ಪೊಲೀಸ್‌ ಠಾಣೆಯಲ್ಲಿ ರಕ್ತದಾನ ಶಿಬಿರ | ಶಿಕಾರಿಪುರದಲ್ಲಿ ಕಾಡಾನೆ ಪ್ರತ್ಯಕ್ಷ | ಶಿವಮೊಗ್ಗದಲ್ಲಿ ರಾಗ ಅನುರಾಗ

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

⇒ ಪೂರ್ತಿ ಡಿಟೇಲ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS | 11 DECEMBER 2023

ಪೊಲೀಸ್‌ ಠಾಣೆಯಲ್ಲಿ ರಕ್ತದಾನ ಶಿಬಿರ

Speed News 1HOLEHONNURU : ಪೊಲೀಸ್‌ ಇಲಾಖೆ ಮತ್ತು ಮೆಗ್ಗಾನ್‌ ಆಸ್ಪತ್ರೆ ರಕ್ತ ನಿಧಿ ಸಹಯೋಗದಲ್ಲಿ ಹೊಳೆಹೊನ್ನೂರು ಪೊಲೀಸ್‌ ಠಾಣೆಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಹೊಳೆಹೊನ್ನೂರು ಠಾಣೆ ಸಿಬ್ಬಂದಿ ಮತ್ತು ಸಾರ್ವಜನಿಕರು ರಕ್ತದಾನ ಮಾಡಿದರು. ಶಿಬಿರದಲ್ಲಿ 47 ಮಂದಿ ರಕ್ತದಾನ ಮಾಡಿದ್ದಾರೆ.

Blood Donation Camp in Police station

ಶಿಕಾರಿಪುರದಲ್ಲಿ ಕಾಡಾನೆ ಪ್ರತ್ಯಕ್ಷ

Speed News 2SHIKARIPURA : ತಾಲೂಕಿನ ಯರೆಕೊಪ್ಪ, ಗೊಬ್ಬರದ ಹೊಂಡ, ಕಟ್ಟಿಗೆಹಳ್ಳ ಸುತ್ತಮುತ್ತ ಅಂಬ್ಲಿಗೊಳ್ಳ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕಾಡಾನೆ ಕಾಣಿಸಿಕೊಂಡಿದೆ ಎನ್ನಲಾಗಿದೆ. ಇದರಿಂದ ಸುತ್ತಮುತ್ತಲ ರೈತರು ಆತಂಕಕ್ಕೀಡಾಗಿದಾರೆ. ಈ ಕುರಿತು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಈ ಗ್ರಾಮಗಳಲ್ಲಿ ಪರಿಶೀಲನೆ ನಡೆಸಿದರು. ಅಲ್ಲದೆ ಸ್ಥಳೀಯರಿಗೆ ಕಾಡಾನೆ ಕುರಿತು ಜಾಗೃತಿ ಮೂಡಿಸಿದ್ದಾರೆ.

ಶಿವಮೊಗ್ಗದಲ್ಲಿ ರಾಗ ಅನುರಾಗ

Speed News 3SHIMOGA : ಅನಿಕೇತನ ಸೇವಾ ಟ್ರಸ್ಟ್‌ ವತಿಯಿಂದ ಕುವೆಂಪು ರಂಗಮಂದಿರದಲ್ಲಿ ರಾಗ ಅನುರಾಗ ಚಿತ್ರಗೀತೆಗಳ ಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಸ್ತ್ರೀಯ ಸಂಗೀತದ ರಾಗ ಅಧಾರಿತ ಕಾರ್ಯಕ್ರಮದಲ್ಲಿ ಹಳೆಯ ಚಿತ್ರಗೀತೆಗಳನ್ನು ಹಾಡಲಾಯಿತು. ರಾಗಗಳ ಕುರಿತು ಸಭೀಕರಿಗೆ ಮಾಹಿತಿ ನೀಡಲಾಯಿತು. ಅನಿಕೇತನಾ ಸೇವಾ ಟ್ರಸ್ಟ್‌ನ ರಮೇಶ್‌ ಬಾಬು ಜಾಧವ್‌ ಉಪಸ್ಥಿತರಿದ್ದರು. ವಿನಯ್‌ ಶಿವಮೊಗ್ಗ ರಾಗಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದ ವಿಡಿಯೋ ಇಲ್ಲಿದೆ.


ಇದನ್ನೂ ಓದಿ – ನಟಿ ಮಾಳವಿಕ ಅವಿನಾಶ್‌ಗೆ ಎದುರಾಗಿದ್ದ ಸಂಕಷ್ಟ ನಾಳೆ ನಿಮ್ಮನ್ನೂ ಕಾಡಬಹುದು, ಏನದು? ಪಾರಾಗೋದು ಹೇಗೆ?

Leave a Comment