ಸಿಗಂದೂರು ಸೇತುವೆ ವೈಭವ ಕಣ್ತುಂಬಿಕೊಂಡ ಕನ್ನಡದ ನಟ, ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಪ್ರಕಟ

ಸಾಗರ : ಸಿಗಂದೂರು ಸೇತುವೆ (Bridge) ಕಾಮಗಾರಿ ಕೊನೆಯ ಹಂತಕ್ಕೆ ತಲುಪಿದೆ. ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ನಟ ಶರಣ್‌, ಲಾಂಚ್‌ನಲ್ಲಿ ತೆರಳುವಾಗ ತೂಗು ಸೇತುವೆ ಮುಂಭಾಗ ವಿಡಿಯೋ ಮಾಡಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ » ಸಿಗಂದೂರು ಸೇತುವೆ, ಮತ್ತೊಂದು ಮಹತ್ವದ ಬೆಳವಣಿಗೆ, ಫೋಟೊ ಹಂಚಿಕೊಂಡ ಸಂಸದ ರಾಘವೇಂದ್ರ

ಅಂಬರಗೋಡ್ಲು – ಕಳಸವಳ್ಳಿ ಮಧ್ಯೆ ತೂಗು ಸೇತುವೆ ನಿರ್ಮಾಣವಾಗುತ್ತಿದೆ. ಸೇತುವೆ (Bridge) ಉದ್ಘಾಟನೆ ನಂತರ ಇಲ್ಲಿನ ಲಾಂಚ್‌ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆ ನಟ ಶರಣ್‌ ಸೇತುವೆ ಮತ್ತು ಲಾಂಚ್‌ ಎರಡರ ಕುರಿತು ತಮ್ಮ ಸಾಮಾಜಿಕ ಜಾಲಾತಣದಲ್ಲಿ ಪ್ರಕಟಿಸಿದ್ದಾರೆ.

ನಟ ಶರಣ್‌ ಪ್ರಕಟಿಸಿದ್ದೇನು?

Web-Design

‘ಸಿಗಂದೂರು ಚೌಡೇಶ್ವರಿ ಅಮ್ಮನವರ ದರ್ಶನಕ್ಕೆಂದು ಲಾಂಚ್ ದೋಣಿಯಲ್ಲಿ ಹೋಗುವ ಅನುಭವವೇ ಸ್ಮರಣೀಯ. ಇನ್ನೇನು ಕೆಲವೆ ದಿನಗಳಲ್ಲಿ ಸೇತುವೆ ತೆರೆಯುತ್ತದೆ. ಲಾಂಚ್‌ನ ಖುಷಿಯ ಜೊತೆಗೆ ಅಮ್ಮನವರ ದರ್ಶನ, ಮರೆಯಲಾಗದ ಅನುಭವವೇ ಸರಿʼ ಎಂದು ನಟ ಶರಣ್‌ ತಮ್ಮ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆ. ಇಲ್ಲಿದೆ ವಿಡಿಯೋ.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : March 25, 2025 at 5:15 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಮಾರ್ಚ್ 25, 2025

Leave a Comment