ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 1 MAY 2024
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
SHIMOGA JOBS : ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಮತ್ತು ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳು ಖಾಲಿ ಇದೆ.
ಉದ್ಯೋಗ 1 : ಇಂಡಿಯನ್ ಓವರ್‌ಸೀಸ್ ಬ್ಯಾಂಕ್
ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಲ್ಲಿ ಚಿನ್ನಾಭರಣ ಮೌಲ್ಯಮಾಪಕರು ಬೇಕಾಗಿದ್ದಾರೆ. ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಹಾವೇರಿ, ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿರುವ 31 ಶಾಖೆಗಳಲ್ಲಿ ಮೌಲ್ಯಮಾಪಕರಾಗಿ ಕೆಲಸ ಮಾಡಲು ಕಮಿಷನ್ ಆಧಾರದ ಮೇಲೆ ಉತ್ತಮ ಅನುಭವಿ ಚಿನ್ನಾಭರಣ ಮೌಲ್ಯಮಾಪಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಬಯೋಡೇಟಾ, ಶೈಕ್ಷಣಿಕ ಅರ್ಹತಾ ಪ್ರಮಾಣಪತ್ರ, ಐಡಿ ಮತ್ತು ವಿಳಾಸ ಪುರಾವೆ, ಸಮುದಾಯ ಪ್ರಮಾಣಪತ್ರ, ಅನುಭವ ಪ್ರಮಾಣಪತ್ರ, ಆಭರಣ ಪರೀಕ್ಷೆಯ ತರಬೇತಿ ಪ್ರಮಾಣಪತ್ರದೊಂದಿಗೆ ಅರ್ಜಿಯನ್ನು ಅಂಚೆ ಮೂಲಕ ಸಲ್ಲಿಸಲು ಕೋರಲಾಗಿದೆ. ಲಕೋಟೆಯ ಮೇಲ್ಬಾಗದಲ್ಲಿ “ಚಿನ್ನಾಭರಣ ಮೌಲ್ಯ ಮಾಪಕರಿಗಾಗಿ ಅರ್ಜಿ” ಎಂದು ನಮೂದಿಸಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ.
ವಯೋಮಿತಿ: 25-65 ವರ್ಷ, ಭದ್ರತಾ ಠೇವಣಿ: 20 ಸಾವಿರ ರೂ., ಅನುಭವ : 3-5 ವರ್ಷಗಳು, ವಿದ್ಯಾರ್ಹತೆ: 8 ನೇ ತರಗತಿ ಪಾಸ್, ದಯವಿಟ್ಟು ಗಮನಿಸಿ: ಆಯ್ಕೆಯಾದ ಅಭ್ಯರ್ಥಿಗಳು ಇತರ ಬ್ಯಾಂಕ್‌ಗಳಿಗೆ ಆಭರಣಗಳನ್ನು ಮೌಲ್ಯಮಾಪನ ಮಾಡಬಾರದು.
ಸೂಚನೆ: ಅಕ್ಕಸಾಲಿಗರ ಕುಟುಂಬದ ಅಭ್ಯರ್ಥಿಗಳು ತರಬೇತಿ ಪತ್ರ ಸಲ್ಲಿಸುವ ಅಗತ್ಯವಿಲ್ಲ. ಮಹಿಳೆಯರೂ ಸಹ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15.05.2024
ಹೆಚ್ಚಿನ ಮಾಹಿತಿಗೆ : ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಕಾಯರ್‌ಮಂಜ್ ಬಿಲ್ಡಿಂಗ್, ಎಂ.ಜಿ. ರಸ್ತೆ, ಬಳ್ಳಾಲ್‌ಬಾಗ್, ಮಂಗಳೂರು, ಕರ್ನಾಟಕ-575003 ದೂರವಾಣಿ : +91 97896 89439, 0824-2450518 ಸಂಪರ್ಕಿಸಬಹುದು.
ಉದ್ಯೋಗ 2 : ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ಹುದ್ದೆ
ಮೂಡುಬಿದಿರೆಯ ಪುತ್ತಿಗೆಯ ವಿವೇಕಾನಂದ ನಗರದಲ್ಲಿರುವ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ (ರಾಜ್ಯ ಪಠ್ಯಕ್ರಮದ ಶಾಲೆ) ಈ ಕೆಳಕಂಡ ಹುದ್ದೆಗಳಿಗೆ ಶಿಕ್ಷಕರು ಬೇಕಾಗಿದ್ದು ನಿಗದಿತ ಅರ್ಹತೆಯುಳ್ಳ ಶಿಕ್ಷಕರು ದಿನಾಂಕ 30-04-2024 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಸಮಾಜ ವಿಜ್ಞಾನ – ಎಂ.ಎ., ಬಿ.ಇಡಿ
ಇಂಗ್ಲೀಷ್ – ಎಂ.ಎ. (ಇಂಗ್ಲೀಷ್) ಬಿ.ಇಡಿ
ಹಿಂದಿ – ಎಂ.ಎ, ಬಿ.ಇಡಿ
ಕಂಪ್ಯೂಟರ್ – ಬಿ.ಸಿ.ಎ
ಅರ್ಜಿ ಸಲ್ಲಿಸಬೇಕಾಗಿ ಇಮೇಲ್ ವಿಳಾಸ [email protected], ಹೆಚ್ಚಿನ ಮಾಹಿತಿಗೆ 70265 30263, 70265 30137 ಸಂಪರ್ಕಿಸಬಹುದು.
ಇದನ್ನೂ ಓದಿ – ಶಿವಮೊಗ್ಗ ಇವತ್ತು ಗ್ರೀನ್ ಜೋನ್‌ಗೆ, ನೆರೆ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಮುಂದುವರಿಕೆ, ಇವತ್ತು ಎಷ್ಟಿರುತ್ತೆ ತಾಪಮಾನ?