ಶಿವಮೊಗ್ಗದಲ್ಲಿ ಮುಗಿಬಿದ್ದು ಫೈನ್‌ ಕಟ್ಟಿದ ಜನ, ಕೊನೆ ದಿನ ಸಂಗ್ರಹವಾಯ್ತು ₹50 ಲಕ್ಷ ದಂಡ, ಒಟ್ಟು ಎಷ್ಟಾಗಿದೆ?

ಶಿವಮೊಗ್ಗ: ರಿಯಾಯತಿ ದರದಲ್ಲಿ ಟ್ರಾಫಿಕ್‌ ಫೈನ್‌ (Traffic Fine) ಕಟ್ಟಲು ಕೊನೆಯ ದಿನವಾದ್ದರಿಂದ ಶಿವಮೊಗ್ಗದಲ್ಲಿ ಶುಕ್ರವಾರ ಜನರು ಕ್ಯೂನಲ್ಲಿ ನಿಂತು ತಡರಾತ್ರಿವರೆಗೆ ದಂಡ ಕಟ್ಟಿದ್ದಾರೆ. ಶಿವಮೊಗ್ಗ ಸಿಟಿಯ ವಿವಿಧೆಡೆ ಬೆಳಗ್ಗೆಯಿಂದಲೇ ಸಂಚಾರ ಠಾಣೆ ಪೊಲೀಸರ ಬಳಿ ಹೋಗಿ ಜನರು ದಂಡ ಪಾವತಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ದಂಡ ಕಟ್ಟಲು ಬಂದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಹಾಗಾಗಿ ಬಹುತೇಕ ಕಡೆಗಳಲ್ಲಿ ಪೊಲೀಸರು ಜನರನ್ನು ಕ್ಯೂನಲ್ಲಿ ನಿಲ್ಲಿಸಿದ್ದರು. ರಸ್ತೆಗಳು, ಸರ್ಕಲ್‌ಗಳಲ್ಲಿ ಜನರು ಕ್ಯೂನಲ್ಲಿ ನಿಂತು ಶೇ.50ರ ರಿಯಾಯಿತಿ ದರದಲ್ಲಿ ದಂಡ ಪಾವತಿಸಿದರು.

ತಡರಾತ್ರಿಯಾದರು ತಗ್ಗದ ಜನ

ಇನ್ನು, ಕೆಲಸ ಮುಗಿಸಿ ರಾತ್ರಿ ಮನೆಗೆ ಮರಳುವವರು ಪೊಲೀಸರ ಬಳಿ ದಂಡ ಪಾವತಿಸಿದ್ದಾರೆ. ಹಾಗಾಗಿ ರಾತ್ರಿ ಬಹು ಹೊತ್ತಿನ ತನಕ ಟ್ರಾಫಿಕ್‌ ಪೊಲೀಸು ಫೈನ್‌ ಹಣ ಸಂಗ್ರಹಿಸುತ್ತಲೆ ಇದ್ದರು. ಸಂಚಾರ ಠಾಣೆಗೆ ತೆರಳಿಯು ಜನರು ದಂಡದ ಮೊತ್ತ ಕಟ್ಟಿ ಬಂದಿದ್ದಾರೆ.

Traffic Fine in Shimoga
ಶಿವಮೊಗ್ಗದ ಗೋಪಿ ವೃತ್ತದಲ್ಲಿ ದಂಡ ಕಟ್ಟುತ್ತಿರುವ ಜನರು.

ಒಟ್ಟು ಸಂಗ್ರಹವಾದ ದಂಡವೆಷ್ಟು?

ಶಿವಮೊಗ್ಗ ಜಿಲ್ಲೆಯಲ್ಲಿ ಶುಕ್ರವಾರ 11,918 ಪ್ರಕರಣಗಳ ₹50,44,250 ದಂಡ ಸಂಗ್ರಹಿಸಲಾಗಿದೆ. ರಿಯಾಯಿತಿ ಘೋಷಣೆಯಾದಾಗಿನಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಸಂಗ್ರಹವಾದ ಗರಿಷ್ಠ ಮೊತ್ತ ಇದಾಗಿದೆ. ಇನ್ನು, ಆ.23 ರಿಂದ ಸೆ.12ರವರೆಗೆ 50,451 ಪ್ರಕರಣಗಳಲ್ಲಿ ಒಟ್ಟು ₹2.09 ಕೋಟಿ ದಂಡ ಸಂಗ್ರಹಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಯಾವ್ಯಾವ ದಿನ ಎಷ್ಟು ದಂಡ ಸಂಗ್ರಹಿಸಲಾಗಿದೆ ಎಂಬ ವಿವರ ಇಲ್ಲಿದೆ.

Kalleshwara-Enterprises.webp

WhatsApp%20Image%202025 09 13%20at%207.18.18%20AM

Traffic Fine in Shimoga
ಗಾಂಧಿ ಬಜಾರ್‌ ಸಮೀಪ ಪೊಲೀಸ್‌ ಚೌಕಿಯಲ್ಲಿ ದಂಡ ಕಟ್ಟಲು ಮುಗಿಬಿದ್ದ ಜನ.
Traffic Fine in Shimoga
ಶಿವಮೊಗ್ಗ ಸಂಚಾರ ಠಾಣೆಯಲ್ಲಿ ರಾತ್ರಿ ದಂಡ ಕಟ್ಟುತ್ತಿರುವ ಜನರು.
Traffic Fine in Shimoga
ಎ.ಎ.ವೃತ್ತದಲ್ಲಿ ರಾತ್ರಿ ಸರತಿಯಲ್ಲಿ ನಿಂತಿರುವ ಜನ.

JNNCE-Admission-Advt-scaled

ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಗೆ ಮತ್ತೆ ಮಳೆ ಮುನ್ಸೂಚನೆ, ಇವತ್ತು ಎಲ್ಲೆಲ್ಲಿ ಎಷ್ಟಿರುತ್ತೆ ಉಷ್ಣಾಂಶ?

Prashanth-Loan-Advertisement.

₹50 lakh traffic fine collected in Shimoga district

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment