ಪ್ರತಿ ತಿಂಗಳು ₹18,000 ವರೆಗಿನ ಸಂಬಳದ ಕೆಲಸ ಖಾಲಿ ಇದೆ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಜಾಬ್‌ ನ್ಯೂಸ್‌: ವಿಶ್ರುತ್ ಅಗ್ರಿ ಬ್ಯುಸಿನೆಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಖಾಲಿ ಇರುವ ಸೇಲ್ಸ್ ಎಕ್ಸಿಕ್ಯುಟಿವ್ ಹುದ್ದೆಗಳಿಗೆ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ₹15,000 ದಿಂದ ₹18,000 ವರೆಗೆ ಇರಲಿದೆ. ಟಿಎ ಮತ್ತು ಇನ್ಸೆಂಟಿವ್ ಸಿಗಲಿದೆ. ಅಭ್ಯರ್ಥಿಗಳ ಪ್ರಸ್ತುತ ಸಿಟಿಸಿ ಆಧಾರದ ಮೇಲೆ ವೇತನದಲ್ಲಿ ವ್ಯತ್ಯಾಸವಾಗಬಹುದು.

Shivamogga-Job-Update

ಸಾಗರ, ತೀರ್ಥಹಳ್ಳಿ, ಭದ್ರಾವತಿ ಹಾಗೂ ಶಿಕಾರಿಪುರದಲ್ಲಿ ಹುದ್ದೆಗಳು ಖಾಲಿ ಇವೆ. ಪಿಯುಸಿ, ಅಗ್ರಿ ಡಿಪ್ಲೊಮಾ, ಯಾವುದೇ ಡಿಪ್ಲೊಮಾ, ಬಿಎಸ್ಸಿ ಅಥವಾ ಯಾವುದೇ ಪದವಿ ಪಡೆದಿರುವವರು ಅರ್ಜಿ ಸಲ್ಲಿಸಬಹುದು. ಹೊಸ ಹಾಗೂ ಅನುಭವಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ದ್ವಿಚಕ್ರ ವಾಹನ ಮತ್ತು ಚಾಲನಾ ಪರವಾನಗಿ ಹೊಂದಿರುವುದು ಕಡ್ಡಾಯ. ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕು. ಆಸಕ್ತರು ತಮ್ಮ ರೆಸ್ಯೂಮ್ ಅನ್ನು 8050129685 ಅಥವಾ 8050129684 ಸಂಖ್ಯೆಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಇನ್‌ಸ್ಟಾಗ್ರಾಮ್‌ನಲ್ಲಿ vishruthagribusiness ಸಂಪರ್ಕಿಸಬಹುದು.