& nc sid=110474& nc ohc=jztG790PCawAX8gAOuD& nc ht=scontent.fixe1 1

ಶಿವಮೊಗ್ಗ ಲೈವ್.ಕಾಂ |SHIMOGA NEWS | 14 NOVEMBER 2020

ದೀಪಾವಳಿ ಆರಂಭವಾದರೂ ಹಸಿರು ಪಟಾಕಿ ಗೊಂದಲ ಮುಂದುವರೆದಿದೆ. ಶಿವಮೊಗ್ಗದಲ್ಲಿ ಹಸಿರು ಪಟಾಕಿಯನ್ನಷ್ಟೇ ಮಾರಾಟ ಮಾಡಬೇಕು ಅಂತಾ ಮಹಾನಗರ ಪಾಲಿಕೆ ತಾಕೀತು ಮಾಡುತ್ತಿದೆ. ಆದರೆ ಮಾರಾಟಗಾರರ ಪರಿಸ್ಥಿತಿ ಅಡಕತ್ತರಿಯಲ್ಲಿ ಸಿಕ್ಕಿಬಿದ್ದಂತೆ ಆಗಿದೆ. ಈ ನಡುವೆ ಗ್ರಾಹಕರು ಕೂಡ ಹಸಿರು ಪಟಾಕಿಯನ್ನು ಗಂಭೀರವಾಗಿ ಸ್ವೀಕರಿಸಿದಂತೆ ತೋರುತ್ತಿಲ್ಲ.

ಎರಡು ಕಡೆ ಪಟಾಕಿ ಮಾರಾಟ

ಶಿವಮೊಗ್ಗ ನಗರದ ಎರಡು ಕಡೆ ಪಟಾಕಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರತಿ ವರ್ಷದಂತೆ ನೆಹರೂ ಕ್ರೀಡಾಂಗಣದ ಆವರಣ ಮತ್ತು ಸೈನ್ಸ್ ಮೈದಾದನಲ್ಲಿ ಪಟಾಕಿ ಮಾರಾಟ ಮಳಿಗೆಗಳನ್ನು ತೆರೆಯಲಾಗಿದೆ. ಗ್ರಾಹಕರಿಂದ ತುಂಬಾ ದೊಡ್ಡ ರೆಸ್ಪಾನ್ಸ್ ಸಿಗದಿದ್ದರೂ, ತಕ್ಕಮಟ್ಟಿಗೆ ವ್ಯಾಪಾರ ನಡೆಯುತ್ತಿದೆ.

VIDEO REPORT

ಗ್ರೀನ್ ಪಟಾಕಿ ಕೇಳೋರೆ ಇಲ್ಲ..!

ಕೋವಿಡ್ ಕಾರಣ ಮತ್ತು ಪರಿಸರ ಮಾಲಿನ್ಯ ತಗ್ಗಿಸುವ ಸಲುವಾಗಿ ರಾಜ್ಯ ಸರ್ಕಾರ ಗ್ರೀನ್ ಪಟಾಕಿಯನ್ನಷ್ಟೇ ಮಾರಬೇಕು ಮತ್ತು ಜನರು ಗ್ರೀನ್ ಪಟಾಕಿಯನ್ನಷ್ಟೇ ಬಳಸಬೇಕು ಎಂದು ಸೂಚಿಸಿದೆ. ಆದರೆ ಶಿವಮೊಗ್ಗದಲ್ಲಿ ಗ್ರೀನ್ ಪಟಾಕಿಯನ್ನು ಕೇಳಿ ಪಡೆಯುವ ಗ್ರಾಹಕರ ಸಂಖ್ಯೆ ತುಂಬಾ ಕಡಿಮೆ ಅನ್ನುತ್ತಾರೆ ವ್ಯಾಪಾರಿಗಳು. ಗ್ರೀನ್ ಪಟಾಕಿ ಅಂದರೆ ಏನೆಂದು ಜನರಲ್ಲಿ ಜಾಗೃತಿ ಇಲ್ಲದಿರುವುದು ಇದಕ್ಕೆ ಕಾರಣ.

ಪಾಲಿಕೆ ವರ್ಸರ್ಸ್ ವ್ಯಾಪಾರಿಗಳು..!

ಗ್ರೀನ್ ಪಟಾಕಿ ವಿಚಾರವಾಗಿ ಮಹಾನಗರ ಪಾಲಿಕೆ ಮತ್ತು ಪಟಾಕಿ ವ್ಯಾಪಾರಿಗಳ ನಡುವೆ ತಿಕ್ಕಾಟ ಶುರುವಾಗಿದೆ. ಜಾಗೃತಿ ಮೂಡಿಸಿ, ಎಚ್ಚರಿಕೆ ನೀಡಲು ಪಾಲಿಕೆ ಅಧಿಕಾರಿಗಳು ಪಟಾಕಿ ಮಳಿಗೆಗಳ ಬಳಿ ಬಂದಾಗ ಆಕ್ರೋಶದ ದರ್ಶನವಾಯ್ತು.

124556589 1266380603723357 5207402917314912253 n.jpg? nc cat=108&ccb=2& nc sid=8bfeb9& nc ohc=h3lc9AfZ0mcAX8VFccJ& nc ht=scontent.fblr11 1

ಪಾಲಿಕೆ ಅಧಿಕಾರಿಗಳು ಹೇಳೋದೇನು?

  • ಸರ್ಕಾರದ ಸೂಚನೆ ಅಂತೆ ಗ್ರೀನ್ ಪಟಾಕಿಯನ್ನು ಬಳಸಬೇಕು. ಹಾಗಾಗಿ ಎಲ್ಲಾ ಮಾರಾಟಗಾರರು ಗ್ರೀನ್ ಪಟಾಕಿಯನ್ನಷ್ಟೇ ಮಾರಬೇಕು.
  • ಗ್ರೀನ್ ಪಟಾಕಿ ಅಂತಾ ಲೇಬಲ್ ಇರುವ ಪಟಾಕಿಯನ್ನಷ್ಟೇ ಗ್ರಾಹಕರು ಕೊಳ್ಳಬೇಕು.
  • ಹಸಿರು ಪಟಾಕಿ ಹೊರತು ಉಳಿದ್ಯಾವುದೆ ಮಾದರಿಯ ಪಟಾಕಿ ಮಾರಾಟ, ಪ್ರದರ್ಶನ ಮಾಡುವುದು ನಿಯಮ ಬಾಹಿರ. ಆದ್ದರಿಂದ ಅವುಗಳನ್ನು ವಶಕ್ಕೆ ಪಡೆಯಲಾಗುತ್ತದೆ.

ವ್ಯಾಪಾರಿಗಳ ವಾದ ಏನು?

  • ಗ್ರೀನ್ ಪಟಾಕಿ ವಿಚಾರವಾಗಿ ಸರ್ಕಾರ ತಡವಾಗಿ ಸೂಚನೆ ಪ್ರಕಟಿಸಿದೆ. ಹಾಗಾಗಿ ಈವರೆಗೂ ಇದ್ದ ಮಾದರಿಯ ಪಟಾಕಿಗಳನ್ನೇ ತರಿಸಿ, ಮಾರಲಾಗುತ್ತಿದೆ.
  • ಹಸಿರು ಪಟಾಕಿ ಕುರಿತು ಸರ್ಕಾರಕ್ಕೆ ಸ್ಪಷ್ಟತೆ ಇಲ್ಲ, ವ್ಯಾಪಾರಿಗಳಿಗೂ ಆ ಕುರಿತು ಜಾಗೃತಿ ಮತ್ತು ಸ್ಪಷ್ಟತೆ ಮೂಡಿಸಿಲ್ಲ.
  • ಹಳೆಯ ಪಟಾಕಿಗಳಿಗೆ ಗ್ರೀನ್ ಪಟಾಕಿ ಎಂದು ಸ್ಟಿಕರ್ ಅಂಟಿಸಿ ಕಳುಹಿಸುತ್ತಿದ್ದಾರೆ. ಇದನ್ನೆ ಮಾರಾಟ ಮಾಡುವಂತಾಗಿದೆ.
  • ಶಿವಮೊಗ್ಗದಲ್ಲಿ ಗ್ರೀನ್ ಪಟಾಕಿ ಲಭ್ಯತೆ ಬಹಳ ಕಡಿಮೆ ಇದೆ. ಹಾಗಾಗಿ ಗ್ರೀನ್ ಪಟಾಕಿ ಮಾರಾಟ ಕಷ್ಟವಾಗಿದೆ.
  • ಗ್ರೀನ್ ಪಟಾಕಿ ಬೇಕು ಅನ್ನುವ ಗ್ರಾಹಕರು ತುಂಬಾನೇ ಕಡಿಮೆ. ಹಾಗಾಗಿ ಗ್ರಾಹಕರು ಕೇಳಿದ್ದನ್ನು ಕೊಡಬೇಕಾಗಿದೆ.

ಹಬ್ಬದ ಹೊತ್ತಿಗೆ ಸರ್ಕಾರ ನೀಡಿದ ಸೂಚನೆಯಿಂದ ವ್ಯಾಪಾರಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ. ಆದರೆ ಗ್ರಾಹಕರು ಈ ಕುರಿತು ಹೆಚ್ಚು ತಲೆ ಕೆಡಿಸಿಕೊಂಡತೆ ತೋರುತ್ತಿಲ್ಲ. ಪಟಾಕಿ ಮಾರಾಟ ಪ್ರಮಾಣ ಕುಸಿತವಾಗಿದೆ. ಕಳೆದ ವರ್ಷಕ್ಕಿಂತಲೂ ವ್ಯಾಪಾರ ಸ್ವಲ್ಪ ಕುಸಿತ ಕಂಡಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

122336553 983106055502638 6844548172344119085 n.jpg? nc cat=107& nc sid=110474& nc ohc=JrLgAWzRixQAX9XQ8JM& nc ht=scontent.fblr11 1

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | [email protected]

» ಇವತ್ತಿನ ಎಲ್ಲ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

June-2025-Report-Shivamogga-Live

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» ಶಿವಮೊಗ್ಗ ಲೈವ್‌ gmail

[email protected]

» Whatsapp Number

7411700200

 

 

Byನಿತಿನ್‌ ಕೈದೊಟ್ಲು
Editor
Follow:
ಲೋಕಲ್ ಸುದ್ದಿಗಳು ಲೋಕಕ್ಕೆ ತಿಳಿಸಬೇಕು ಅಂತಾ ನ್ಯೂಸ್ ಚಾನೆಲ್ ದುನಿಯಾದಿಂದ ಹೊರ ಬಂದು ಶಿವಮೊಗ್ಗ ಲೈವ್ ಕಟ್ಟಿದ್ದೇವೆ. ಸ್ಥಳೀಯ ಪತ್ರಿಕೆ, ಕೇಬಲ್ ಚಾನೆಲ್, ರಾಜ್ಯಮಟ್ಟದ ಪತ್ರಿಕೆ, ನ್ಯೂಸ್ ಚಾನೆಲ್’ಗಳ ಬೆಂಗಳೂರು ಕಚೇರಿಯಲ್ಲಿ ವರ್ಷಗಟ್ಟಲೆ ಕೆಲಸ ಮಾಡಿದ್ದೇನೆ. ಈ ಫೀಲ್ಡಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲದ ಅನುಭವವಿದೆ. ಹಾಗಾಗಿ ಪೇಪರ್, ಟಿವಿಗಳಿಗಿಂತಲೂ ವಿಭಿನ್ನವಾಗಿ ಸುದ್ದಿ ಕೊಡಬೇಕು ಅನ್ನುವ ಹಂಬಲ. ಅದರ ಪ್ರಯತ್ನ ನಿರಂತರವಾಗಿದೆ. ಕ್ವಾಲಿಟಿ ಮತ್ತು ನಿಖರತೆಗೆ ಮೊದಲ ಆದ್ಯತೆ. ಸುದ್ದಿಯ ಒಳಗೆ ನನ್ನ ಅಭಿಪ್ರಾಯ ಹೇರುವುದಕ್ಕೆ ಇಷ್ಟವಿಲ್ಲ. ಸುದ್ದಿಯನ್ನು ಸುದ್ದಿಯಾಗಷ್ಟೆ ಕೊಡಬೇಕು ಎಂಬುದು ನನ್ನ ವಾದ. ಹೀಗಿದ್ದೂ ಕೆಲವೊಮ್ಮೆ ಸುದ್ದಿ ಕೆಳಗೆ ‘ಡ್ಯಾಷ್ ಡ್ಯಾಷ್ ಡ್ಯಾಷ್’ ಅಂತೆಲ್ಲ ಕಮೆಂಟುಗಳು ಬರುತ್ತವೆ. ಆರಂಭದಲ್ಲಿದ್ದ ಟೆಂಪರ್ ಈಗಿಲ್ಲ. ಹಾಗಾಗಿ ರಿಯಾಕ್ಟ್ ಮಾಡಲ್ಲ..! ನಿಮ್ಮೂರ ಸುದ್ದಿಗಳಿದ್ದರೆ ತಿಳಿಸಿ. ಹಣ ಪಡೆದು ಸುದ್ದಿ ಮಾಡುವ ಹವ್ಯಾಸ, ಅಭ್ಯಾಸ ಎರಡೂ ಇಲ್ಲ. ಇನ್ನಷ್ಟು ವಿಭಿನ್ನ ಪ್ರಯತ್ನಗಳು, ನಮ್ಮೂರನ್ನು ಮತ್ತಷ್ಟು ಸುತ್ತಬೇಕು, ನಮ್ಮೂರ ಬಗ್ಗೆ ತಿಳಿದು ಜನರಿಗೆಲ್ಲ ತಿಳಿಸಬೇಕು ಅನ್ನುವ ತವಕವಿದೆ. ಅಂದಹಾಗೆ, ಹೊಸ ಐಡಿಯಾಗಳಿದ್ದರೆ, ಸಲಹೆಗಳಿದ್ದರೆ ತಿಳಿಸಿ.. ‘ಡ್ಯಾಷ್ ಡ್ಯಾಷ್’ ಬಯ್ಯೋದಿದ್ದರೆ ದಯವಿಟ್ಟು ವಾಟ್ಸಪ್’ನಲ್ಲಿ ಮೆಸೇಜು ಮಾಡಿ, ಸಾಕು..! ನನ್ನ ಮೊಬೈಲ್ ನಂಬರ್ 9964634494. ಸಿಕ್ಕಾಗ ತಪ್ಪದೆ ಮಾತಾಡಿಸಿ. ನಿಮ್ಮ ಸ್ನೇಹ ನಂಗೆ ಅಮೂಲ್ಯ. ಶಿವಮೊಗ್ಗದ ಸುದ್ದಿಗಾಗಿ ನಿರಂತರವಾಗಿ ಶಿವಮೊಗ್ಗ ಲೈವ್.ಕಾಂ ಓದುತ್ತಿರಿ
Previous Article 141120 Shimoga Police Announcement in Shimoga 1 ಲಾಠಿ ಬಿಟ್ಟು ಮೈಕ್ ಹಿಡಿದ ಶಿವಮೊಗ್ಗ ಪೊಲೀಸ್, ಕಳ್ಳತನದ ವಿರುದ್ಧ ಜಾಗೃತಿಗೆ ವಿಭಿನ್ನ ಪ್ರಯೋಗ
Next Article Corona PPE Kit and swab box SPECIAL REPORT | ಶಿವಮೊಗ್ಗದಲ್ಲಿ ಶೇ.2ಕ್ಕೆ ಕುಸಿದ ಕರೋನ, ಎರಡನೆ ಅಲೆ ಭೀತಿಯಲ್ಲಿ ಆಡಳಿತ, ಕಾರಣಗಳೇನು ಗೊತ್ತಾ?

ಇದನ್ನೂ ಓದಿ

HOME

ಶಿವಮೊಗ್ಗ ನಗರದಲ್ಲಿ ಮತ್ತೆರಡು ಕಂಟೈನ್ಮೆಂಟ್ ಜೋನ್ ರಚನೆ

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
19/08/2021
180621 Kavaledurga Mutt Araga Jnanendra Visit 1
HOME

ತೀರ್ಥಹಳ್ಳಿಯ ಕವಲೇದುರ್ಗದ ಶ್ರೀಗಳ ಪುಣ್ಯಾರಾಧನೆ, ನುಡಿ ನಮನ

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
18/06/2021
050720 Sunday Curfew in Shimoga 1
HOME

ಶಿವಮೊಗ್ಗ ಜಿಲ್ಲೆ ಲಾಕ್ ಡೌನ್, ಕೆಲವು ಸೇವೆಗಳಿಗೆ ವಿನಾಯಿತಿ, ಇಲ್ಲಿದೆ ಲಾಕ್ ಡೌನ್ ಕುರಿತ ಪ್ರಮುಖ ಹತ್ತು ಪಾಯಿಂಟ್

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
30/05/2021
100521 Shimoga Lockdown Day 1 1
HOME

ಇನ್ಮುಂದೆ ಶಿವಮೊಗ್ಗ ಸಿಟಿಯಲ್ಲಿ ಕರೋನ ಪಾಸಿಟಿವ್ ಬಂದರೆ ಹೋಂ ಐಸೊಲೇಷನ್ ಇಲ್ಲ, ಯಾಕೆ? ಮುಂದೇನು ಕಥೆ?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
24/05/2021
200521 Car Glass Breaking CCTV Visuals 1
HOME

ಕಾರು ಗಾಜು ಪುಡಿ ಪುಡಿ ಮಾಡುವ ಸಿಸಿಟಿವಿ ವಿಡಿಯೋ ವೈರಲ್, ಇಬ್ಬರು ದುಷ್ಕರ್ಮಿಗಳು ಅರೆಸ್ಟ್

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
20/05/2021
200521 Eshwarappa visit car break area 1
HOME

‘ಇದು ಮುಸ್ಲಿಂ ಗೂಂಡಾಗಳ ಕೃತ್ಯ, ಅಶಾಂತಿ ಉಂಟು ಮಾಡುವುದೆ ಇವರ ಧ್ಯೇಯ’, ಗಂಭೀರ ಆರೋಪ

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
20/05/2021
Previous Next

ಶಿವಮೊಗ್ಗ ಲೈವ್ ಗ್ರೂಪ್ ಸೇರಲು ಕ್ಲಿಕ್ ಮಾಡಿ

🟢 shivamoggalive.com

whatsapp-logo
Shivamogga-Live-Logo-New-Logo
Welcome Back!

Sign in to your account

Username or Email Address
Password

Lost your password?