ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
SHIVAMOGGA LIVE NEWS | 7 AUGUST 2023
ಸುತ್ತುಕೋಟೆಯಲ್ಲಿ ರಸ್ತೆ ದಾಟುವಾಗ ಬೈಕ್ ಡಿಕ್ಕಿ
SHIMOGA : ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರಿಗೆ ಸುತ್ತುಕೋಟೆ ಬಳಿ ಬೈಕ್
ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದಾರೆ. ಶಿಕಾರಿಪುರ ತಾಲೂಕು ಹಾರೋಗೊಪ್ಪ ಗ್ರಾಮದ ಚಂದ್ರಾನಾಯ್ಕ್ ಗಾಯಗೊಂಡಿದ್ದಾರೆ. ಸುತ್ತುಕೋಟೆಯಲ್ಲಿ ಅಂಗಡಿಗೆ ತೆರಳಲು ರಸ್ತೆ ದಾಟುವಾಗ ಘಟನೆ ಸಂಭವಿಸಿದೆ. ವೇಗವಾಗಿ ಬಂದ ಸ್ಪ್ಲೆಂಡರ್ ಪ್ಲಸ್ ಬೈಕ್ ಡಿಕ್ಕಿ ಹೊಡೆದಿದೆ. ಚಂದ್ರಾನಾಯ್ಕ್ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಕು ನಾಯಿ ವಿಚಾರಕ್ಕೆ ಜಗಳ, ಸಹೋದರಿಯರ ಮೇಲೆ ಹಲ್ಲೆ
BHADRAVATHI : ಮನೆಯೊಂದರ ಮುಂದೆ ಸಾಕು ನಾಯಿ ಗಲೀಜು
ಮಾಡಿದ ವಿಚಾರಕ್ಕೆ ಜಗಳವಾಗಿ ಸಹೋದರಿಯರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಶಿಕ್ಷಕಿ ಸೌಮ್ಯಾ ಮತ್ತು ಆಕೆಯ ಸಹೋದರಿ ಕಾವ್ಯಾ ಎಂಬುವವರ ಮೇಲೆ ಹಲ್ಲೆ ನಡೆಸಲಾಗಿದೆ. ಸಹೋದರಿಯರು ಸಾಕಿದ್ದ ನಾಯಿ ಮನೆಯೊಂದರ ಮುಂದೆ ಗಲೀಜು ಮಾಡಿತ್ತು. ಇದೆ ವಿಚಾರವಾಗಿ ಜಗಳವಾಗಿತ್ತು. ಭದ್ರಾವತಿ ತಾಲೂಕು ಕಡದಕಟ್ಟೆಯಲ್ಲಿ ಘಟನೆ ಸಂಭವಿಸಿದೆ. ಹಲ್ಲೆ ನಡೆಸಿದ ಆರೋಪ ಸಂಬಂಧ ಮೂವರ ವಿರುದ್ಧ ಭದ್ರಾವತಿ ನ್ಯೂ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಟೀ ಗ್ಲಾಸ್‌ನಿಂದ ಕ್ಯಾಂಟೀನ್ ಮಾಲೀಕನ ತಲೆಗೆ ಹೊಡೆದು, ಡಿಚ್ಚಿ ಕೊಟ್ಟ ಗ್ರಾಹಕ, ಕಾರಣವೇನು?

ಗಾಂಜಾ ಸೇವಿಸಿದ್ದ ಸಹಕಾರ ಸೊಸೈಟಿ ಬ್ಯಾಂಕ್ ಉದ್ಯೋಗಿ ಅರೆಸ್ಟ್
BHADRAVATHI : ನಡುರಸ್ತೆಯಲ್ಲಿ ಅಸಭ್ಯವಾಗಿ ವರ್ತಿಸುತ್ತ,
ಅವಾಚ್ಯವಾಗಿ ಬೈದಾಡುತ್ತಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೆ ಆತನ ಗಾಂಜಾ ಸೇವನೆ ಮಾಡಿರುವುದು ಗೊತ್ತಾಗಿದೆ. ಭದ್ರಾವತಿಯ ಸಹಕಾರಿ ಸೊಸೈಟಿ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿರುವ ಬೆಂಗಳೂರು ಮೂಲದ ವಿಘ್ನೆಶ್ ಎಂಬಾತನನ್ನು ಬಂಧಿಸಲಾಗಿದೆ. ಭದ್ರಾವತಿಯ ನ್ಯೂ ಟೌನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
.jpeg)






