SHIVAMOGGA LIVE NEWS | 6 DECEMBER 2022
NEWS 1 – ಮೈಸೂರು – ತಾಳಗುಪ್ಪ ರೈಲಿನಲ್ಲಿ ಅನಾಮಧೇಯ ಗಿಫ್ಟ್ ಬಾಕ್ಸ್
ತಾಳಗುಪ್ಪ : ಮೈಸೂರ – ತಾಳಗುಪ್ಪ ರೈಲಿನಲ್ಲಿ ಅನಾಮಧೇಯ ಗಿಫ್ಟ್ ಬಾಕ್ಸ್ (gift box in train) ಪತ್ತೆಯಾಗಿತ್ತು. ಪೊಲೀಸರು ಅದನ್ನು ವಾರಸುದಾರರಿಗೆ ಒಪ್ಪಿಸಿದ್ದಾರೆ. ತಾಳಗುಪ್ಪ ನಿಲ್ದಾಣದಲ್ಲಿ ರೈಲು ಪರಿಶೀಲನೆ ವೇಳೆ ಗಿಫ್ಟ್ ಬಾಕ್ಸ್ ಸಿಕ್ಕಿದೆ. ರೈಲ್ವೆ ಪೊಲೀಸ್ ಎಎಸ್ಐ ಕೆ.ರಮೇಶ್ ಅವರು ಗಿಫ್ಟ್ ಬಾಕ್ಸನ್ನು ಪರಿಶೀಲಿಸಿದ್ದಾರೆ. ಬಳಿಕ ವಾರಸುದಾರರನ್ನು ಪತ್ತೆ ಹಚ್ಚಿ ಒಪ್ಪಿಸಿದ್ದಾರೆ. ರೈಲು ಇಳಿದು ಹೋಗುವಾಗ ಪ್ರಯಾಣಿಕ ಗಿಫ್ಟ್ ಬಾಕ್ಸನ್ನು ಮರೆತು ಹೋಗಿದ್ದರು.
ALSO READ – ತಾಳಗುಪ್ಪ – ಮೈಸೂರು ಎಕ್ಸ್ ಪ್ರೆಸ್ ರೈಲಿಗೆ ಹೊಸ ಹೆಸರು ನಾಮಕರಣ
(gift box in train)
NEWS 2 – ಕೊಟ್ಟಿಗೆಗೆ ಬೆಂಕಿ, ಧಗಧಗ ಉರಿದ ಹುಲ್ಲು, ಹಿಂಡಿ
ಸಾಗರ : ಗೋಶಾಲೆ ರೀತಿಯಲ್ಲಿದ್ದ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ, ಹುಲ್ಲು, ಹಿಂಡಿ ನಾಶವಾಗಿದೆ. ಸಾಗರದ ಜೋಗ ರಸ್ತೆಯಲ್ಲಿ ಮೋಹನ್ ಟೈರ್ಸ್ ಮಾಲೀಕ ಆರ್.ಜಿ.ಬಾಪಟ್ ಎಂಬುವವರಿಗೆ ಸೇರಿದ ಕೊಟ್ಟಿಗೆಗೆ ಬೆಂಕಿ ತಗುಲಿದೆ. ಕೆಲವೆ ಕ್ಷಣದಲ್ಲಿ ಲಕ್ಷಾಂತರ ಮೌಲ್ಯದ ಹುಲ್ಲು, ಹಿಂಡಿ ಬೆಂಕಿಗೆ ಆಹುತಿಯಾಗಿದೆ. ಕೊಟ್ಟಿಗೆಯಲ್ಲಿ 18 ಹಸು, 4 ಎಮ್ಮೆ, ಕೆಲವು ಕರುಗಳು ಇದ್ದವು ಎನ್ನಲಾಗಿದೆ. ಗೋವುಗಳನ್ನ ರಕ್ಷಣೆ ಮಾಡಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರು. ಶಾಸಕ ಹರತಾಳು ಹಾಲಪ್ಪ, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ, ಉಪಾಧ್ಯಕ್ಷ ವಿ. ಮಹೇಶ್ ಸೇರಿದಂತೆ ಹಲವರು ಸ್ಥಳಕ್ಕೆ ಭೇಟಿ ನೀಡಿದ್ದರು.
(gift box in train)
NEWS 3 – ಮರ ಕೊಯ್ಯುವಾಗ ಅರಣ್ಯ ಸಂಚಾರಿ ದಳ ದಾಳಿ
ಸಾಗರ : ವಿದ್ಯುತ್ ಚಾಲಿತ ಯಂತ್ರಗಳನ್ನ ಬಳಸಿ ಸಾಗುವಾನಿ ಮರ ಕೊಯ್ದು ಹಲಗೆ ಮಾಡುತ್ತಿದ್ದ ಆರೋಪಿಯನ್ನು ಅರಣ್ಯ ಸಂಚಾರಿ ದಳದ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಸಾಗರ ತಾಲೂಕು ಹೆಗ್ಗೋಡಿಯಲ್ಲಿ ಘಟನೆ ಸಂಭವಿಸಿದೆ. ಜನ್ನೆಹಕ್ಲು ನಿವಾಸಿ ಅಣ್ಣಪ್ಪ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಮರ ಕೊಯ್ಯುವ ಯಂತ್ರವನ್ನು ವಶಕ್ಕೆ ಪಡೆದು ವಲಯ ಅರಣ್ಯ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200