ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 3 FEBRUARY 2023
BENGALURU : ಸಂಚಾರ ನಿಯಮ (Traffic Fine) ಉಲ್ಲಂಘಿಸಿ ದಂಡದ ಮೊತ್ತವನ್ನು ಬಾಕಿ ಉಳಿಸಿಕೊಂಡಿರುವವರಿಗೆ ಸರ್ಕಾರ ಶುಭ ಸುದ್ದಿ ನೀಡಿದೆ. ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಶಿಫಾರಸಿನ ಮೇರೆಗೆ ಬಾಕಿ ದಂಡಕ್ಕೆ ಶೇ.50ರಷ್ಟು ರಿಯಾಯಿತಿ (discount) ಘೋಷಿಸಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಫೆ.11ರ ಒಳಗೆ ಬಾಕಿ ಇರುವ ಟ್ರಾಫಿಕ್ ದಂಡ ಪಾವತಿ ಮಾಡಿದರೆ ಶೇ.50ರಷ್ಟು ರಿಯಾಯಿತಿ (discount) ಲಭ್ಯವಾಗಲಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ರಿಯಾಯಿತಿ ಯಾಕೆ?
ರಾಜ್ಯದಲ್ಲಿ 2 ಕೋಟಿ ಪ್ರಕರಣಗಳು, 1300 ಕೋಟಿ ರೂ.ಗು ಅಧಿಕ ಮೊತ್ತದ ಟ್ರಾಫಿಕ್ ಫೈನ್ ಬಾಕಿ ಇದೆ. ಈ ಬಗ್ಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಕಳವಳ ವ್ಯಕ್ತಪಡಿಸಿದೆ. ಈ ಸಂಬಂಧ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ನ್ಯಾ. ಬಿ.ವೀರಪ್ಪ ಅವರ ನೇತೃತ್ವದಲ್ಲಿ ಸಮಗ್ರ ಚರ್ಚೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ತೆಲಂಗಾಣ ಮಾದರಿ ಪ್ಲಾನ್
ನೆರೆಯ ರಾಜ್ಯ ತೆಲಂಗಾಣದಲ್ಲಿ ಟ್ರಾಫಿಕ್ ದಂಡ ಬಾಕಿ ಕಟ್ಟಲು ಸರ್ಕಾರ ರಿಯಾಯಿತಿ ನೀಡಿತ್ತು. 2022ರಲ್ಲಿ ರಿಯಾಯಿತಿ ನೀಡಿದ್ದಾಗ ಜನರು ಸರತಿಯಲ್ಲಿ ನಿಂತು ಬಾಕಿ ದಂಡ ಪಾವತಿ ಮಾಡಿದ್ದರು. ಇದೇ ಮಾದರಿಯನ್ನು ರಾಜ್ಯದಲ್ಲಿ ಈಗ ಜಾರಿಗೊಳಿಸಲಾಗಿದೆ. ಫೆ.11ರ ಒಳಗೆ ಬಾಕಿ ಇರುವ ಟ್ರಾಫಿಕ್ ದಂಡವನ್ನು ಕಟ್ಟಿದರೆ ಶೇ.50ರಷ್ಟು ರಿಯಾಯಿತಿ ಸಿಗಲಿದೆ.
ರಾಜ್ಯ ಸಾರಿಗೆ ಇಲಾಖೆಯು ಸಂಚಾರ ಉಲ್ಲಂಘನೆ ದಂಡದ ಮೊತ್ತದಲ್ಲಿ ಶೇ.50ರಷ್ಟು ವಿನಾಯಿತಿ ನೀಡಿದೆ. ಶುಕ್ರವಾರ ತಂತ್ರಾಂಶದಲ್ಲಿ ಅಪ್ ಡೇಟ್ ಮಾಡಿ ತಕ್ಷಣವೇ ಜಾರಿಗೆ ತರಲಾಗುತ್ತದೆ ಎಂದು ಸಂಚಾರ ವಿಭಾಗದ ವಿಶೇಷ ಪೊಲೀಸ್ ಆಯುಕ್ತ ಡಾ. ಎಂ.ಎ.ಸಲೀಂ ಅವರು ತಿಳಿಸಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಲ್ಲಿ ಬೋಗಸ್ ಕಾರ್ಡ್ ರದ್ಧತಿಗೆ ಅಭಿಯಾನ, ರದ್ದುಗೊಳಿಸದಿದ್ದರೆ ಕಾನೂನು ಕ್ರಮ, ಏನಿದು?