ಸಂಪೂರ್ಣ ಲಾಕ್ ಡೌನ್ ಪರಿಣಾಮ, ಬದಲಾಯ್ತು ಶಿವಮೊಗ್ಗ ಸಿಟಿ ಚಿತ್ರಣ

ಶಿವಮೊಗ್ಗ ಲೈವ್.ಕಾಂ | SHIMOGA NEWS | 12 MAY 2021

ಶಿವಮೊಗ್ಗ ನಗರದಲ್ಲಿ ನಾಳೆಯಿಂದ ನಾಲ್ಕು ದಿನ ಸಂಪೂರ್ಣ ಲಾಕ್ ಡೌನ್‍ ಘೋಷಿಸಲಾಗಿದೆ. ಅಗತ್ಯ ವಸ್ತುಗಳ ಖರೀದಿಗೂ ಸಮಸ್ಯೆ ಉಂಟಾಗುವ ಭೀತಿ ಎದುರಾಗಿದೆ. ಹಾಗಾಗಿ ಜನರು ಇವತ್ತೆ ಖರೀದಿಗೆ ಇಳಿದಿದ್ದಾರೆ.

ದಿನಸಿ ಖರೀದಿಗೆ ಜೋರು

ನಗರದ ವಿವಿಧೆಡೆ ಇವತ್ತೆ ಅಗತ್ಯವಿರುವ ದಿನಸಿ ವಸ್ತುಗಳ ಖರೀದಿಗೆ ಜನರು ಮುಂದಾಗಿದ್ದಾರೆ. ಹೊಸಮನೆಯ ನ್ಯಾಯಬೆಲೆ ಅಂಗಡಿ ಮುಂದೆ ರೇಷನ್‍ಗಾಗಿ ಜನರು ದೊಡ್ಡ ಕ್ಯೂನಲ್ಲಿ ನಿಂತಿದ್ದರು. ಗಾಂಧಿ ಬಜಾರ್, ದುರ್ಗಿಗುಡಿ, ವಿನೋಬನಗರ ಸೇರಿದಂತೆ ಹಲವು ಕಡೆ ದಿನಸಿಗಾಗಿ ಜನರು ಸಾಲುಗಟ್ಟಿದ್ದ ದೃಶ್ಯ ಕಂಡು ಬಂದವು.

ಎಪಿಎಂಸಿ ಬಳಿಯೂ ಜನ

ಹೋಲ್ ಸೇಲ್ ವ್ಯಾಪಾರಕ್ಕಷ್ಟೆ ಅವಕಾಶ ಎಂದು ತಿಳಿಸಿದ್ದರೂ, ನಾಲ್ಕು ದಿನಕ್ಕಾಗುವಷ್ಟು ತರಕಾರಿ ಬೇಕಾಗಿದ್ದರಿಂದ ಜನರು ಇವತ್ತು ವಿನೋಬನಗರ ಎಪಿಎಂಸಿಗೆ ಬಂದಿದ್ದರು. ಆದರೆ ಚಿಲ್ಲರೆ ವ್ಯಾಪಾರಕ್ಕೆ ಇಲ್ಲಿ ಅವಕಾಶವಿಲ್ಲ  ಎಂದು ಪೊಲೀಸರು ಜನರನ್ನು ಕಳುಹಿಸಿದರು. ವಿನೋಬನಗರ ಶಿವಾಲಯದ ಬಳಿ ತರಕಾರಿ ಚಿಲ್ಲರೆ ವ್ಯಾಪಾರಕ್ಕೆ ಪಾಲಿಕೆ ವತಿಯಿಂದ ಅವಕಾಶ ಕಲ್ಪಿಸಲಾಗಿದೆ. ಅಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಖರೀದಿಗೆ ಮುಂದಾಗಿದ್ದರು.

ಇದನ್ನೂ ಓದಿ | ಶಿವಮೊಗ್ಗ ಸಿಟಿ ಲಾಕ್ ಡೌನ್, ಜಿಲ್ಲಾಧಿಕಾರಿಯಿಂದ ಹೇಳಿಕೆ ಬಿಡುಗಡೆ, ಏನಿರುತ್ತೆ? ಏನಿರಲ್ಲ?

ವಾಹನ ದಟ್ಟಣೆ ಹೆಚ್ಚಳ

ಶಿವಮೊಗ್ಗ ನಗರದಲ್ಲಿ ಕಳೆದ ಎರಡು ದಿನಕ್ಕೆ ಹೋಲಿಸಿದರೆ ಇವತ್ತು ವಾಹನ ದಟ್ಟಣೆ ಹೆಚ್ಚಳವಾಗಿದೆ. ಬೆಳಗ್ಗೆ 10 ಗಂಟೆವರೆಗೆ ಸಂಚಾರಕ್ಕೆ ಅವಕಾಶವಿರುವುದರಿಂದ, ಜನರು ಅಗತ್ಯ ವಸ್ತು ಖರೀದಿ ಸೇರಿದಂತೆ ವಿವಿಧ ಕಾರಣಕ್ಕೆ ವಾಹನಗಳನ್ನು ರಸ್ತೆಗಿಳಿಸಿದ್ದಾರೆ. ಈ ನಡುವೆ ಕೆಲವು ಪ್ರಮುಖ ಕಡೆ ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನಗಳ ತಪಾಸಣೆಯನ್ನೂ ನಡೆಸುತ್ತಿದ್ದಾರೆ. ಪಾಲಿಕೆ ವತಿಯಿಂದಲೂ ಪ್ರಮುಖ ಕಡೆ ಕೋವಿಡ್ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುತ್ತಿದೆ.

ಇದನ್ನೂ ಓದಿ | ಶಿವಮೊಗ್ಗ ನಗರದಲ್ಲಿ ನಾಲ್ಕು ದಿನ ಸಂಪೂರ್ಣ ಲಾಕ್‌ಡೌನ್, ಮನೆಯಿಂದ ಹೊರಗೆ ಬರುವಂತೆಯೇ ಇಲ್ಲ

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : May 12, 2021 at 9:03 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಮೇ 12, 2021

Leave a Comment