ಆಸ್ಪತ್ರೆ ಅಥವಾ ವೈದ್ಯರ ವಿರುದ್ಧ ಕೇಸ್‌ ದಾಖಲಿಸುವ ಎಚ್ಚರಿಕೆ | ಪರಿಹಾರ ನಿಗದಿಗೆ ಸಭೆ | ತೂಕದ ಯಂತ್ರ ಹರಾಜು

FATAFAT-NEWS-BAND.webp

ಎಲೆಕ್ಟ್ರಾನಿಕ್‌ ತೂಕದ ಯಂತ್ರ ಬಹಿರಂಗ ಹರಾಜು

SHIMOGA-NEWS-FATAFAT.webp

SHIMOGA : ಅಕ್ರಮವಾಗಿ ಇರಿಸಿಕೊಂಡಿದ್ದ ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ಪತ್ತೆಹಚ್ಚಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಅಗತ್ಯ ವಸ್ತುಗಳ ಕಾಯ್ದೆಯಡಿ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು.  ಈ ತೂಕದ ಯಂತ್ರವನ್ನು ಫೆ. 16 ರಂದು ಬೆಳಿಗ್ಗೆ 11.30 ಕ್ಕೆ ಶಿವಮೊಗ್ಗ ಗೋಪಾಳದ ಅನೌಪಚಾರಿಕ ಪಡಿತರ ಪ್ರದೇಶ, ಸಹಾಯಕ ನಿರ್ದೇಶಕರ ಸಮಕ್ಷಮ ಬಹಿರಂಗ ಹರಾಜು ಮಾಡಲಾಗುವುದು. ಹರಾಜಿನಲ್ಲಿ ಭಾಗವಹಿಸಲು ಆಸಕ್ತರಿರುವ ಎಪಿಎಂಸಿ ಪರವಾನಗಿ ಹೊಂದಿರುವ ಬಿಡ್ಡುದಾರರು ಷರತ್ತುಗಳಿಗೆ ಒಳಪಟ್ಟು ಭದ್ರತಾ ಠೇವಣಿ ಪಾವತಿಸಿ ಗೊತ್ತುಪಡಿಸಿದ ದಿನಾಂಕದಂದು ಒಂದು ಗಂಟೆ ಮುಂಚಿತವಾಗಿ ಹಾಜರಿದ್ದು, ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ – ರಾತ್ರಿ ಗಲಾಟೆ ವೇಳೆ ಪಿಸ್ತೂಲು ಪ್ರದರ್ಶನ, ಜನರಲ್ಲಿ ಆತಂಕ, ಪೊಲೀಸರ ಮುಂದೆ ಪಿಸ್ತೂಲ್‌ನ ಅಸಲಿ ಕಥೆ ಬಹಿರಂಗ

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment