ಶಿವಮೊಗ್ಗದಲ್ಲಿ ಮೂರು ದಿನ ಚಕ್ರವರ್ತಿ ಸೂಲಿಬೆಲೆ ಉಪನ್ಯಾಸ – 3 ಸುದ್ದಿಗಳ ಫಟಾಫಟ್‌ ನ್ಯೂಸ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 27 AUGUST 2023

ಶಿವಮೊಗ್ಗದಲ್ಲಿ ಚಕ್ರವರ್ತಿ ಸೂಲಿಬೆಲೆ ಉಪನ್ಯಾಸ

SHIMOGA : ನಮೋ ಬ್ರಿಗೇಡ್‌, ಅಜೇಯ ಸಂಸ್ಕೃತಿ ಬಳಗದ ವತಿಯಿಂದ FATAFAT-NEWS-1ಶಿವಮೊಗ್ಗದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರ ಉಪನ್ಯಾಸ (Lecture) ಕಾರ್ಯಕ್ರಮ ಆಯೋಜಿಸಲಾಗಿದೆ. ಆ.28ರಿಂದ 30ರವರೆಗೆ ಪ್ರತಿದಿನ ಸಂಜೆ 6.30 ರಿಂದ 8 ಗಂಟೆವರೆಗೆ ಕೋಟೆ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿರುವ ಆಚಾರ್ಯತ್ರಯರ ಭವನದಲ್ಲಿ ಉಪನ್ಯಾಸ ನಡೆಯಲಿದೆ ಎಂದು ಅಜೇಯ ಸಂಸ್ಕೃತಿ ಬಳಗದ ಅಧ್ಯಕ್ಷ ರಾಮಾಚಾರ್‌ ತಿಳಿಸಿದರು. ‘ಇನ್ನು ಮಲಗಿದರೆ ಏಳುವಾಗ ಭಾರತ ಇರುವುದಿಲ್ಲ’ ಶೀರ್ಷಿಕೆ ಅಡಿ ಚಕ್ರವರ್ತಿ ಸೂಲಿಬೆಲೆ ಉಪನ್ಯಾಸ ನೀಡಲಿದ್ದಾರೆ ಎಂದು ಯುವ ಬ್ರಿಗೇಡ್‌ ಪ್ರಮುಖ ವಿನಯ್‌ ತಿಳಿಸಿದರು.

FATAFAT-MORE-NEWS

ವುಶು ಕ್ರೀಡಾಕೂಟಕ್ಕೆ ಶಿವಮೊಗ್ಗದ 18 ಯುವತಿಯರು

SHIMOGA : ಆ.29ರಂದು ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ FATAFAT-NEWS-2ಭಾರತೀಯ ಕ್ರೀಡಾ ಪ್ರಾಧಿಕಾರ ಮಹಿಳೆಯರಿಗಾಗಿ ಖೇಲೋ ಇಂಡಿಯಾ ಮಹಿಳಾ ವುಶು ಕ್ರೀಡಾಕೂಟ ಆಯೋಜಿಸಿದೆ. ಶಿವಮೊಗ್ಗದ ಜಿಲ್ಲೆಯ ವಿವಿಧ ಶಾಲೆಗಳ 18 ಯುವತಿಯರು ಭಾಗಿಯಾಗಲಿದ್ದಾರೆ ಎಂದು ಜಿಲ್ಲಾ ವುಶು ಅಸೋಸಿಯೇಷನ್‌ ಅಧ್ಯಕ್ಷ ಅಬ್ದುಲ್‌ ಘನಿ ತಿಳಿಸಿದರು. ಈ ಕ್ರೀಡೆ ರಾಷ್ಟ್ರೀಯ ಪ್ರಾಧಾನ್ಯತೆ ಸಿಕ್ಕಿದೆ. ಅಂತಾರಾಷ್ಟ್ರೀಯ ಕ್ರೀಡೆಯಾಗಿ ಬೆಳೆಯುತ್ತಿದೆ ಎಂದರು.

FATAFAT-MORE-NEWS

ಶಿವಮೊಗ್ಗದಲ್ಲಿ ಮೂರು ದಿನ ರಾಯರ ಆರಾಧನೆ

SHIMOGA : ನಗರದ ಬೊಮ್ಮನಕಟ್ಟೆ ದೇವಂಗಿ ರತ್ನಾಕರ ಲೇಔಟ್‌ನಲ್ಲಿರುವ FATAFAT-NEWS-3ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆ.31ರಿಂದ ಸೆ.2ರವರೆಗೆ ಮೂರು ದಿನ ಶ್ರೀ ರಾಘವೇಂದ್ರರ 352ನೇ ಆರಾಧನ ಮಹೋತ್ಸವ ನಡೆಯಲಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಆ.30ರಂದು ಸಂಜೆ ಗೋಪೂಜೆ, ಧ್ವಜಾರೋಹಣ, ಧನ, ಧಾನ್ಯ ಪೂಜೆ, ಮಹಾ ಮಂಗಳಾರತಿ ನಡೆಯಲಿದೆ. ಆ.31ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ, ಸೆ.1ರಂದು ಮಧ್ಯಾರಾಧನೆ, ಸೆ.2ರಂದು ಉತ್ತರಾರಾಧನೆ ನಡೆಯಲಿದೆ. ಮೂರು ದಿನ ಪ್ರವಚನಗಳು (Lecture) ನಡೆಯಲಿದೆ ಎಂದು ತಿಳಿಸಿದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : August 27, 2023

Leave a Comment