ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 2 FEBRUARY 2023
SHIMOGA | ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಹಾಲು ಒಕ್ಕೂಟದಲ್ಲಿ (Milk Union Jobs) ವಿವಿಧ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ವಿವಿಧ ಶ್ರೇಣಿಯಲ್ಲಿ 194 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕೆಲಸದ ವಿಚಾರ, ಪೋಸ್ಟ್ ವೈರಲ್ ಬೆನ್ನಿಗೆ ಪೊಲೀಸರು ಅಲರ್ಟ್
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಯಾವೆಲ್ಲ ಹುದ್ದೆ? ಎಷ್ಟು ಸಂಬಳ?
ಹುದ್ದೆ : ಸಹಾಯಕ ವ್ಯವಸ್ಥಾಪಕ
17 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ – ವೇತನ ಶ್ರೇಣಿ 52650 ರೂ. ನಿಂದ 97100 ರೂ.
ವಿದ್ಯಾರ್ಹತೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಶುವೈದ್ಯಕೀಯ ವಿಜ್ಞಾನ ಮತ್ತು ಪಶು ಸಂಗೋಪನೆ ವಿಷಯದಲ್ಲಿ (ಬಿ.ವಿ.ಎಸ್ಸಿ ಅಂಡ್ ಎಹೆಚ್) ಪದವಿ ಹೊಂದಿರಬೇಕು.
ಹುದ್ದೆ : ಸಹಾಯಕ ವ್ಯವಸ್ಥಾಪಕ (ಆಡಳಿತ)
1 ಹುದ್ದೆಯನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ – ವೇತನ ಶ್ರೇಣಿ 52650 ರೂ. ನಿಂದ 97100 ರೂ.
ವಿದ್ಯಾರ್ಹತೆ : ಮಾನವ ಸಂಪನ್ಮೂಲ ವಿಷಯದಲ್ಲಿ 02 ವರ್ಷಗಳ ಪೂರ್ಣಾವಧಿ ಎಂಬಿಎ ಜೊತೆಗೆ ಪ್ರತಿಷ್ಟಿತ ಸಂಸ್ಥೆಗಳಲ್ಲಿ ಆಡಳಿತ ನಿರ್ವಹಣೆಯಲ್ಲಿ 03 ವರ್ಷಗಳ ಸೇವಾನುಭವ ಹಾಗೂ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.
ಹುದ್ದೆ : ಸಹಾಯಕ ವ್ಯವಸ್ಥಾಪಕ (ಎಫ್ ಅಂಡ್ ಎಫ್)
3 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ – ವೇತನ ಶ್ರೇಣಿ 52650 ರೂ. ನಿಂದ 97100 ರೂ.
ವಿದ್ಯಾರ್ಹತೆ : ಕೃಷಿ ವಿಜ್ಞಾನ ವಿಷಯದಲ್ಲಿ ಬಿ.ಎಸ್ಸಿ (ಅಗ್ರಿ) ಪದವಿಯೊಂದಿಗೆ ಕರ್ನಾಟಕ ಹಾಲು ಮಹಾಮಂಡಳಿ / ಜಿಲ್ಲಾ ಸಹಕಾರ ಹಾಲು ಒಕ್ಕೂಟಗಳಲ್ಲಿ ಪಶು ಆಹಾರ ಮತ್ತು ಮೇವು ಅಭಿವೃದ್ಧಿ ಕೆಲಸಗಳ ನಿರ್ವಹಣೆಯಲ್ಲಿ ಕನಿಷ್ಟ 05 ವರ್ಷಗಳ ಸೇವಾನುಭವ ಹೊಂದಿರಬೇಕು.
ಹುದ್ದೆ : ಎಂಐಎಸ್ / ಸಿಸ್ಟಂ ಆಫೀಸರ್
1 ಹುದ್ದೆಯ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ – ವೇತನ ಶ್ರೇಣಿ 43100 ರೂ. ನಿಂದ 83900 ರೂ.
ವಿದ್ಯಾರ್ಹತೆ : ಬಿಇ ಕಂಪ್ಯೂಟರ್ ಸೈನ್ಸ್ / ಇನ್ಫಾರ್ಮೇಷನ್ ಸೈನ್ಸ್ ಪದವಿಯನ್ನು ಹೊಂದಿರಬೇಕು.
ಹುದ್ದೆ : ಮಾರುಕಟ್ಟೆ ಅಧಿಕಾರಿ
2 ಹುದ್ದೆಗಳನ್ನು ನಾಮಕ ಮಾಡಿಕೊಳ್ಳಲಾಗುತ್ತಿದೆ – ವೇತನ ಶ್ರೇಣಿ 43100 ರೂ. ನಿಂದ 83900 ರೂ.
ವಿದ್ಯಾರ್ಹತೆ : ಬಿ.ಕಾಂ / ಬಿ.ಎಸ್ಸಿ / ಬಿಬಿಎಂ ಪದವಿ ಜೊತೆಗೆ ಹೆಸರಾಂತ ಸಂಸ್ಥೆಗಳಲ್ಲಿ ಮಾರುಕಟ್ಟೆಯಲ್ಲಿ 03 ವರ್ಷಗಳ ಅನುಭವದೊಂದಿಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.
ಹುದ್ದೆ : ತಾಂತ್ರಿಕ ಅಧಿಕಾರಿ (ಅಭಿಯಂತರ) – ಮೆಕಾನಿಕಲ್
1 ಹುದ್ದೆ ನೇಮಕಾತಿ ಮಾಡಲಾಗುತ್ತಿದೆ – ವೇತನ ಶ್ರೇಣಿ 43100 ರೂ. ನಿಂದ 83900 ರೂ.
ವಿದ್ಯಾರ್ಹತೆ : ಬಿಇ (ಮೆಕಾನಿಕಲ್) ಪದವಿ ಹೊಂದಿರಬೇಕು.
ಹುದ್ದೆ : ತಾಂತ್ರಿಕ ಅಧಿಕಾರಿ (ಅಭಿಯಂತರ) – ಎಲೆಕ್ಟ್ರಿಕಲ್
1 ಹುದ್ದೆ ನೇಮಕಾತಿ ಮಾಡಲಾಗುತ್ತಿದೆ – ವೇತನ ಶ್ರೇಣಿ 43100 ರೂ. ನಿಂದ 83900 ರೂ.
ವಿದ್ಯಾರ್ಹತೆ : ಬಿಇ (ಎಲೆಕ್ಟ್ರಿಕಲ್) ಪದವಿ ಹೊಂದಿರಬೇಕು.
ಹುದ್ದೆ : ತಾಂತ್ರಿಕ ಅಧಿಕಾರಿ (ಗುಣ ನಿಯಂತ್ರಣ) ಕೆಮಿಸ್ಟ್ರಿ
1 ಹುದ್ದೆ ನೇಮಕಾತಿ ಮಾಡಲಾಗುತ್ತಿದೆ – ವೇತನ ಶ್ರೇಣಿ 43100 ರೂ. ನಿಂದ 83900 ರೂ.
ವಿದ್ಯಾರ್ಹತೆ : ಎಂ.ಎಸ್ಸಿ (ಕೆಮಿಸ್ಟ್ರಿ) ಸ್ನಾತಕೋತ್ತರ ಪದವಿಯೊಂದಿಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.
ಹುದ್ದೆ : ತಾಂತ್ರಿಕ ಅಧಿಕಾರಿ (ಗುಣ ನಿಯಂತ್ರಣ) ಮೈಕ್ರೊಬಯಾಲಜಿ
1 ಹುದ್ದೆ ನೇಮಕಾತಿ ಮಾಡಲಾಗುತ್ತಿದೆ – ವೇತನ ಶ್ರೇಣಿ 43100 ರೂ. ನಿಂದ 83900 ರೂ.
ವಿದ್ಯಾರ್ಹತೆ : ಎಂ.ಎಸ್ಸಿ (ಮೈಕ್ರೊಬಯಾಲಜಿ) ಸ್ನಾತಕೋತ್ತರ ಪದವಿಯೊಂದಿಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.
ಹುದ್ದೆ : ತಾಂತ್ರಿಕ ಅಧಿಕಾರಿ (ಡಿಟಿ)
14 ಹುದ್ದೆಗಳ ನೇಮಕಾತಿ ಮಾಡಲಾಗುತ್ತಿದೆ – ವೇತನ ಶ್ರೇಣಿ 43100 ರೂ. ನಿಂದ 83900 ರೂ.
ವಿದ್ಯಾರ್ಹತೆ : ಬಿ.ಟೆಕ್ (ಡೈರಿ ಟೆಕ್ನಾಲಜಿ) ಪದವಿಯೊಂದಿಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.
ಹುದ್ದೆ : ಕೆಮಿಸ್ಟ್ ದರ್ಜೆ 1 (ಕೆಮಿಸ್ಟ್ರಿ)
2 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ – ವೇತನ ಶ್ರೇಣಿ 33450 ರೂ. ನಿಂದ 62600 ರೂ.
ವಿದ್ಯಾರ್ಹತೆ : ಬಿ.ಎಸ್ಸಿ ಪದವಿಯಲ್ಲಿ ಕೆಮಿಸ್ಟ್ರಿ ವಿಷಯವನ್ನು ವ್ಯಾಸಂಗ ಮಾಡಿರಬೇಕು. ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು ಹಾಗೂ ಡೇರಿ / ಆಹಾರ ಸಂಸ್ಕರಣಾ ಘಟಕಗಳಲ್ಲಿ ಕನಿಷ್ಟ 02 ವರ್ಷಗಳ ಅನುಭವ ಹೊಂದಿರಬೇಕು.
ಹುದ್ದೆ : ಕೆಮಿಸ್ಟ್ ದರ್ಜೆ 1 (ಮೈಕ್ರೋಬಯಾಲಜಿ)
2 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ – ವೇತನ ಶ್ರೇಣಿ 33450 ರೂ. ನಿಂದ 62600 ರೂ.
ವಿದ್ಯಾರ್ಹತೆ : ಬಿ.ಎಸ್ಸಿ ಪದವಿಯಲ್ಲಿ ಮೈಕ್ರೊಬಯಾಲಜಿ ವಿಷಯವನ್ನು ವ್ಯಾಸಂಗ ಮಾಡಿರಬೇಕು. ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು ಹಾಗೂ ಡೇರಿ / ಆಹಾರ ಸಂಸ್ಕರಣಾ ಘಟಕಗಳಲ್ಲಿ ಕನಿಷ್ಟ 02 ವರ್ಷಗಳ ಅನುಭವ ಹೊಂದಿರಬೇಕು.
ಹುದ್ದೆ : ವಿಸ್ತರಣಾಧಿಕಾರಿ ದರ್ಜೆ 3
5 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ – ವೇತನ ಶ್ರೇಣಿ 33450 ರೂ. ನಿಂದ 62600 ರೂ.
ವಿದ್ಯಾರ್ಹತೆ : ಯಾವುದೇ ಪದವಿ ಜೊತೆಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನದೊಂದಿಗೆ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ವ್ಯಾಪ್ತಿಯ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕನಿಷ್ಟ 05 ವರ್ಷಗಳ ಸೇವೆ ಸಲ್ಲಿಸಿರಬೇಕು. ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಆ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದು.
ಹುದ್ದೆ : ವಿಸ್ತರಣಾಧಿಕಾರಿ ದರ್ಜೆ 3
12 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ – ವೇತನ ಶ್ರೇಣಿ 33450 ರೂ. ನಿಂದ 62600 ರೂ.
ವಿದ್ಯಾರ್ಹತೆ : ಯಾವುದೇ ಪದವಿಯೊಂದಿಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.
ಹುದ್ದೆ : ಆಡಳಿತ ಸಹಾಯಕ ದರ್ಜ 2
17 ಹುದ್ದೆಗಳಿಗೆ ನೇಮಕಾತಿಯಾಗುತ್ತಿದೆ – ವೇತನ ಶ್ರೇಣಿ 27650 ರೂ. ನಿಂದ 52650 ರೂ.
ವಿದ್ಯಾರ್ಹತೆ : ಯಾವುದೇ ಪದವಿಯೊಂದಿಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು
ಹುದ್ದೆ : ಲೆಕ್ಕ ಸಹಾಯಕ ದರ್ಜೆ 2
12 ಹುದ್ದೆಗಳಿಗೆ ನೇಮಕಾತಿಯಾಗುತ್ತಿದೆ – ವೇತನ ಶ್ರೇಣಿ 27650 ರೂ. ನಿಂದ 52650 ರೂ.
ವಿದ್ಯಾರ್ಹತೆ : ಬಿ.ಕಾಂ ಪದವಿಯೊಂದಿಗೆ ಟ್ಯಾಲಿ ಸರ್ಟಿಫಿಕೇಟ್ ಅಥವಾ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.
ಹುದ್ದೆ : ಲೆಕ್ಕ ಸಹಾಯಕ ದರ್ಜೆ 2
2 ಹುದ್ದೆಗಳಿಗೆ ನೇಮಕಾತಿಯಾಗುತ್ತಿದೆ – ವೇತನ ಶ್ರೇಣಿ 27650 ರೂ. ನಿಂದ 52650 ರೂ.
ವಿದ್ಯಾರ್ಹತೆ : ಬಿ.ಬಿ.ಎಂ ಪದವಿಯೊಂದಿಗೆ ಟ್ಯಾಲಿ ಸರ್ಟಿಫಿಕೇಟ್ ಅಥವಾ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.
ಹುದ್ದೆ : ಮಾರುಕಟ್ಟೆ ಸಹಾಯಕ ದರ್ಜೆ 2
10 ಹುದ್ದೆಗಳಿಗೆ ನೇಮಕಾತಿಯಾಗುತ್ತಿದೆ – ವೇತನ ಶ್ರೇಣಿ 27650 ರೂ. ನಿಂದ 52650 ರೂ.
ವಿದ್ಯಾರ್ಹತೆ : ಬಿಬಿಎಂ / ಬಿ.ಎಸ್ಸಿ / ಬಿ.ಕಾಂ ಪದವಿಯೊಂದಿಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು
ಹುದ್ದೆ : ಕೆಮಿಸ್ಟ್ ದರ್ಜೆ 2 (ಕೆಮಿಸ್ಟ್ರಿ)
4 ಹುದ್ದೆಗಳಿಗೆ ನೇಮಕಾತಿಯಾಗುತ್ತಿದೆ – ವೇತನ ಶ್ರೇಣಿ 27650 ರೂ. ನಿಂದ 52650 ರೂ.
ವಿದ್ಯಾರ್ಹತೆ : ಬಿ.ಎಸ್ಸಿ ಪದವಿಯಲ್ಲಿ ಕೆಮಿಸ್ಟ್ರಿ ಒಂದು ವಿಷಯವನ್ನಾಗಿ ವ್ಯಾಸಂಗ ಮಾಡಿರುವುದರ ಜೊತೆಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು. ಕರ್ನಾಟಕ ಹಾಲು ಮಹಾಮಂಡಳಿ / ಜಿಲ್ಲಾ ಸಹಕಾರ ಹಾಲು ಒಕ್ಕೂಟಗಳಲ್ಲಿ ಕನಿಷ್ಟ 3 ವರ್ಷಗಳ ಸೇವಾನುಭವ ಹೊಂದಿರಬೇಕು. ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಆ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದು.
ಹುದ್ದೆ : ಕೆಮಿಸ್ಟ್ ದರ್ಜೆ 2 (ಮೈಕ್ರೊಬಯಾಲಜಿ)
2 ಹುದ್ದೆಗಳಿಗೆ ನೇಮಕಾತಿಯಾಗುತ್ತಿದೆ – ವೇತನ ಶ್ರೇಣಿ 27650 ರೂ. ನಿಂದ 52650 ರೂ.
ವಿದ್ಯಾರ್ಹತೆ : ಬಿ.ಎಸ್ಸಿ ಪದವಿಯಲ್ಲಿ ಮೈಕ್ರೊಬಯಾಲಜಿ ಒಂದು ವಿಷಯವನ್ನಾಗಿ ವ್ಯಾಸಂಗ ಮಾಡಿರುವುದರ ಜೊತೆಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು ಹಾಗೂ ಕರ್ನಾಟಕ ಹಾಲು ಮಹಾಮಂಡಳಿ / ಜಿಲ್ಲಾ ಸಹಕಾರ ಹಾಲು ಒಕ್ಕೂಟಗಳಲ್ಲಿ ಕನಿಷ್ಟ 3 ವರ್ಷ ಸೇವಾನುಭವ ಹೊಂದಿರಬೇಕು. ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಆ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದು.
ಹುದ್ದೆ : ಕೆಮಿಸ್ಟ್ ದರ್ಜೆ 2 (ಕೆಮಿಸ್ಟ್ರಿ)
16 ಹುದ್ದೆಗಳಿಗೆ ನೇಮಕಾತಿಯಾಗುತ್ತಿದೆ – ವೇತನ ಶ್ರೇಣಿ 27650 ರೂ. ನಿಂದ 52650 ರೂ.
ವಿದ್ಯಾರ್ಹತೆ : ಬಿ.ಎಸ್ಸಿ ಪದವಿಯಲ್ಲಿ ಕೆಮಿಸ್ಟ್ರಿ ಒಂದು ವಿಷಯವನ್ನಾಗಿ ವ್ಯಾಸಂಗ ಮಾಡಿರುವುದರ ಜೊತೆಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.
ಹುದ್ದೆ : ಕೆಮಿಸ್ಟ್ ದರ್ಜೆ 2 (ಮೈಕ್ರೊಬಯಾಲಜಿ)
6 ಹುದ್ದೆಗಳಿಗೆ ನೇಮಕಾತಿಯಾಗುತ್ತಿದೆ – ವೇತನ ಶ್ರೇಣಿ 27650 ರೂ. ನಿಂದ 52650 ರೂ.
ವಿದ್ಯಾರ್ಹತೆ : ಬಿ.ಎಸ್ಸಿ ಪದವಿಯಲ್ಲಿ ಮೈಕ್ರೊಬಯಾಲಜಿ ವಿಷಯವನ್ನಾಗಿ ವ್ಯಾಸಂಗ ಮಾಡಿರುವುದರ ಜೊತೆಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.
ಹುದ್ದೆ : ಕಿರಿಯ ಸಿಸ್ಟಂ ಆಪರೇಟರ್
3 ಹುದ್ದೆಗಳಿಗೆ ನೇಮಕಾತಿಯಾಗುತ್ತಿದೆ – ವೇತನ ಶ್ರೇಣಿ 27650 ರೂ. ನಿಂದ 52650 ರೂ.
ವಿದ್ಯಾರ್ಹತೆ : ಯಾವುದೇ ಪದವಿಯೊಂದಿಗೆ ಕನಿಷ್ಟ ಒಂದು ವರ್ಷದ ಡಿಪ್ಲೊಮಾ ಇನ್ ಕಂಪ್ಯೂಟರ್ ಅಪ್ಲಿಕೇಷನ್ ಕೋರ್ಸ್. ಕರ್ನಾಟಕ ಹಾಲು ಮಹಾಮಂಡಳಿ / ಜಿಲ್ಲಾ ಸಹಕಾರ ಹಾಲು ಒಕ್ಕೂಟಗಳಲ್ಲಿ ಕನಿಷ್ಟ 3 ವರ್ಷಗಳ ಸೇವಾನುಭವ ಹೊಂದಿರಬೇಕು. ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಆ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದು.
ಹುದ್ದೆ : ಕಿರಿಯ ಸಿಸ್ಟಂ ಆಪರೇಟರ್
10 ಹುದ್ದೆಗಳಿಗೆ ನೇಮಕಾತಿಯಾಗುತ್ತಿದೆ – ವೇತನ ಶ್ರೇಣಿ 27650 ರೂ. ನಿಂದ 52650 ರೂ.
ವಿದ್ಯಾರ್ಹತೆ : ಯಾವುದೇ ಪದವಿಯೊಂದಿಗೆ ಕನಿಷ್ಟ ಒಂದು ವರ್ಷದ ಡಿಪ್ಲೊಮಾ ಇನ್ ಕಂಪ್ಯೂಟರ್ ಅಪ್ಲಿಕೇಷನ್ ಕೋರ್ಸ್ ಹಾಗೂ 3 ವರ್ಷಗಳ ಅನುಭವ ಹೊಂದಿರಬೇಕು.
ಹುದ್ದೆ : ಶ್ರೀಘ್ರಲಿಪಿಗಾರರು ದರ್ಜೆ 2
1 ಹುದ್ದೆಗೆ ನೇಮಕಾತಿಯಾಗುತ್ತಿದೆ – ವೇತನ ಶ್ರೇಣಿ 27650 ರೂ. ನಿಂದ 52650 ರೂ.
ವಿದ್ಯಾರ್ಹತೆ : ಯಾವುದೇ ಪದವಿಯೊಂದಿಗೆ ಸೀನಿಯರ್ ಇಂಗ್ಲೀಷ್ ಮತ್ತು ಕನ್ನಡ ಶಾರ್ಟ್ ಹ್ಯಾಂಡ್‍ನೊಂದಿಗೆ ಕಂಪ್ಯೂಟರ್ ಆಫೀಸ್ ಪ್ಯಾಕೇಜ್ ನಿರ್ವಹಣೆ ಜ್ಞಾನ ಹೊಂದಿರಬೇಕು.
ಹುದ್ದೆ : ಕಿರಿಯ ತಾಂತ್ರಿಕರು (ಎಲೆಕ್ಟ್ರಿಕಲ್)
5 ಹುದ್ದೆಗಳಿಗೆ ನೇಮಕಾತಿಯಾಗುತ್ತಿದೆ – ವೇತನ ಶ್ರೇಣಿ 21400 ರೂ. ನಿಂದ 42000 ರೂ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ ಯೊಂದಿಗೆ ಡೈರೆಕ್ಟೋರೇಟ್ ಜನರಲ್ ಆಫ್ ಎಂಪ್ಲಾಯ್‍ಮೆಂಟ್ ಅಂಡ್ ಟ್ರೈನಿಂಗ್ ಇವರಿಂದ ಎಲೆಕ್ಟ್ರಿಕಲ್ ಟ್ರೇಡ್‍ನಲ್ಲಿ ತೇರ್ಗಡೆ ಹೊಂದಿ ಕಡ್ಡಾಯವಾಗಿ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ (ಎನ್.ಟಿ.ಸಿ) ಅಥವಾ ಪ್ರಾವಿಜನಲ್ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ಅಥವಾ ನ್ಯಾಷನಲ್ ಕೌನ್ಸಿಲ್ ಫಾರ್ ವೆಕೇಷನಲ್ ಟ್ರೈನಿಂಗ್ (ಎನ್.ಸಿ.ವಿ.ಟಿ) ಸರ್ಟಿಫಿಕೇಟ್ ಪಡೆದಿರಬೇಕು ಹಾಗೂ ಕರ್ನಾಟಕ ಹಾಲು ಮಹಾಮಂಡಳಿ / ಜಿಲ್ಲಾ ಸಹಕಾರ ಹಾಲು ಒಕ್ಕೂಟಗಳಲ್ಲಿ ಕನಿಷ್ಟ 03 ವರ್ಷಗಳ ಸೇವಾನುಭವ ಹೊಂದಿರಬೇಕು. ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಆ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದು.
ಹುದ್ದೆ : ಕಿರಿಯ ತಾಂತ್ರಿಕರು (ಎಲೆಕ್ಟ್ರಿಕಲ್)
20 ಹುದ್ದೆಗಳಿಗೆ ನೇಮಕಾತಿಯಾಗುತ್ತಿದೆ – ವೇತನ ಶ್ರೇಣಿ 21400 ರೂ. ನಿಂದ 42000 ರೂ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ ಯೊಂದಿಗೆ ಡೈರೆಕ್ಟೋರೇಟ್ ಜನರಲ್ ಆಫ್ ಎಂಪ್ಲಾಯ್‍ಮೆಂಟ್ ಅಂಡ್ ಟ್ರೈನಿಂಗ್ ಇವರಿಂದ ಎಲೆಕ್ಟ್ರಿಕಲ್ ಟ್ರೇಡ್‍ನಲ್ಲಿ ತೇರ್ಗಡೆ ಹೊಂದಿ ಕಡ್ಡಾಯವಾಗಿ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ (ಎನ್.ಟಿ.ಸಿ) ಅಥವಾ ಪ್ರಾವಿಜನಲ್ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ಅಥವಾ ನ್ಯಾಷನಲ್ ಕೌನ್ಸಿಲ್ ಫಾರ್ ವೆಕೇಷನಲ್ ಟ್ರೈನಿಂಗ್ (ಎನ್.ಸಿ.ವಿ.ಟಿ) ಸರ್ಟಿಫಿಕೇಟ್ ಪಡೆದಿರಬೇಕು.
ಹುದ್ದೆ : ಕಿರಿಯ ತಾಂತ್ರಿಕರು (ರೆಫ್ರಿಜರೇಷನ್ ಎಂ.ಆರ್.ಎ.ಸಿ)
2 ಹುದ್ದೆಗಳಿಗೆ ನೇಮಕಾತಿಯಾಗುತ್ತಿದೆ – ವೇತನ ಶ್ರೇಣಿ 21400 ರೂ. ನಿಂದ 42000 ರೂ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ ಯೊಂದಿಗೆ ಡೈರೆಕ್ಟೋರೇಟ್ ಜನರಲ್ ಆಫ್ ಎಂಪ್ಲಾಯ್‍ಮೆಂಟ್ ಅಂಡ್ ಟ್ರೈನಿಂಗ್ ಇವರಿಂದ ರೆಫ್ರಿಜರೇಷನ್(ಎಂ.ಆರ್.ಎ.ಸಿ) ಟ್ರೇಡ್‍ನಲ್ಲಿ ತೇರ್ಗಡೆ ಹೊಂದಿ ಕಡ್ಡಾಯವಾಗಿ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ (ಎನ್.ಟಿ.ಸಿ) ಅಥವಾ ಪ್ರಾವಿಜನಲ್ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ಅಥವಾ ನ್ಯಾಷನಲ್ ಕೌನ್ಸಿಲ್ ಫಾರ್ ವೆಕೇಷನಲ್ ಟ್ರೈನಿಂಗ್ (ಎನ್.ಸಿ.ವಿ.ಟಿ) ಸರ್ಟಿಫಿಕೇಟ್ ಪಡೆದಿರಬೇಕು ಹಾಗೂ ಕರ್ನಾಟಕ ಹಾಲು ಮಹಾಮಂಡಳಿ / ಜಿಲ್ಲಾ ಸಹಕಾರ ಹಾಲು ಒಕ್ಕೂಟಗಳಲ್ಲಿ ಕನಿಷ್ಟ 03 ವರ್ಷಗಳ ಸೇವಾನುಭವ ಹೊಂದಿರಬೇಕು. ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಆ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದು.
ಹುದ್ದೆ : ಕಿರಿಯ ತಾಂತ್ರಿಕರು (ರೆಫ್ರಿಜರೇಷನ್)
8 ಹುದ್ದೆಗಳಿಗೆ ನೇಮಕಾತಿಯಾಗುತ್ತಿದೆ – ವೇತನ ಶ್ರೇಣಿ 21400 ರೂ. ನಿಂದ 42000 ರೂ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ ಯೊಂದಿಗೆ ಡೈರೆಕ್ಟೋರೇಟ್ ಜನರಲ್ ಆಫ್ ಎಂಪ್ಲಾಯ್‍ಮೆಂಟ್ ಅಂಡ್ ಟ್ರೈನಿಂಗ್ ಇವರಿಂದ ರೆಫ್ರಿಜರೇಷನ್ (ಎಂ.ಆರ್.ಎ.ಸಿ)ಟ್ರೇಡ್‍ನಲ್ಲಿ ತೇರ್ಗಡೆ ಹೊಂದಿ ಕಡ್ಡಾಯವಾಗಿ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ (ಎನ್.ಟಿ.ಸಿ) ಅಥವಾ ಪ್ರಾವಿಜನಲ್ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ಅಥವಾ ನ್ಯಾಷನಲ್ ಕೌನ್ಸಿಲ್ ಫಾರ್ ವೆಕೇಷನಲ್ ಟ್ರೈನಿಂಗ್ (ಎನ್.ಸಿ.ವಿ.ಟಿ) ಸರ್ಟಿಫಿಕೇಟ್ ಪಡೆದಿರಬೇಕು.
ಹುದ್ದೆ : ಕಿರಿಯ ತಾಂತ್ರಿಕರು (ಬಾಯ್ಲರ್ ಅಟೆಂಡೆಂಟ್)
15 ಹುದ್ದೆಗಳಿಗೆ ನೇಮಕಾತಿಯಾಗುತ್ತಿದೆ – ವೇತನ ಶ್ರೇಣಿ 21400 ರೂ. ನಿಂದ 42000 ರೂ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ ಯೊಂದಿಗೆ ನಿರ್ದೇಶಕರು, ಬಾಯ್ಲರ್ ಮತ್ತು ಕಾರ್ಖಾನೆ ಇವರಿಂದ ಬಾಯ್ಲರ್ ಅಟೆಂಡೆಂಟ್ ದರ್ಜೆ-2 ರ ಪ್ರಮಾಣ ಪತ್ರ ಪಡೆದಿರಬೇಕು ಅಥವಾ ಎಸ್.ಎಸ್.ಎಲ್.ಸಿ ಯೊಂದಿಗೆ ಬಾಯ್ಲರ್ ಅಟೆಂಡೆಂಟ್ ಟ್ರೇಡ್‍ನಲ್ಲಿ ಪ್ರಾವಿಜನಲ್ / ನ್ಯಾಷನಲ್ ಶಿಶಿಕ್ಷು ಪ್ರಮಾಣ ಪತ್ರ ಹೊಂದಿರಬೇಕು ಹಾಗೂ ಕರ್ನಾಟಕ ಹಾಲು ಮಹಾಮಂಡಳಿ / ಜಿಲ್ಲಾ ಸಹಕಾರ ಹಾಲು ಒಕ್ಕೂಟಗಳಲ್ಲಿ ಕನಿಷ್ಟ 03 ವರ್ಷಗಳ ಸೇವಾನುಭವ ಹೊಂದಿರಬೇಕು. ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಆ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದು.
ಹುದ್ದೆ : ಕಿರಿಯ ತಾಂತ್ರಿಕರು (ಬಾಯ್ಲರ್ ಅಟೆಂಡೆಂಟ್)
12 ಹುದ್ದೆಗಳಿಗೆ ನೇಮಕಾತಿಯಾಗುತ್ತಿದೆ – ವೇತನ ಶ್ರೇಣಿ 21400 ರೂ. ನಿಂದ 42000 ರೂ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ ಯೊಂದಿಗೆ ನಿರ್ದೇಶಕರು, ಬಾಯ್ಲರ್ ಮತ್ತು ಕಾರ್ಖಾನೆ ಇವರಿಂದ ಬಾಯ್ಲರ್ ಅಟೆಂಡೆಂಟ್ ದರ್ಜೆ-2 ರ ಪ್ರಮಾಣ ಪತ್ರ ಪಡೆದಿರಬೇಕು ಅಥವಾ ಎಸ್.ಎಸ್.ಎಲ್.ಸಿ ಯೊಂದಿಗೆ ಬಾಯ್ಲರ್ ಅಟೆಂಡೆಂಟ್ ಟ್ರೇಡ್‍ನಲ್ಲಿ ಪ್ರಾವಿಜನಲ್ / ನ್ಯಾಷನಲ್ ಶಿಶಿಕ್ಷು ಪ್ರಮಾಣ ಪತ್ರ ಹೊಂದಿರಬೇಕು.
ಅರ್ಜಿ ಸಲ್ಲಿಸುವುದು ಹೇಗೆ? ಶುಲ್ಕ ಎಷ್ಟು? ಎಲ್ಲದರ ಮಾಹಿತಿಗೆ ಇಲ್ಲಿರುವ ಲಿಂಕ್ ಕ್ಲಿಕ್ ಮಾಡಿ.
https://virtualofficeerp.com/shimul_2023/instruction