ಶಿವಮೊಗ್ಗ ಲೈವ್.ಕಾಂ | SHIMOGA | 24 ಫೆಬ್ರವರಿ 2020
ಜಿಲ್ಲೆಯಲ್ಲಿ ಕಳೆದ 30 ದಿನಗಳಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿಬರೋಬ್ಬರಿ 29 ಮೃತಪಟ್ಟಿದ್ದಾರೆ. ಇದರಲ್ಲಿ ಹೆಚ್ಚಿನ ಪ್ರಕರಣಗಳು ಹೆಲ್ಮಟ್ ಧರಿಸದ ಪ್ರಕರಣಗಳಾಗಿವೆ. ಇಂತಹ ಆಘಾತಕಾರಿ ಮಾಹಿತಿಯನ್ನು ಎಸ್ಪಿ ಕೆ.ಎಂ.ಶಾಂತರಾಜು ಬಹಿರಂಗ ಪಡಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200

ನಗರದ ಡಿಎಆರ್ ಸಭಾಂಗಣದಲ್ಲಿ ಎಸ್ಸಿ ಮತ್ತು ಎಸ್ಟಿ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಹೆಲ್ಮಟ್ ಧರಿಸದ ಸಾರ್ವಜನಿಕರ ರಕ್ಷಣೆಗೆ ಹೆಲ್ಮೆಟ್ ಪಕರಣ ಕಡ್ಡಾಯಗೊಳಿಸಲಾಗಿದೆ. ಕಳೆದೊಂದು ತಿಂಗಳಲ್ಲಿ ರಸ್ತೆ ಅಪಘಾತದಲ್ಲಿ 29 ಜನರು ಮೃತಪಟ್ಟಿದ್ದಾರೆ. ಅದರಲ್ಲಿ ಶೇ.60ಕ್ಕಿಂತ ಹೆಚ್ಚಿನ ಪ್ರಕರಣಗಳು ಹೆಲ್ಮೆಟ್ ಧರಿಸದ ಪ್ರಕರಣಗಳಾಗಿವೆ ಎಂದರು.
ಸರ್ಕಾರಕ್ಕೆ ಶ್ರೀಮಂತಿಕೆ ಬರುವುದಿಲ್ಲ
ಹೆಲೈಟ್ ಧರಿಸದ ಸವಾರರಿಗೆ 500 ರೂ. ದಂಡ ಹಾಕುವುದರಿಂದ ಸರ್ಕಾರಕ್ಕೆ ಶ್ರೀಮಂತಿಕೆ ಬರಲ್ಲ, ಅದೇ ಇನ್ನೂ 500 ರೂ. ಸೇರಿಸಿ ಒಳ್ಳೆಯ ಹೆಲೈಟ್ ತೆಗೆದುಕೊಂಡರೆ ಜೀವ ಉಳಿಯುತ್ತದೆ. ದುಡಿಯುವವರ ಜೀವ ಹೋದರೆ ಇಡೀ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯಬೇಕಾಗುತ್ತದೆ. ಈ ಬಗ್ಗೆ ಎಚ್ಚರವಹಿಸಿ ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ತಿಳಿಸಿದರು.
ಟ್ರಾಫಿಕ್ ಪೊಲೀಸರು ಹೆಲ್ಮೆಟ್ ಇಲ್ಲದವರನ್ನು ಹಿಡಿಯುವಾಗ ಜಾತಿ ಗುರುತಿಸುತ್ತಾರೆ ಎಂದು ಡಿಎಸ್‌ಎಸ್ ಕಾರ್ಯಕರ್ತ ಮಂಜುನಾಥ ದೂರಿನ ಕುರಿತು ಪ್ರತಿಕ್ರಿಯಿಸಿದ ಅವರು, ಪೊಲೀಸರು ಹಿಲ್ಮೆಟ್ ಇಲ್ಲದವರಿಗೆ ದಂಡ ಹಾಕುತ್ತಾರೆ. ಖಾಕಿ ಧರಿಸಿದ ಮೇಲೆ ಎಲ್ಲ ಸಾರ್ವಜನಿಕರು ಒಂದೇ. ಅಲ್ಲಿ ಜಾತಿ ಗುರುತಿಸುತ್ತಾರೆ ಎಂಬುದರಲ್ಲಿ ಹುರುಳಿಲ್ಲ ಎಂದರು.
ಡಿವೈಎಸ್ಪಿ ಉಮೇಶ್ ನಾಯ್, ಸಿಪಿಐ ವಸಂತಕುಮಾರ್ ಇದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]