GOOD MORNING SHIMOGA, 1 SEPTEMBER 2024
ನಿಮ್ಮ ಆಲೋಚನೆಗಳು ಮಹತ್ವದ ಪಾತ್ರ ವಹಿಸುತ್ತವೆ. ಆದ್ದರಿಂದ ಬುದ್ದಿವಂತಿಕೆಯಿಂದ ಯೋಚಿಸಿ.
» ಜಿಲ್ಲೆಗೆ ಆರೆಂಜ್ ಅಲರ್ಟ್
ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಆಗಾಗ ಮಳೆಯಾಗುತ್ತಿದೆ. ಇನ್ನು, ಇವತ್ತು ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಸದ್ಯ ಜಿಲ್ಲೆಯಲ್ಲಿ ಮಳೆಯ ಜೊತೆಗೆ ಜೋರು ಬಿಸಿಲಿದೆ. ಇನ್ನು, ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕಿನಲ್ಲಿ ಇವತ್ತು ಗರಿಷ್ಠ 28 ಡಿಗ್ರಿ, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ತೀರ್ಥಹಳ್ಳಿಯಲ್ಲಿ ಗರಿಷ್ಠ 29 ಡಿಗ್ರಿ, ಕನಿಷ್ಠ 24 ಡಿಗ್ರಿ ಸೆಲ್ಸಿಯಸ್, ಸಾಗರ, ಹೊಸನಗರ, ಸೊರಬ, ಶಿಕಾರಿಪುರ ತಾಲೂಕುಗಳಲ್ಲಿ ಗರಿಷ್ಠ 32 ಡಿಗ್ರಿ, ಕನಿಷ್ಠ 25 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.
ಶಿವಮೊಗ್ಗ ಲೈವ್.ಕಾಂ
ಇದನ್ನೂ ಓದಿ ⇒ ದಿನ ಭವಿಷ್ಯ | 1 ಸೆಪ್ಟೆಂಬರ್ 2024 | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ?
ಶಿವಮೊಗ್ಗ ಮಾರುಕಟ್ಟೆ ಧಾರಣೆ
ಧಾನ್ಯ | ಕನಿಷ್ಠ ದರ | ಗರಿಷ್ಠ ದರ |
ಕಡಲೆಬೇಳೆ | 9700 | 10000 |
ಕಡಲೆಕಾಳು | 8000 | 9000 |
ಉದ್ದಿನಬೇಳೆ | 11800 | 16000 |
ಕೆಂಪು ಮೆಣಸಿನಕಾಯಿ | 15300 | 16500 |
ಧನಿಯಾ (ಕೊತ್ತಂಬರಿ ಬೀಜ) | 9000 | 10500 |
ಹೆಸರುಬೇಳೆ | 10500 | 11000 |
ಹೆಸರುಕಾಳು | 8000 | 10000 |
ಹುರುಳಿ ಕಾಳು | 6000 | 7800 |
ಉಂಡೆ ಬೆಲ್ಲ | 4200 | 4600 |
ಜೋಳ | 3000 | 4800 |
ಮೆಂತ್ಯ ಬೇಜ | 7500 | 9200 |
ಸಾಸಿವೆ | 7200 | 7800 |
ರಾಗಿ | 3800 | 4500 |
ಅಕ್ಕಿ (ದಪ್ಪ) | 2150 | 3850 |
ಅಕ್ಕಿ (ಉತ್ತಮ) | 4500 | 7800 |
ಅಕ್ಕಿ (ಮಧ್ಯಮ) | 3800 | 5500 |
ಹುಣಸೇಹಣ್ಣು | 7000 | 14000 |
ತೊಗರಿ ಬೇಳೆ | 15300 | 16500 |
ಗೋಧಿ | 3700 | 4300 |
» SHIMOGA CITY NEWS
ಗೋಪಾಳ : ಜಿಲ್ಲಾಧಿಕಾರಿ ಸೂಚನೆ ಮೇರೆಗೆ ದಾಳಿ ನಡೆಸಿ ಹುಕ್ಕಾ ಬಾರ್ ಮೇಲೆ ಪೊಲೀಸ್ ಮತ್ತು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳಿಂದ ದಾಳಿ, ತೆರವು.
ಶಿವಮೊಗ್ಗ : ಸೆ.10 ರಿಂದ ವಾಹನಗಳ ಇನ್ಷುರೆನ್ಸ್ ತಪಾಸಣೆ ಕಾರ್ಯಾಚರಣೆ ನಡೆಸಲಾಗುತ್ತದೆ. ಅಷ್ಟರೊಳಗೆ ವಾಹನಗಳ ಇನ್ಷುರೆನ್ಸ್ ನವೀಕರಣ ಮಾಡಿಸಿಕೊಳ್ಳುವಂತೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಸೂಚನೆ.
ಪತ್ರಿಕಾ ಭವನ : ಶಿವಮೊಗ್ಗದಲ್ಲಿ ಈ ಭಾರಿ ವಿಜೃಂಭಣೆಯ ದಸರಾ ಆಚರಣೆ. ಪಾಲಿಕೆ ಬಜೆಟ್ನಲ್ಲಿ 1.50 ಕೋಟಿ ರೂ. ಮೀಸಲಿಡಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಮಾಜಿ ಸದಸ್ಯ ಹೆಚ್.ಸಿ.ಯೋಗೇಶ್ ಹೇಳಿಕೆ.
ಪತ್ರಿಕಾ ಭವನ : ಒಳ ಮೀಸಲು ಸಂಬಂಧ ಕೆಲವು ಅಧಿಕಾರಿಗಳು, ಸಂಘಟನೆಗಳು ವಿಚಾರ ಸಂಕಿರಣದ ನೆಪದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಶ್ನಿಸುತ್ತಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾದಿಗ ದಂಡೋರ ಸಮಿತಿ ಅಧ್ಯಕ್ಷ ಹನುಮಂತಪ್ಪ ಮಂಗೋಟೆ ಆಕ್ರೋಶ.
ಜಿಲ್ಲಾಧಿಕಾರಿ ಕಚೇರಿ : ಶರಾವತಿ ನದಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಯೋಜನೆ ಕೈಬಿಡದಿದ್ದರೆ ಶಿವಮೊಗ್ಗ ಜಿಲ್ಲಾ ಬಂದ್ ಮಾಡಲಾಗುತ್ತದೆ. ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಪ್ರತಿಭಟನೆ. ಸಿಎಂಗೆ ಮನವಿ.
ಸರ್ಜಿ ಕನ್ವೆಷನ್ ಹಾಲ್ : ಸಿಬಿಎಸ್ಸಿ ಶಾಲೆಗಳ ಒಕ್ಕೂಟದ ವಾರ್ಷಿಕ ಸಮ್ಮೇಳನಕ್ಕೆ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಚಾಲೆನ. ವಿವಿಧೆಡೆಯ ಸಿಬಿಎಸ್ಸಿ ಶಾಲೆಗಳ ಶಿಕ್ಷಕರು ಭಾಗಿ.
ಜಿಲ್ಲಾಧಿಕಾರಿ ಕಚೇರಿ : ಭೂ ಸ್ವಾಧೀನ ಮತ್ತು ಅರಣ್ಯ ಭೂಮಿ ಬಿಡುಗಡೆ ಸಮಸ್ಯೆಗಳ ಪರಿಹಾರ ಕುರಿತು ಸಭೆ. ‘ಅರಣ್ಯ ಭೂಮಿ ಒತ್ತುವರಿದಾರರನ್ನು ತೆರವು ಮಾಡಬಾರದು ಮತ್ತು ನೊಟೀಸ್ ಕೊಡಬಾರದು’ ಎಂದು ಸಂಸದ ರಾಘವೇಂದ್ರ ಅಧಿಕಾರಿಗಳಿಗೆ ಸೂಚನೆ.
ಶಿವಮೊಗ್ಗ : ಕುಂಸಿ ಠಾಣೆ ಇನ್ಸ್ಪೆಕ್ಟರ್ ಆಗಿ ದೀಪಕ್, ಕೋಟೆ ಠಾಣೆಗೆ ಇನ್ಸ್ಪೆಕ್ಟರ್ ಆಗಿ ಹರೀಶ್ ಪಟೇಲ್ ಅವರನ್ನು ವರ್ಗಾಯಿಸಲಾಗಿದೆ.
ಶಿವಮೊಗ್ಗ ಲೈವ್.ಕಾಂ
ಇದನ್ನೂ ಓದಿ ⇒ ಸಚಿವ ಮಧು ಬಂಗಾರಪ್ಪ ಎರಡು ದಿನ ಶಿವಮೊಗ್ಗ ಜಿಲ್ಲಾ ಪ್ರವಾಸ, ಜನತಾ ದರ್ಶನ
TALUK NEWS
» SHIMOGA, BHADRAVATHI, THIRTHAHALLI NEWS
ಶಿವಮೊಗ್ಗ : ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾಗಿ ಮಂಜುನಾಥ್ ಅವರನ್ನು ವರ್ಗಾಯಿಸಲಾಗಿದೆ. ಈವರೆಗೂ ಡಿಡಿಪಿಐ ಆಗಿದ್ದ ಪರಮೇಶ್ವರ್ ಅವರನ್ನು ಬೆಂಗಳೂರಿಗೆ ವರ್ಗಾಯಿಸಲಾಗಿದೆ.
ಜಿಲ್ಲಾ ಪಂಚಾಯಿತಿ : ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನಷ್ಟಾನ ಸಮಿತಿ ಸಭೆ. ‘ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕುʼ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್ ಸೂಚನೆ.
ಭದ್ರಾವತಿ : ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕದ ವತಿಯಿಂದ ಕಾರ್ಯಕ್ರಮ. ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಉದ್ಘಾಟನೆ.
ತೀರ್ಥಹಳ್ಳಿ : ವಾಟ್ಸಪ್ ಸ್ಟೇಟಸ್ನಲ್ಲಿ ಲೆಟರ್ ಅಪ್ಲೋಡ್ ಮಾಡಿ ಇಂದಾವರ ಗ್ರಾಮದ ಜಯದೀಪ ನಾಪತ್ತೆ. ತುಂಗಾ ನದಿಗೆ ಜಿಗಿದಿರುವ ಶಂಕೆ ಮೇರೆಗೆ ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯ.
ತೀರ್ಥಹಳ್ಳಿ : ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡುವ ಮುನ್ನ ಜಾಗ್ರತೆ ವಹಿಸಿ. ಹೂಡಿಕೆ ಹಣಕ್ಕೆ ಯಾವುದೇ ಖಚಿತ ಮಾನ್ಯತೆ ಇಲ್ಲದೆ ವಂಚನೆಗೆ ಒಳಗಾಗಬೇಡಿ. ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರ ಎಚ್ಚರಿಕೆ.
ಶಿವಮೊಗ್ಗ ಲೈವ್.ಕಾಂ
ಇದನ್ನೂ ಓದಿ ⇒ ಶಿವಮೊಗ್ಗ ಜಿಲ್ಲೆ ಬಂದ್ನ ಎಚ್ಚರಿಕೆ ನೀಡಿದ ವೀರಶೈವ ಲಿಂಗಾಯತ ಮಹಾಸಭಾ, ಕಾರಣವೇನು?
TALUK NEWS
» HOSANAGARA, SAGARA, SORABA, SHIKARIPURA
ಹೊಸನಗರ : ಕಾಲು ಸಂಕ ದಾಟುವಾಗ ಜಾರಿ ಹಳ್ಳಕ್ಕೆ ಬಿದ್ದು ಮೃತಪಟ್ಟ ಮೂಡುಗೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈಸೆ ಗ್ರಾಮದ ಶ್ರೀಧರಪುರದ ಶಶಿಕಲಾ ಅವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದ ಶಾಸಕ ಆರಗ ಜ್ಞಾನೇಂದ್ರ.
ಹೊಸನಗರ : ನಿವೃತ್ತ ಗ್ರಾಮ ಆಡಳಿತಾಧಿಕಾರಿ ಸದಾಶಿವ ಅವರನ್ನು ಕಚೇರಿಯಿಂದ ವಾಹನದಲ್ಲಿ ಕೂರಿಸಿಕೊಂಡು ಸ್ವತಃ ಚಾಲನೆ ಮಾಡಿಕೊಂಡು ಹೋಗಿ ಮನೆಗೆ ಬಿಟ್ಟು ಬಂದ ತಹಶೀಲ್ದಾರ್ ರಶ್ಮಿ ಹಾಲೇಶ್.
ಹೊಸನಗರ : ಹುಲಿಕಲ್ ಹೆದ್ದಾರಿಯಲ್ಲಿ ಕ್ಯಾಂಟರ್ ಮತ್ತು ಲಾರಿಗಳು ಮುಖಾಮುಖಿ ಡಿಕ್ಕಿ. ಕ್ಯಾಂಟರ್ ಮಂಗಳೂರು ಕಡೆಯಿಂದ ಶಿವಮೊಗ್ಗ ಕಡೆಗೆ ತೆರಳುತ್ತಿತ್ತು. ಲಾರಿ ಮಂಗಳೂರು ಕಡೆಗೆ ತೆರಳುತ್ತಿತ್ತು.
ಸಾಗರ : ತುರ್ತು ನಿರ್ವಹಣೆ ಕಾಮಗಾರಿ ಹಿನ್ನೆಲೆ ಸಾಗರ ಪಟ್ಟಣ ಮತ್ತು ಗ್ರಾಮಾಂತರ ಭಾಗದ ವಿವಿಧೆಡೆ ಇವತ್ತು ಬೆಳಗ್ಗೆಯಿಂದ 10 ರಿಂದ ಸಂಜೆ 5ರವರೆಗೆ ಕರೆಂಟ್ ಇರಲ್ಲ.
ರಿಪ್ಪನ್ಪೇಟೆ : ಹೊಂಬುಜ ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಜೈನ ಮಠದ ಪೀಠಾಧಿಕಾರಿ ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಅವರು ಕೊನೆ ಶ್ರಾವಣ ಶುಕ್ರವಾರದ ಅಂಗವಾಗಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಸಾಗರ : ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಇಳಿಕೆ. ತಗ್ಗಿತು ಲಿಂಗನಮಕ್ಕಿ ಜಲಾಶಯದ ನೀರಿನ ಒಳಹರಿವು. ಅಣೆಕಟ್ಟೆಯ ರೇಡಿಯಲ್ ಗೇಟ್ ಮೂಲಕ ಹೊರ ಹರಿವು ನಿಲುಗಡೆ.
ಶಿಕಾರಿಪುರ : ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಕನ್ನಡ ಭಾಷಾ ವಿಷಯ ಶಿಕ್ಷಕರ ಕಾರ್ಯಾಗಾರಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಬಿ.ಲೋಕೇಶಪ್ಪ ಚಾಲನೆ. ಮಾತೃ ಭಾಷೆ ಕಲಿಕೆಗೆ ಶಿಕ್ಷಕರು ಆದ್ಯತೆ ನೀಡುವಂತೆ ಸಲಹೆ.
ಸೊರಬ : ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರ ಇಂದಿನಿಂದ ಎರಡು ದಿನ ಕ್ಷೇತ್ರದಲ್ಲಿ ಪ್ರವಾಸ. ಸೆ.2ರಂದು ವಿವಿಧ ಸಭೆ, ಜನತಾದರ್ಶನದಲ್ಲಿ ಭಾಗಿ.
ಇದನ್ನೂ ಓದಿ ⇒ ಶಿವಮೊಗ್ಗದಲ್ಲಿ ಹುಕ್ಕಾ ಬಾರ್ ಮೇಲೆ ದಾಳಿ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200