ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಬಾಲ ಕಾರ್ಮಿಕನ ರಕ್ಷಣೆ, ಮಾಲೀಕನ ವಿರುದ್ಧ ಕೇಸ್

BHADRAVATHI : ಪಟ್ಟಣದ ವಿವಿಧೆಡೆ ಬಾಲ ಕಾರ್ಮಿಕ ಪದ್ಧತಿ ವಿರುದ್ಧ ಜಾಗೃತಿ ಮೂಡಿಸುವ ವೇಳೆ ಇಂಜಿನಿಯರಿಂಗ್ ವರ್ಕ್ಸ್ ಒಂದರಲ್ಲಿ ಬಾಲ ಕಾರ್ಮಿಕ ಪತ್ತೆಯಾಗಿದ್ದಾನೆ. ಕೂಡಲೆ ಆತನ ರಕ್ಷಣೆ ಮಾಡಿರುವ ಅಧಿಕಾರಿಗಳು ಇಂಜಿನಿಯರಿಂಗ್ ವರ್ಕ್ಸ್‌ನ ಮಾಲೀಕನ ವಿರುದ್ಧ ದೂರು ನೀಡಿದ್ದಾರೆ. ಭದ್ರಾವತಿಯ ಗಾಂಧಿ ಸರ್ಕಲ್, ಟಿ.ಕೆ.ರಸ್ತೆ ಸುತ್ತಮುತ್ತಲು ಕಾರ್ಮಿಕ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಜಾಗೃತಿ ಕಾರ್ಯ ನಡೆಸುತ್ತಿದ್ದರು. ಘಟನೆ ಸಂಬಂಧ ಮೊಹಮ್ಮದ್ ಅನ್ಸರ್ ಎಂಬುವವರ ವಿರುದ್ಧ ಭದ್ರಾವತಿ ಓಲ್ಡ್ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಂದಿನ ಸುದ್ದಿ ಓದಲು ಕೆಳಗಿರುವ NEXT ಬಟನ್ ಕ್ಲಿಕ್ ಮಾಡಿ







