ನಾಯಿಗಳ ದಾಳಿಗೆ ಜಿಂಕೆಗೆ ಗಾಯ
ಶಿವಮೊಗ್ಗ ಲೈವ್.ಕಾಂ : ನಾಯಿಗಳ ದಾಳಿಗೆ ಸಿಲುಕಿ ಗಾಯಗೊಂಡಿದ್ದ ಜಿಂಕೆಯನ್ನು (Deer) ಗ್ರಾಮಸ್ಥರು ರಕ್ಷಿಸಿ ಅರಣ್ಯ ಇಲಾಖೆ ಸಹಾಯದೊಂದಿಗೆ ವಾಪಸ್ ಕಾಡಿಗೆ ಬಿಟ್ಟಿದ್ದಾರೆ. ಶಿವಮೊಗ್ಗ ತಾಲೂಕು ಚೋರಡಿ ಸಮೀಪದ ಕೊರಗಿ ಗ್ರಾಮದಲ್ಲಿ ಜಿಂಕೆ ಗ್ರಾಮದ ಬಳಿ ಬಂದಾಗ ನಾಯಿಗಳು ಬೆನ್ನಟ್ಟಿ ಗಾಯಗೊಳಿಸಿದ್ದವು. ಇದನ್ನು ಗಮನಿಸಿದ ಕೊರಗಿ ಗ್ರಾಮದ ಸುರೇಶ್ ಮತ್ತಿತರರು ಜಿಂಕೆಯನ್ನು ರಕ್ಷಿಸಿದ್ದಾರೆ. ಗ್ರಾಮಸ್ಥರು ಇದನ್ನು ಚೋರಡಿ ಆನಂದಪುರ ವಲಯ ಅರಣ್ಯ ಅಧಿಕಾರಿ ರವಿಕುಮಾರ್ ಗಮನಕ್ಕೆ ತಂದರು. ಸ್ಥಳಕ್ಕೆ ಆಗಮಿಸಿದ ವೈದ್ಯಾಧಿಕಾರಿಗಳಿಂದ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಅರಣ್ಯದೊಳಗೆ ಬಿಡಲಾಯಿತು.
ಸಿಎಂ ಹುಟ್ಟುಹಬ್ಬ, ಮಕ್ಕಳಿಗೆ ಪುಸ್ತಕ ವಿತರಣೆ
ಶಿವಮೊಗ್ಗ ಲೈವ್.ಕಾಂ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನ್ಮ ದಿನ ಪ್ರಯುಕ್ತ ಉಳ್ಳಿ ಫೌಂಡೇಶನ್ನಿಂದ ಶಿಕಾರಿಪುರ ಪಟ್ಟಣದ ದೇವರಾಜ ಅರಸು ನಗರದ ಉರ್ದು ಶಾಲೆ ಮಕ್ಕಳಿಗೆ ಪುಸ್ತಕ, ಪೆನ್ ವಿತರಿಸಲಾಯಿತು. ಉಳ್ಳಿ ಫೌಂಡೇಶನ್ ಅಧ್ಯಕ್ಷ ಉಳ್ಳಿ ದರ್ಶನ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಕುಮಾರ್ ನಾಯಕ್, ರಾಜು ಉಡುತಡಿ, ಗಣೇಶ್, ಶಶಾಂಕ್, ಅರುಣ್ ಇತರರಿದ್ದರು.
![]() |
ಗ್ರಾ.ಪಂನಲ್ಲಿ ಮರಣ ಪ್ರಮಾಣ ಪತ್ರ ವಿತರಣೆ
ಶಿವಮೊಗ್ಗ ಲೈವ್.ಕಾಂ : ಸಾಗರ ತಾಲೂಕು ಹಿರೇಬಿಲಗುಂಜಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮರಣ ಪ್ರಮಾಣಪತ್ರ ವಿತರಣೆಗೆ ಚಾಲನೆ ನೀಡಲಾಯಿತು. ಕೋಟೆಕೊಪ್ಪ ಗ್ರಾಮದ ಯಲ್ಲಮ್ಮ ಇತ್ತೀಚೆಗೆ ನಿಧನರಾಗಿದ್ದರು. ಗ್ರಾಪಂ ಸಿಬ್ಬಂದಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಕುಟುಂಬ ಸದಸ್ಯರಿಗೆ ಯಲ್ಲಮ್ಮ ಅವರ ಮರಣ ಪ್ರಮಾಣ ಪತ್ರ ವಿತರಿಸಿದರು. ಗ್ರಾಪಂ ಅಧ್ಯಕ್ಷ ಹೆಚ್.ಆರ್.ಪ್ರಶಾಂತ್, ಪಿಡಿಒ ಶೇಖರಪ್ಪ, ಎಸ್ಡಿಎ ವಿಶಾಲಾಕ್ಷಿ ಹಾಗೂ ಸಿಬ್ಬಂದಿ ಮುರುಘಂದ್ರಪ್ಪ, ಎಚ್.ಆರ್.ಶ್ರೀನಿವಾಸ್, ಅಶ್ವಿನಿ, ಶಿಲ್ಪಾ, ಹರೀಶ್ ಇತರರಿದ್ದರು.
ರೈತ ಮಹಿಳೆಯರಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ
ಶಿವಮೊಗ್ಗ ಲೈವ್.ಕಾಂ : ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಹಸು, ಎಮ್ಮೆ ಖರೀದಿಗೆ 2024-25ನೇ ಸಾಲಿನಲ್ಲಿ ರಾಜ್ಯ ಸರ್ಕಾರದಿಂದ ಶೇ.6ರ ಬಡ್ಡಿ ದರದಲ್ಲಿ ರೈತ ಮಹಿಳೆಯರಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಮಾಹಿತಿಗಾಗಿ ಆಯಾ ತಾಲ್ಲೂಕು ಮುಖ್ಯ ಪಶುವೈದ್ಯಾಧಿಕಾರಿ ಹಾಗೂ ಸಮೀಪದ ಪಶು ವೈದ್ಯಕೀಯ ಸಂಸ್ಥೆಗಳನ್ನು ಸಂಪರ್ಕಿಸಬಹುದು ಎಂದು ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಬಾಬುರತ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಡಿಕೆ ಬೆಳೆಗಾರರ ಸಂಘದಿಂದ ಶ್ರೀಗಳ ಭೇಟಿ
ಶಿವಮೊಗ್ಗ ಲೈವ್.ಕಾಂ : ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದಿಂದ ನವೆಂಬರ್ನಲ್ಲಿ ಅಡಿಕೆ ಬೆಳೆಗಾರರ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಪದಾಧಿಕಾರಿಗಳು ಶನಿವಾರ ಆನಂದಪುರದಲ್ಲಿನ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಸಮಾವೇಶದ ಸಾನ್ನಿಧ್ಯ ವಹಿಸುವಂತೆ ಹಾಗೂ ಮಾರ್ಗದರ್ಶನ ನೀಡುವಂತೆ ವಿನಂತಿಸಿದರು. ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್ ವರದಾಮೂಲ, ಪದಾಧಿಕಾರಿಗಳಾದ ರಾಜೇಂದ್ರ ಖಂಡಿಕ, ಅಚ್ಯುತನ್ ಅಯ್ಯಂಗಾರ್ ಆನಂದಪುರ, ಮಹೇಶ, ಅನಿಲ್ ಒಡೆಯರ್ ಇತರರಿದ್ದರು.
ಇದನ್ನೂ ಓದಿ ⇓
ಕೆಟ್ಟು ನಿಂತ ಲಾರಿ, ಬೆಳಗ್ಗೆ ಬಂದ ಮಾಲೀಕನಿಗೆ ಕಾದಿತ್ತು ಆಘಾತ | ಭದ್ರಾ ಡ್ಯಾಂಗೆ ಹೊರಟವನಿಗೆ ಮಚ್ಚಿನೇಟು | ಫಟಾಫಟ್ ನ್ಯೂಸ್
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200