SHIVAMOGGA LIVE| 24 JUNE 2023
ಪಲ್ಟಿಯಾಗಿ ಬಸ್ಸಿಗೆ ಡಿಕ್ಕಿ ಹೊಡೆದ ಕಾರು
SHIMOGA : ಗಾಜನೂರು (Gajanur) ಸಮೀಪ ಕಾರು ಮತ್ತು ಬಸ್ ಮುಖಾಮುಖಿ ಡಿಕ್ಕಿಯಾಗಿವೆ (Mishap). ಶಿವಮೊಗ್ಗದಿಂದ ತೀರ್ಥಹಳ್ಳಿ ಕಡೆಗೆ ತೆರಳುತ್ತಿದ್ದ ಕಾರು, ಶಿವಮೊಗ್ಗ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಮಧ್ಯೆ ಅಪಘಾತವಾಗಿದೆ. ಮೊರಾರ್ಜಿ ಶಾಲೆ ಬಳಿ ಓವರ್ ಟೇಕ್ ಮಾಡುವಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಎದುರಿನಿಂದ ಬರುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಲಾಗಿದೆ. ಕಾರಿನಲ್ಲಿದ್ದ ನಾಲ್ವರ ಪೈಕಿ ಒಬ್ಬರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ. ಮೂವರಿಗೆ ಸಣ್ಣಪುಟ್ಟ ಗಾಯವಾಗಿದೆ. ಎಲ್ಲರನ್ನು ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. (ಫೋಟೊ, ಮಾಹಿತಿ : ಸಂಜು ಗೌಡ)
ಲಾಡ್ಜ್ ಮುಂದೆ ನಿಲ್ಲಿಸಿದ್ದ ಬೈಕ್ ನಾಪತ್ತೆ
SHIMOGA : ಬಾಲರಾಜ ಅರಸ್ ರಸ್ತೆಯಲ್ಲಿರುವ ಲಕ್ಷ್ಮಿ ರಂಗನಾಥ ಲಾಡ್ಜ್ (Lodge) ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ. ಟ್ಯಾಂಕ್ ಮೊಹಲ್ಲಾದ ಮನ್ನಿ ನರಸಿಂಹಯ್ಯ ಎಂಬುವವರಿಗೆ ಸೇರಿದ ಸ್ಪ್ಲೆಂಡರ್ ಪ್ಲಸ್ ಬೈಕ್ ಕಳುವಾಗಿದೆ. ಮನ್ನಿ ನರಸಿಂಹಯ್ಯ ಅವರು ಲಾಡ್ಜ್ನಲ್ಲಿ ತಂಗಿದ್ದ ತಮ್ಮ ಸ್ನೇಹಿತರಿಗೆ ಊಟ ಕೊಡಲು ಹೋಗಿದ್ದರು. ರಾತ್ರಿ 9.15ರ ಹೊತ್ತಿಗೆ ಬೈಕ್ (Bike) ನಿಲ್ಲಿಸಿ ಹೋಗಿದ್ದು, ಸ್ವಲ್ಪ ಹೊತ್ತಿನಲ್ಲೆ ಹಿಂತಿರುಗಿದ್ದು ಬೈಕ್ ನಾಪತ್ತೆಯಾಗಿತ್ತು ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಸೇವೆಯಿಂದ ವಜಾಗೊಳಿಸುವಂತೆ ಒತ್ತಾಯ
SHIMOGA : ಮೆಗ್ಗಾನ್ ಆಸ್ಪತ್ರೆಯ (Mc Gann Hospital) ಡಾ.ಶ್ರೀಧರ್ ಅವರು ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಅವರನ್ನು ಕೂಡಲೆ ವಜಾಗೊಳಿಸಬೇಕು ಎಂದು ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಮೆಗ್ಗಾನ್ ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿ ಸಿಮ್ಸ್ ನಿರ್ದೆಶಕರಿಗೆ ಮನವಿ ಸಲ್ಲಿಸಲಾಯಿತು.
ಬೈಕ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಕಾರು
GAJANUR : ಬೈಕಿನಲ್ಲಿ ಜಮೀನಿಗೆ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದು ಸಕ್ರೆಬೈಲು (Sakrebyle) ನಿವಾಸಿ ಗಾಯಗೊಂಡಿದ್ದಾರೆ. ರಾಜಪ್ಪ, ಗಾಯಗೊಂಡವರು. ಸಕ್ರೆಬೈಲಿನಿಂದ ಗಾಜನೂರು (Gajanur) ಕಡೆಗೆ ತೆರಳುತ್ತಿದ್ದಾಗ ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ರಾಜಪ್ಪ ಅವರ ಬಲಗೈ, ಬಲಗಾಲು, ಹಿಮ್ಮಡಿ ಬಳಿ ಗಾಯವಾಗಿದೆ. ಕಣ್ಣಿನ ಸಮೀಪ ತರಚಿದೆ ಎಂದು ಆರೋಪಿಸಲಾಗಿದೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ರಸ್ತೆ ಬದಿ ನಿಂತಿದ್ದವರಿಗೆ ಅಟೋ ಡಿಕ್ಕಿ
SANTHE KADUR : ರಸ್ತೆ ಬದಿ ದ್ವಿಚಕ್ರ ವಾಹನ ನಿಲ್ಲಿಸಿಕೊಂಡು ನಿಂತಿದ್ದ ಮಹಿಳೆಗೆ ಆಟೋ (Auto) ಡಿಕ್ಕಿ ಹೊಡೆದು, ಇಬ್ಬರು ಗಾಯಗೊಂಡಿದ್ದಾರೆ. ಮಗನೊಂದಿಗೆ ಶಿವಮೊಗ್ಗಕ್ಕೆ ಬಂದು ಎನ್.ಆರ್.ಪುರದ (NR Pura) ಸಹನಾ ಎಂಬುವರು ಮನೆಗೆ ಮರಳುತ್ತಿದ್ದರು. ವ್ಯಾನಿಟಿ ಬ್ಯಾಗನ್ನು ದ್ವಿಚಕ್ರ ವಾಹನದ ಡಿಕ್ಕಿಯಲ್ಲಿ ಇಡಲೆಂದು ಸಹನಾ ಅವರ ಮಗ ಸಂತೆ ಕಡೂರು ಬಳಿ ಬೈಕ್ ನಿಲ್ಲಿಸಿದ್ದರು. ಈ ವೇಳೆ ಶಿವಮೊಗ್ಗ ಕಡೆಯಿಂದ ಬಂದ ಆಟೋ ಬೈಕ್ ಮತ್ತು ಸಹನಾ ಅವರಿಗೆ ಡಿಕ್ಕಿ ಹೊಡದು ಪಲ್ಟಿಯಾಗಿದೆ ಎಂದು ಆರೋಪಿಸಲಾಗಿದೆ. ಆಟೋ ಚಾಲಕ ಮತ್ತು ಸಹನಾ ಅವರು ಗಾಯಗೊಂಡಿದ್ದರು. ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತು. ತುಂಗಾ ನಗರ ಠಾಣೆಯಲ್ಲಿ ಆಟೋ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.