SHIVAMOGGA LIVE | 14 JULY 2023
ಪ್ರೀತಿ ಕಾಟಕ್ಕೆ ಯುವತಿ ಆತ್ಮಹತ್ಯೆ
SAGARA : ಪ್ರೀತಿಸುವಂತೆ ಯುವಕನ ಕಿರುಕುಳಕ್ಕೆ (Harassment) ಮನನೊಂದು ಸಾಗರದಲ್ಲಿ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಂದಿರಾ ಗಾಂಧಿ ಪ್ರಥಮ ದರ್ಜೆ ಕಾಲೇಜು ಬಿಎಸ್ಸಿ ಪದವಿ ವಿದ್ಯಾರ್ಥಿನಿ ಭವ್ಯಾ (19) ಸಾವನ್ನಪ್ಪಿದ್ದಾಳೆ. ಸೊರಬ ತಾಲೂಕು ಆನವಟ್ಟಿಯ ಹುರಳಿಕೊಪ್ಪದ ಪ್ರದೀಪ್ ಎಂಬಾತ ಇನ್ಸ್ಟಾಗ್ರಾಂನಲ್ಲಿ ಯುವತಿಗೆ ಪರಿಚಯವಾಗಿದ್ದ. ಪದೇ ಪದೆ ಫೋನ್ ಮಾಡಿ ಪ್ರೀತಿಸುವಂತೆ ಕಿರುಕುಳ (Harassment) ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಇದೆ ಕಾರಣಕ್ಕೆ ಭವ್ಯಾ ವಿಷ ಸೇವಿಸಿದ್ದಳು ಎಂದು ಆಕೆಯ ಕುಟುಂಬದವರು ದೂರಿದ್ದಾರೆ. ಪ್ರದೀಪ್ನನ್ನು ಸಾಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಭವ್ಯಾ ಮೂಲತಃ ಸಿದ್ದಾಪುರ ತಾಲೂಕು ಶಿರಳಗಿ ನಿವಾಸಿ.
ನಡು ರಸ್ತೆಯಲ್ಲಿ ಮಲಗಿ ಕುಡುಕನ ರಂಪಾಟ
SHIMOGA : ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ನಡು ರಸ್ತೆಯಲ್ಲಿ ಮಲಗಿ ವಾಹನ ಸಂಚಾರಕ್ಕೆ ತೊಂದರೆ ಉಂಟು ಮಾಡಿದ್ದಾನೆ. ಟಿಪ್ಪುನಗರಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಗುರುವಾರ ಸಂಜೆ ರಸ್ತೆಗೆ ಬಂದು ಮಲಗಿದ್ದಾನೆ. ಸಂಜೆ ವೇಳೆ ಆಗಿದ್ದರಿಂದ ವಾಹನ ದಟ್ಟಣೆ ಹೆಚ್ಚಿತ್ತು. ಬಸ್ಸುಗಳಿಗೆ ಅಡ್ಡಲಾಗಿ ಮಲಗಿ ಕಿರಿಕ್ ಮಾಡುತ್ತಿದ್ದ. ಆತನ ಎದುರಿಗೆ ಸಿಟಿ ಬಸ್ ಮತ್ತು ಶಾಲೆ ಬಸ್ ಬಂದ ನಿಂತಾಗ ಅಡ್ಡ ಮಲಗಿ ಕೈಯಲ್ಲಿದ್ದ ಛತ್ರಿ ತೋರಿಸಿ ಚಾಲಕರತ್ತ ಕೂಗುತ್ತಿದ್ದ. ಕೊನೆಗೆ ಸಾರ್ವಜನಿಕರು ನೀರು ಸುರಿದು, ಆತನನ್ನು ರಸ್ತೆಯ ಪಕ್ಕದ ಎಳೆದೊಯ್ದು ಬಿಟ್ಟರು.
ವಾರ್ಷಿಕ ಮಹಾಸಭೆ ಮತ್ತು ಪ್ರತಿಭಾ ಪುರಸ್ಕಾರ
SHIMOGA : ಜಿಲ್ಲಾ ಬಬ್ಬೂರು ಕಮ್ಮೆ ಸಂಘದ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಜು.16ರಂದು ನಡೆಯಲಿದೆ ಎಂದು ಸಂಘದ ಕಾರ್ಯದರ್ಶಿ ಎಸ್.ನಾಗೇಶ್ ತಿಳಿಸಿದರು. ಆ ದಿನ ಬೆಳಗ್ಗೆ 10.30ಕ್ಕೆ ಹೊಳೆ ಬಸ್ ನಿಲ್ದಾಣ ಬಳಿ ಇರುವ ಶಂಕರ ಮಠದಲ್ಲಿ ಕಾರ್ಯಕ್ರಮ ನಡೆಯಲಿದೆ. ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ತಿಳಿಸಲಾಗಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200