ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 29 MAY 2023 | FATAFAT NEWS
ಶಿವಮೊಗ್ಗ ಎಂಎಲ್‌ಎ ಕಚೇರಿ ಉದ್ಘಾಟನೆ
SHIMOGA : ನೆಹರೂ ರಸ್ತೆಯ ಶಿವಪ್ಪನಾಯಕ ಮಾರುಕಟ್ಟೆ ಕಟ್ಟಡದಲ್ಲಿ ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಎಸ್.ಎನ್.ಚನ್ನಬಸಪ್ಪ ಅವರ ಕಚೇರಿ (MLA Office) ಉದ್ಘಾಟಿಸಲಾಯಿತು. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಮೇಯರ್ ಶಿವಕುಮಾರ್, ಉಪ ಮೇಯರ್ ಲಕ್ಷ್ಮಿ ಶಂಕರ ನಾಯಕ್, ಪ್ರಮುಖರಾದ ಎಂ.ಬಿ.ಭಾನುಪ್ರಕಾಶ್, ಗಿರೀಶ್ ಪಟೇಲ್ ಇದ್ದರು. ಈ ಹಿಂದೆ ಇಲ್ಲಿಯೇ ಶಾಸಕ ಕೆ.ಎಸ್.ಈಶ್ವರಪ್ಪ ಅವರ ಕಚೇರಿ ಇತ್ತು.
ಯಾರೇ ಬಂದರೂ ಸಮಸ್ಯೆ ಪರಿಹಾರ
SHIMOGA : ಕಾರ್ಯಕರ್ತರು ಕಣ್ಣೀರು ಹಾಕುವ ಯಾವುದೆ ಕೆಲಸವನ್ನು ನಾನು ಮಾಡುವುದಿಲ್ಲ. ಸಂಘಟನೆ ಶಕ್ತಿ ಏನು ಎಂಬುದನ್ನು ನಗರ ಬಿಜೆಪಿ ಮತ್ತು ಪರಿವಾರದ ಕಾರ್ಯಕರ್ತರು ಸಾಬೀತು ಮಾಡಿದ್ದಾರೆ. ಕಚೇರಿಗೆ ಯಾರೆ ಬಂದರು ಅವರು ಸಮಸ್ಯೆ ಪರಿಹರಿಸುತ್ತೇನೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು. ನೂತನ ಕಚೇರಿ ಉದ್ಘಾಟನೆ ಬಳಿಕ ವೇದಿಕೆಯಲ್ಲಿ ಮಾತನಾಡಿದರು.
ಕಾಂಗ್ರೆಸಿಗರ ಅಮಲು ಇಳಿಸಬೇಕು
SHIMOGA : ರಾಷ್ಟ್ರೀಯ ವಿಚಾರಧಾರೆಯನ್ನು ಹೊಂದಿರುವ ಬಿಜೆಪಿಗೆ ಈ ಬಾರಿ ಸರ್ವ ಜಾತಿ, ಧರ್ಮದ ಜನರು ಮತ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರಬಹುದು. ಆದರೆ ಮತ ಹಂಚಿಕೆಯಲ್ಲಿ ಬಿಜೆಪಿಗೆ ಹೆಚ್ಚಿನ ಮತ ಬಂದಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿರುವ ಅಮಲಿನಲ್ಲಿದೆ. ಲೋಕಸಭೆ ಚುನಾವಣೆಯಲ್ಲಿ ಅವರ ಅಮಲು ಇಳಿಸಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಶಿವಮೊಗ್ಗ ಶಾಸಕ ಎಸ್.ಎನ್.ಚನ್ನಬಸಪ್ಪ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಶರಾವತಿ ಸಂತ್ರಸ್ತರ ಸಮಸ್ಯೆ ಪರಿಹರಿಸಲಿ
SAGARA : ನೂತನ ಸಚಿವ ಮಧು ಬಂಗಾರಪ್ಪ ಶರಾವತಿ ಸಂತ್ರಸ್ತರ (Sharavati Victims) ಸಮಸ್ಯೆ ಬಗೆಹರಿಸಲು ಮುಂದಾಗಬೇಕು. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್ ಮನವಿ ಮಾಡಿದ್ದಾರೆ. ಈ ಹಿಂದೆ ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ ಶರಾವತಿ ಸಂತ್ರಸ್ತರ ಭೂಮಿ ಹಕ್ಕಿಗಾಗಿ ಪಾದಯಾತ್ರೆ ನಡೆದಿತ್ತು. ಈಗ ಸಂತ್ರಸ್ತ ರೈತರಿಗೆ ಭೂಮಿ ಹಕ್ಕು ಕೊಡಿಸಿದ ಶ್ರೇಯಸ್ಸು ಮಧು ಬಂಗಾರಪ್ಪ ಅವರಿಗೆ ದೊರೆಯಲಿ ಎಂದು ಆಶಿಸಿದ್ದಾರೆ.
ಶಿವಮೊಗ್ಗ ಜೈಲ್ ಮೇಲೆ ಪೊಲೀಸ್ ದಾಳಿ
SHIMOGA : ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದ ಮೇಲೆ ಶಿವಮೊಗ್ಗ ಪೊಲೀಸರು ದಿಢೀರ್ ದಾಳಿ (Raid On Jail) ನಡೆಸಿದರು. ಕೇಂದ್ರ ಕಾರಾಗೃಹದ ಪ್ರತಿ ಸೆಲ್‌ನಲ್ಲಿಯು ಪರಿಶೀಲನೆ ನಡೆಸಲಾಯಿತು. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಯಿತು. ಶ್ವಾನ ದಳ ಮತ್ತು ಎಎಸ್‌ಸಿ ತಂಡವನ್ನು ದಾಳಿ ವೇಳೆ ಹಾಜರಿದ್ದವು. ಶಿವಮೊಗ್ಗ ಎ ವಿಭಾಗದ ಡಿವೈಎಸ್‌ಪಿ ಬಾಲರಾಜ್, ಪ್ರೊಬೆಷನರಿ ಐಪಿಎಸ್ ಅಧಿಕಾರಿ ಬಿಂದುಮಣಿ, ವಿವಿಧ ಠಾಣೆಗಳ ಇನ್ಸ್‌ಪೆಕ್ಟರ್, ಪಿಎಸ್‌ಐಗಳು ಸೇರಿ 30ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಮಗಳ ಹುಟ್ಟುಹಬ್ಬಕ್ಕೆ ಸುತ್ತೋಲೆ ಹೊರಡಿಸಿದ ಕುಲಪತಿ
SHANKARAGHATTA : ಪ್ರಮುಖ ಸೂಚನೆಗಳನ್ನು ಸಿಬ್ಬಂದಿಗೆ ನೀಡಲು ವಿವಿಧ ಇಲಾಖೆ, ಸರ್ಕಾರಿ ಸಂಸ್ಥೆಗಳಲ್ಲಿ ಪ್ರತಿದಿನ ಒಂದಿಲ್ಲೊಂದು ಸುತ್ತೋಲೆ (Circular) ಹೊರಡಿಸಲಾಗುತ್ತದೆ. ಅದರೆ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ತಮ್ಮ ಮಗಳ ಹುಟ್ಟಹಬ್ಬದ ಔತಣಕೂಟಕ್ಕೆ ಸುತ್ತೋಲೆ ಹೊರಡಿಸಿದ್ದಾರೆ. ಇದು ಚರ್ಚೆಗೆ ಕಾರಣವಾಗಿದೆ. ಮೇ 22ರಂದು ಈ ಸುತ್ತೋಲೆ ಹೊರಡಿಸಲಾಗಿತ್ತು. ಮೇ 28ರಂದು ವಿವಿ ಆವರಣದಲ್ಲಿರುವ ತಮ್ಮ ಬಂಗಲೆಯಲ್ಲಿ ಔತಣಕೂಟ ಆಯೋಜಿಸಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರೊ. ಬಿ.ಪಿ.ವೀರಭದ್ರಪ್ಪ ಅವರು, ಅದು ಸುತ್ತೋಲೆಯಲ್ಲ ಕರೆಯೋಲೆ ಎಂದು ತಿಳಿಸಿದರು.
ಹಿಮಾಲಯದಲ್ಲಿ ಸಂಸ್ಕೃತ ಧ್ವಜಾರೋಹಣ
SHIMOGA : ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್, ಗೀರ್ವಾಣಿ ಭಾರತಿ ಸಂಸ್ಕೃತ ಘಟಕ, ಶ್ರೀ ಆದಿಚುಂಚನಗಿರಿ ಮಠ, ಸಂಸ್ಕೃತ ಭಾರತಿ, ತರುಣೋದಯ ಘಟಕದಿಂದ ಹಿಮಾಲಯದ ಚಂದ್ರಕಾಣಿ ಪರ್ವತದ ತುದಿಯಲ್ಲಿ ಇತ್ತೀಚೆಗೆ ಬಾಲ್ಯದಿಂದ ಮಕ್ಕಳಿಗೆ ಸಂಸ್ಕೃತ ಕಲಿಸಿ ಸಂದೇಶ ಸಾರುವ ಸಂಸ್ಕೃತದ ಧ್ವಜಾರೋಹಣ ನೆರವೇರಿಸಲಾಯಿತು. ನಾಲ್ಕು ಬಾರಿ ಸಂಸ್ಕೃತ ಧ್ವಜಾರೋಹಣ (Sanskrit Flag) ಮಾಡಿದ ಕೀರ್ತಿ ಶಿವಮೊಗ್ಗಕ್ಕೆ ಸಂದಿದೆ.
ತಾ.ಪಂ ಮಾಜಿ ಸದಸ್ಯೆಯಿಂದ ಒತ್ತುವರಿ ಆರೋಪ
HOSANAGARA : ತಾಲೂಕು ಪಂಚಾಯಿತಿ ಮಾಜಿ ಸದಸ್ಯೆಯೊಬ್ಬರು ಹೊಸನಗರ ತಾಲೂಕು ಕಚ್ಚಿಗೆ ಬೈಲು ಎಂಬಲ್ಲಿ ಮೂರು ಎಕೆರೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿದ್ದರು ಎಂದು ಆರೋಪಿಸಲಾಗಿದೆ. ಸ್ಥಳೀಯರ ದೂರಿನ ಹಿನ್ನೆಲೆ ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ, ಒತ್ತುವರಿ ತೆರವು ಮಾಡಿದ್ದಾರೆ. ಕಸಬಾ ಹೋಬಳಿ ಕಚ್ಚಿಗೆಬೈಲು ಗ್ರಾಮದ ಸರ್ವೆ ನಂಬರ್ 31ರಲ್ಲಿ ಒತ್ತುವರಿ ಮಾಡಲಾಗಿತ್ತು.
ಹಳೆ ಸೊರಬದ ಶಾಂತಿ ಕೆರೆಯಲ್ಲಿ ಕೆರೆ ಬೇಟೆ
SORABA : ಪುರಸಭೆ ವ್ಯಾಪ್ತಿಯ ಹಳೆ ಸೊರಬದ ಶಾಂತಿ ಕೆರೆಯಲ್ಲಿ ಭಾನುವಾರ ಕೆರೆ ಬೇಟೆ (Kere Bete) ನಡೆಯಿತು. ಕುದುರೆಗಣಿ, ಜಂಗಿನಕೊಪ್ಪ, ಓಟೂರು, ಚಿತ್ರಟ್ಟೆಹಳ್ಳಿ, ಜಯಂತಿ ಗ್ರಾಮ, ನಡಹಳ್ಳಿ, ಯಲಸಿ ಸೇರಿದಂತೆ ವಿವಿಧೆಡೆಯ ನೂರಾರು ಜನರು ಕೆರೆ ಬೇಟೆಯಲ್ಲಿ ಪಾಲ್ಗೊಂಡಿದ್ದರು. ದೊಡ್ಡ ಸಂಖ್ಯೆಯ ಜನರು ಕೆರೆ ಬೇಟೆಯನ್ನು ವೀಕ್ಷಿಸಿದರು.
ಇದನ್ನೂ ಓದಿ – SHIMOGA JOBS | ಶಿವಮೊಗ್ಗದ ಎರಡು ಸಂಸ್ಥೆಗಳಲ್ಲಿ ಕೆಲಸ ಖಾಲಿ ಇದೆ, ಆಕರ್ಷಕ ಸಂಬಳ ಸಿಗಲಿದೆ
ಶಾರದಾ ಪೂರ್ಯಾನಾಯ್ಕ್‌ಗೆ ಅಭಿನಂದನೆ
HOLALURU : ಗ್ರಾಮಗಳ ಅಭಿವೃದ್ಧಿಗೆ ಪಕ್ಷಾತೀತ, ಜಾತ್ಯತೀತ ಮತ್ತು ಧರ್ಮಾತೀತವಾಗಿ ಕೆಲಸ ಮಾಡುವುದಾಗಿ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ್ ತಿಳಿಸಿದರು. ಹೊಳಲೂರಿನಲ್ಲಿ ಅಭಿನಂದನಾ ಸಮಾರಂಭಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಕ್ಷೇತ್ರದ ಜನರು ಸಾಕಷ್ಟು ನಿರೀಕ್ಷೆ ಇಟ್ಟು ತನ್ನನ್ನು ಗೆಲ್ಲಿಸಿದ್ದಾರೆ. ಅವರ ನಿರೀಕ್ಷೆಯಂತೆ ಕೆಲಸ ಮಾಡುವುದಾಗಿ ತಿಳಿಸಿದರು.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422