ಶಿವಮೊಗ್ಗದಲ್ಲಿ 208 ಕ್ವಿಂಟಾಲ್ ಪಡಿತರ ಅಕ್ಕಿ ಹರಾಜಿಗೆ ದಿನಾಂಕ ನಿಗದಿ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS | 9 JANUARY 2023

ಶಿವಮೊಗ್ಗ : ಜಿಲ್ಲೆಯಲ್ಲಿ ವಿವಿಧೆಡೆ ಅಕ್ರಮವಾಗಿ ದಾಸ್ತಾನು ಇರಿಸಿದ್ದ ಪಡಿತರ ಅಕ್ಕಿ (rice), ತೂಕ ಮಾಡುವ ಯಂತ್ರ, ಚೀಲ ಹೊಲೆಯುವ ಯಂತ್ರ ಮತ್ತು ಗೋಣಿ ಚೀಲಗಳನ್ನು ವಶಕ್ಕೆ ಪಡಿಸಿಕೊಳ್ಳಲಾಗಿದ್ದು, ಅವುಗಳ ಹರಾಜ ಮಾಡಲು ದಿನಾಂಕ ನಿಗದಿಗೊಳಿಸಲಾಗಿದೆ.

ಸುಮಾರು 208.80 ಕ್ವಿಂಟಾಲ್ ಪಡಿತರ ಅಕ್ಕಿ (rice), 4 ತೂಕ ಮಾಡುವ ಯಂತ್ರ, 1 ಚೀಲ ಹೊಲೆಯುವ ಯಂತ್ರ ಹಾಗೂ ಗೋಣಿಚೀಲಗಳನ್ನು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ವಶಕ್ಕೆ ಪಡೆದುಕೊಂಡಿದ್ದರು. ಈ ಸಂಬಂಧ  ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿತ್ತು. ಈ ಅಕ್ಕಿ ಹಾಗೂ ಇತರೆ ಹರಾಜು ಪ್ರಕ್ರಿಯೆಯು ಜನವರಿ 13 ರಂದು ಬೆಳಿಗ್ಗೆ 11.30 ಕ್ಕೆ ನಡೆಯಲಿದೆ.

Shimoga Live News Update Reach 3 million views

ಎಪಿಎಂಸಿ ಪರವಾನಗಿ ಹೊಂದಿರುವ ಬಿಡ್ಡುದಾರರು ಹರಾಜಿನಲ್ಲಿ ಭಾಗವಹಿಸಬಹುದಾಗಿದೆ. ಷರತ್ತುಗಳಿಗೆ ಒಳಪಟ್ಟು ಭದ್ರತಾ ಠೇವಣಿ ಪಾವತಿಸಿ ಗೊತ್ತುಪಡಿಸಿದ ದಿನಾಂಕದಂದು ಒಂದು ಗಂಟೆ ಮುಂಚಿತವಾಗಿ ಹಾಜರಿರಬೇಕು. ಎಪಿಎಂಸಿ ಆವರಣದ ಕೆ.ಎಫ್.ಸಿ.ಎಸ್.ಸಿ ಸಗಟು ಮಳಿಗೆಯಲ್ಲಿ ಹರಾಜು ನಡೆಯಲಿದೆ ಎಂದು ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment