ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 31 JULY 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಬಾಕಿ ಹಣ ಕೇಳಿದ್ದಕ್ಕೆ ಬಾರ್ನಲ್ಲಿ ಕಿರಿಕ್, ಕಬ್ಬಿಣದ ಚೇರ್ನಿಂದ ಹಲ್ಲೆ
SHIMOGA : ಟಿವಿ, ಸ್ಟೇಬಲೈಸರ್ ಮಾರಾಟ ಮಾಡಿದ್ದು ಅದರ ಹಣ ಹಿಂತಿರುಗಿಸುವಂತೆ ಕೇಳಿದ್ದಕ್ಕೆ ವ್ಯಕ್ತಿಯೊಬ್ಬನ ಮೇಲೆ ಕಬ್ಬಿಣದ ಚೇರ್ನಿಂದ ಹಲ್ಲೆ (Assault) ನಡೆಸಿದ ಆರೋಪ ಕೇಳಿ ಬಂದಿದೆ. ನ್ಯೂ ಮಂಡ್ಲಿ ಗಂಧರ್ವನಗರದ ಚಾಲಕ ರವಿಕುಮಾರ್ ಮೇಲೆ ಹಲ್ಲೆಯಾಗಿದೆ. ತೌಸು ಎಂಬಾತನಿಗೆ ರವಿಕುಮಾರ್ ಟಿವಿ ಮತ್ತು ಸ್ಟೇಬಲೈಸರ್ ಮಾರಾಟ ಮಾಡಿದ್ದರು. 4 ಸಾವಿರ ರೂ. ಕೊಡಬೇಕಿದ್ದ ತೌಸು 1 ಸಾವಿರ ರೂ. ಮಾತ್ರ ನೀಡಿದ್ದ. 10 ದಿನ ಕಳೆದರು ಬಾಕಿ 3 ಸಾವಿರ ರೂ. ಹಣ ಕೊಟ್ಟಿರಲಿಲ್ಲ. ಜು.28ರಂದು ತೌಸು ಓ.ಟಿ.ರಸ್ತೆಯ ಬಾರ್ನಲ್ಲಿದ್ದಾಗ ರವಿಕುಮಾರ್ ಹಣ ಕೇಳಿದ್ದಾರೆ. ಆಗ ತೌಸು ಅವಾಚ್ಯವಾಗಿ ನಿಂದಿಸಿದ್ದು, ಆತನ ಜೊತೆಗಿದ್ದವನು ಕಬ್ಬಿಣದ ಚೇರ್ನಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಇದನ್ನೂ ಓದಿ – ಕೊಡಚಾದ್ರಿ ಪ್ರವಾಸಿಗರಿಗೆ ಶಾಕ್ ನೀಡಿದ ವನ್ಯಜೀವಿ ವಿಭಾಗ, ಇವತ್ತಿನಿಂದ ಪ್ರವೇಶ ನಿಷೇಧ
ಶಂಕಿತರನ್ನು ಶಿವಮೊಗ್ಗ, ತೀರ್ಥಹಳ್ಳಿಗೆ ಕರೆತಂದ ಎನ್ಐಎ
SHIMOGA : ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ಮಹಜರ್ ನಡೆಸಲು ಮೂವರು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಶಿವಮೊಗ್ಗ, ತೀರ್ಥಹಳ್ಳಿಗೆ ಕರೆ ತಂದಿದ್ದಾರೆ. ಶಂಕಿತ ಮಾಝ್, ಶಾರೀಖ್ ಮತ್ತು ಯಾಸೀನ್ನನ್ನು ಮೂರು ದಿನದ ಹಿಂದೆ ಶಿವಮೊಗ್ಗಕ್ಕೆ ಕರೆತಂದು ವಿವಿಧೆಡೆ ಮಹಜರ್ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ತೀರ್ಥಹಳ್ಳಿಯಲ್ಲಿ ಈ ಮೂವರು ಸಭೆ ನಡೆಸಿದ್ದಾರೆ ಎನ್ನಲಾದ ಸ್ಥಳಕ್ಕು ಕರೆದೊಯ್ಯಲಾಗಿತ್ತು. ಆರೋಪಿಗಳು ಸ್ಪೋಟಕ ತಯಾರಿಸಿ ತುಂಗಾ ನದಿ ತೀರದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಿದ್ದರು ಎಂಬ ಆರೋಪವಿದೆ.
ಇದನ್ನೂ ಓದಿ – ಜಲಪಾತದ ಬಳಿ ಶರತ್ ಮೃತದೇಹ ಪತ್ತೆ, ಮನೆಗೆ ಬಂದ ಸಂಸದ ರಾಘವೇಂದ್ರಗೆ ಕುಟುಂಬದಿಂದ ‘ಒಂದು ಮನವಿʼ
ಅಪರಿಚಿತ ವಾಹನ ಡಿಕ್ಕಿ ವ್ಯಕ್ತಿ ಸಾವು
THIRTHAHALLI : ಅಪರಿಚಿತ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸಾವನ್ನಪ್ಪಿದ್ದಾರೆ. ತೀರ್ಥಹಳ್ಳಿಯ ಶಿವರಾಜಪುರ ರಾಷ್ಟ್ರೀಯ ಹೆದ್ದಾರಿ ಬಸ್ ತಂಗುದಾಣದ ಬಳಿ ಘಟನೆ ಸಂಭವಿಸಿದೆ. ಶಿವರಾಜಪುರದ ಮಹೇಶ್ (32) ಮೃತ ದುರ್ದೈವಿ. ಶನಿವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿಯಾಗಿ ಮಹೇಶ್ ಗಂಭೀರ ಗಾಯಗೊಂಡಿದ್ದರು. ಕೂಡಲೆ ಅವರನ್ನು ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ರವಾನಿಸಲಾಯಿತು. ಅಷ್ಟರಲ್ಲಾಗಲೆ ಮಹೇಶ್ ಕೊನೆಯುಸಿರೆಳೆದಿದ್ದರು.