ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 17 APRIL 2021
ಒಂದೇ ವಾರದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಎರಡನೇ ಬಾರಿಗೆ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿದೆ. ಶುಕ್ರವಾರ ಶಿವಮೊಗ್ಗ ಜಿಲ್ಲೆಯಲ್ಲಿ 124 ಮಂದಿಗೆ ಸೋಂಕು ತಗುಲಿದೆ. ಇನ್ನೊಬ್ಬ ಸೋಂಕಿತ ಸಾವನ್ನಪ್ಪಿದ್ದು, ಎರಡನೆ ಅಲೆಗೆ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.
ಶುಕ್ರವಾರ 2965 ಮಂದಿಯ ಸ್ವ್ಯಾಬ್ ಪಡೆದುಕೊಳ್ಳಲಾಗಿದೆ. ಈ ಪೈಕಿ 2326 ಮಂದಿಗೆ ನೆಗೆಟಿವ್ ಬಂದಿದೆ. 124 ಮಂದಿಗೆ ಪಾಸಿಟಿವ್ ಬಂದಿದೆ. ಮತ್ತೊಂದೆಡೆ 50 ಮಂದಿ ಗುಣವಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಮತ್ತೊಬ್ಬ ಸೋಂಕಿತ ಸಾವು
ಜಿಲ್ಲೆಯಲ್ಲಿ ಮತ್ತೊಬ್ಬ ಸೋಂಕಿತ ಸಾವನ್ನಪ್ಪಿದ್ದಾರೆ. ಇದರಿಂದ ಎರಡನೇ ಅಲೆಗೆ ಸಾವನ್ನಪ್ಪಿದವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.ಜಿಲ್ಲೆಯಲ್ಲಿ ಕರೋನಾಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 353ಕ್ಕೆ ಏರಿದೆ.
ಆರು ನೂರಕ್ಕೂ ಹೆಚ್ಚು ಸೋಂಕಿತರು
ಜಿಲ್ಲೆಯಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಒಟ್ಟು ಸೋಂಕಿತರ ಸಂಖ್ಯೆ 617ಕ್ಕೆ ಏರಿಕೆಯಾಗಿದೆ. ಈ ಪೈಕಿ 115 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 88 ಮಂದಿ ಖಾಸಗಿ ಆಸ್ಪತ್ರೆಯಲ್ಲಿ, 397 ಮಂದಿ ಹೋಂ ಐಸೊಲೇಷನ್‍ನಲ್ಲಿದ್ದಾರೆ. 17 ಮಂದಿ ಟ್ರೈಯೇಜ್‍ನಲ್ಲಿದ್ದಾರೆ ಎಂದು ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್‍ನಲ್ಲಿ ತಿಳಿಸಲಾಗಿದೆ.
ಭದ್ರಾವತಿಯಲ್ಲೇ ಹೆಚ್ಚು ಕೇಸ್
ಶುಕ್ರವಾರ ಪತ್ತೆಯಾದ ಸೋಂಕಿತರ ಪೈಕಿ ಭದ್ರಾವತಿ ತಾಲೂಕಿನವರೆ ಹೆಚ್ಚಿದ್ದಾರೆ. ಶಿವಮೊಗ್ಗ ತಾಲೂಕಿನ 32, ಭದ್ರಾವತಿಯ 41, ಶಿಕಾರಿಪುರದ 3, ತೀರ್ಥಹಳ್ಳಿ 17, ಸೊರಬ 1, ಸಾಗರ 23, ಹೊಸನಗರ 5, ಇತರೆ ಜಿಲ್ಲೆಯಿಂದ ಬಂದವರು 2 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಇದನ್ನೂ ಓದಿ – ಮದುವೆಗೆ ಹೋಗಿದ್ದ ಭದ್ರಾವತಿಯ ಒಂದೇ ಊರಿನ 21 ಮಂದಿಗೆ ಕರೋನ, ಗ್ರಾಮದಲ್ಲಿ ಢವಢವ
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422