ಶಿವಮೊಗ್ಗ ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಕ

ನಿಮ್ಮ ಊರಿನ ಸುದ್ದಿಗಳನ್ನು ನಮಗೆ ವಾಟ್ಸಪ್ ಮಾಡಿ 7411700200

ಶಿವಮೊಗ್ಗ: ರಾಜ್ಯದಲ್ಲಿ ಅವಧಿ ಪೂರ್ಣಗೊಂಡ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು (Administrators) ನೇಮಕ ಮಾಡಲಾಗಿದೆ. ಒಟ್ಟು 42 ನಗರಸಭೆ, 53 ಪುರಸಭೆ ಮತ್ತು 23 ಪಟ್ಟಣ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ನಗರಾಭಿವೃದ್ಧಿ ಇಲಾಖೆ ಆದೇಶಿಸಿದೆ. ಈ ಪೈಕಿ ಶಿವಮೊಗ್ಗ ಜಿಲ್ಲೆಯ ಕೆಲವು ಸ್ಥಳೀಯ ಸಂಸ್ಥೆಗಳಿವೆ.

ಸಾಗರ ನಗರಸಭೆಗೆ ಅ.30ರಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಅವರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಸೊರಬ ಪುರಸಭೆಗೆ ಅ.24ರಿಂದ ಸಾಗರ ಉಪವಿಭಾಗಾಧಿಕಾರಿ ಅವರನ್ನು ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ. ಹೊಸನಗರ ಪಟ್ಟಣ ಪಂಚಾಯಿತಿಗೆ ನ.4ರಿಂದ ಹೊಸನಗರ ತಹಶೀಲ್ದಾರ್‌ ಅವರನ್ನು ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ. ಜೋಗ ಕಾರ್ಗಲ್‌ ಪಟ್ಟಣ ಪಂಚಾಯಿತಿಗೆ ನ.5ರಿಂದ ಸಾಗರ ತಹಶೀಲ್ದಾರ್‌ ಅವರನ್ನು ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ.

ಇದನ್ನೂ ಓದಿ » ಡಿಪಿಗೆ ಸಾವರ್ಕರ್‌ ಫೋಟೊ ಬಳಸಿದ್ದಕ್ಕೆ ವಾಟ್ಸಪ್‌ ಕರೆ ಮಾಡಿ ಜೀವ ಬೆದರಿಕೆ

ಹೆಚ್ಚಿನ Shimoga News, Shivamogga News ಮತ್ತು NEWS ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.
Kalleshwara-Enterprises.webp

© ಶಿವಮೊಗ್ಗ ಲೈವ್‌ : ನವೆಂಬರ್ 9, 2025

Leave a Comment