ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
GOOD MORNING SHIMOGA, 4 SEPTEMBER 2024
ನೀವು ಉತ್ತಮರಾಗಲು ಬಯಸಿದರೆ ಹೆಚ್ಚು ಅನುಭವಿ ಜನರಿಂದ ಸಲಹೆ ಪಡೆಯಲು ಪ್ರಾರಂಭಿಸಿ.
ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಪ್ರಮಾಣ ಸಂಪೂರ್ಣ ತಗ್ಗಿದೆ. ಈ ಹಿನ್ನೆಲೆ ತಪಮಾನ ತುಸು ಏರಿಕೆಯಾಗಿದೆ. ಇವತ್ತು ಶಿವಮೊಗ್ಗ, ಭದ್ರಾವತಿ ತಾಲೂಕಿನಲ್ಲಿ ತಾಪಮಾನ ಗರಿಷ್ಠ 28 ಡಿಗ್ರಿ, ಕನಿಷ್ಠ 21 ಸೆಲ್ಸಿಯಸ್ ಇರಲಿದೆ. ತೀರ್ಥಹಳ್ಳಿಯಲ್ಲಿ ಗರಿಷ್ಠ 29 ಡಿಗ್ರಿ, ಕನಿಷ್ಠ 25 ಡಿಗ್ರಿ, ಹೊಸನಗರ, ಸಾಗರ, ಸೊರಬ ಮತ್ತು ಶಿಕಾರಿಪುರ ತಾಲೂಕುಗಳಲ್ಲಿ ಗರಿಷ್ಠ 30 ಡಿಗ್ರಿ, ಕನಿಷ್ಠ 25 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.» ತಾಪಮಾನ ತುಸು ಹೆಚ್ಚಳ
SHIMOGA CITY NEWS ಬಿಜೆಪಿ ಕಚೇರಿ : ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದಾಗಿಯೇ ಅಯನೂರು ಮಂಜುನಾಥ್ ಸ್ಥಾನಮಾನ ಅನುಭವಿಸಿದ್ದರು. ಅವರ ವಿರುದ್ಧ ಮಾತನಾಡಿರುವುದು ಸರಿಯಲ್ಲ. ತಕ್ಷಣ ಕ್ಷಮೆ ಕೇಳಬೇಕು. ಮಾಜಿ ಸಚಿವ ಹರತಾಳು ಹಾಲಪ್ಪ ಆಗ್ರಹ. ಪತ್ರಿಕಾ ಭವನ : ಕೇಂದ್ರ ಸಚಿವರಾದ ನಂತರ ಇದೇ ಮೊದಲು ಶಿವಮೊಗ್ಗ ನಗರಕ್ಕೆ ಹೆಚ್.ಡಿ.ಕುಮಾರಸ್ವಾಮಿ ಅಗಮನ. ಸೆ.5ರಂದು ಶುಭಮಂಗಳ ಸಭಾ ಭವನದಲ್ಲಿ ಕಾರ್ಯಕರ್ತರ ಸಭೆ. ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಳು ಗೋಪಾಲ್ ಹೇಳಿಕೆ. ಬಿಜೆಪಿ ಕಚೇರಿ : ಸಿದ್ದರಾಮಯ್ಯ ಸರ್ಕಾರ ದಿವಾಳಿಯಾಗಿದೆ. ರಾಜ್ಯದ ಸಾಲದ ಮೊತ್ತ ಹೆಚ್ಚಾಗುತ್ತಿದೆ. ಶಿವಮೊಗ್ಗದಲ್ಲಿ ಕುಡುಚಿ ಮಾಜಿ ಶಾಸಕ ಪಿ.ರಾಜೀವ್ ಆರೋಪ. ಜಿಲ್ಲಾಧಿಕಾರಿ ಕಚೇರಿ : ಕೋಲ್ಕತ್ತಾದಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ, ಕೊಲೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷಗೆ ಆಗ್ರಹ. ವಿವಿಧ ಸಂಘಟನೆಗಳಿಂದ ಮೆರವಣಿಗೆ ಜಿಲ್ಲಾಧಿಕಾರಿಗೆ ಮನವಿ. ಜಿಲ್ಲಾಧಿಕಾರಿ ಆದೇಶ : ಗಣೇಶ ಚತುರ್ಥಿ, ಈದ್ ಮಿಲಾದ್ ಹಬ್ಬಗಳ ಹಿನ್ನೆಲೆ. ಶಿವಮೊಗ್ಗ ಜಿಲ್ಲೆಯಲ್ಲಿ ಬೈಕ್ ಜಾಥಾ, ಡಿಜೆಗೆ ನಿಷೇಧ. ಗಣೇಶ ವಿಸರ್ಜನೆಗೆ ತೆಪ್ಪ ಬಳಕೆಗೆ ಷರತ್ತು ವಿಧಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ. ಶಿವಮೊಗ್ಗ ಸಿಟಿಯಲ್ಲಿ ನಿನ್ನೆ ಇಡೀ ದಿನ ಏನೇನಾಯ್ತು ಓದಲು ಇಲ್ಲಿ ಕ್ಲಿಕ್ ಮಾಡಿ. ಇದನ್ನೂ ಓದಿ » ಶಿವಮೊಗ್ಗ ನಗರದಲ್ಲಿ ಇವತ್ತು ಏನೇನಾಯ್ತು? ಒಂದೇ ಕ್ಲಿಕ್ನಲ್ಲಿ ಕಂಪ್ಲೀಟ್ ನ್ಯೂಸ್
TALUK NEWS ತೀರ್ಥಹಳ್ಳಿ : ಆಗುಂಬೆ ಸಮೀಪ ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಿಚಿಕಟ್ಟೆ ಸಮೀಪದ ಕಾರ್ಬೈಲು ಗುಡ್ಡ ಕುಸಿತ. ಸ್ಥಳೀಯರಲ್ಲಿ ಆತಂಕ. ಭದ್ರಾವತಿ : ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ. ವಿವಿಯಲ್ಲಿ ಹಂತ ಹಂತವಾಗಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮದ ಭರವಸೆ. ಹೊಸನಗರ : ರಿಪ್ಪನ್ಪೇಟೆ ಸಮೀಪದ ಗವಟೂರು ಮಲ್ಲಾಪುರದಲ್ಲಿ ಗಾಳಿ ಸಹಿತ ಮಳೆಗೆರೈತ ಗೋಪಾಲ್ ಅವರ ಮನೆಗೆ ಒಂದು ಬದಿಯ ಗೋಡೆ ಕುಸಿದಿದೆ. ಸಾಗರ : ಗಣಪತಿ ಕರೆ ಮೇಲಿನ ರಸೆ ಅಭಿವೃದ್ಧಿ ಕಾರ್ಯಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ ನೀಡಿದರು. ಸ್ವಚ್ಛತಾ ಕಾರ್ಯ ಪರಿಶೀಲಿಸಿದರು. ಶಿಕಾರಿಪುರ : ತಾಲೂಕು ಮಟ್ಟದ ತ್ರೈಮಾಸಿಕ ಸಭೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಬಿ.ವೈ.ವಿಜಯೇಂದ್ರ ಭಾಗಿ. ಬಹುಗ್ರಾಮ ಕುಡಿಯುವ ನೀರು, ಒತ್ತುವರಿ ತೆರವು ಸೇರಿದಂತೆ ಪ್ರಮುಖ ವಿಚಾರಗಳ ಚರ್ಚೆ.
ಇದನ್ನೂ ಓದಿ » ಶಿವಮೊಗ್ಗ ಏರ್ಪೋರ್ಟ್, ಇನ್ನು 20 ದಿನಕ್ಕಷ್ಟೇ ಲೈಸೆನ್ಸ್, ಷರತ್ತು ಪೂರೈಸದಿದ್ದರೆ ವಿಮಾನ ಹಾರಾಟಕ್ಕೆ ತೊಡಕು
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422