ಶಿವಮೊಗ್ಗ: ಯಾದಗಿರಿ ಜಿಲ್ಲೆಯಲ್ಲಿ 9ನೇ ತರಗತಿ ಬಾಲಕಿ ಮಗುವಿನ ಜನ್ಮ ನೀಡಿದ ಪ್ರಕರಣದ ಬೆನ್ನಿಗೆ ಶಿವಮೊಗ್ಗದಲ್ಲಿಯು ಇಂತಹುದೆ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ಎರಡು ದಿನದ ಹಿಂದೆ 9ನೇ ತರಗತಿಯ ವಿದ್ಯಾರ್ಥಿನಿ (Student) ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. (ಈ ಸುದ್ದಿಯನ್ನು ಇನ್ನು 42 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
15 ವರ್ಷದ ಬಾಲಕಿಯೊಬ್ಬಳು ಈಚೆಗೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಕಳೆದ ಎರಡು ದಿನದ ಹಿಂದೆ ಮನೆಯಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. 7 ತಿಂಗಳ ಗಂಡು ಶಿಶು 1.8 ಕೆ.ಜಿ ತೂಕವಿದೆ. ಕೂಡಲೆ ಮಗು ಮತ್ತು ಬಾಲಕಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇನ್ನು, ವಿಷಯ ತಿಳಿಯುತ್ತಿದ್ದಂತೆ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ ಹಾಗೂ ಪೊಲೀಸರು ಬಾಲಕಿಯ ವಿಚಾರಣೆ ನಡೆಸಿದರು.
ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯಲ್ಲಿ ಏನೇನಾಯ್ತು? ಒಂದೇ ಕ್ಲಿಕ್ನಲ್ಲಿ ಎಲ್ಲ ಸುದ್ದಿಗಳು
ಗಮನಕ್ಕೆ: ಅಪ್ರಾಪ್ತೆಯ ಪ್ರಕರಣವಾದ್ದರಿಂದ ಆಕೆಯ ಹೆಸರು, ವಿಳಾಸ ಮತ್ತು ಯಾವುದೇ ಬಗೆಯ ಗುರುತು ಪತ್ತೆಯಾಗುವಂತಹ ವಿಷಯ ಪ್ರಕಟಿಸುವಂತ್ತಿಲ್ಲ.
ninth standard Student gives birth to baby boy
