ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA NEWS, 27 OCTOBER 2024 : ನಡುರಾತ್ರಿ ಬೈಕ್ನಲ್ಲಿ ಡ್ರಾಪ್ ಪಡೆದ ತೃತೀಯ ಲಿಂಗಿಯೊಬ್ಬಳು (Transgender) ಸವಾರನ ಕೊರಳಲಿದ್ದ 15 ಗ್ರಾಂ ತೂಕದ ಚಿನ್ನದ ಸರ ಕಳ್ಳತನ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ಮರ್ಯಾದೆಗೆ ಅಂಜಿದ ಬೈಕ್ ಸವಾರ ಒಂದೂವರೆ ತಿಂಗಳು ತಡವಾಗಿ ದೂರು ನೀಡಿದ್ದಾರೆ.
ಖಾಸಗಿ ಕಂಪನಿಯ ಉದ್ಯೋಗಿ (ಹೆಸರು ಗೌಪ್ಯ) ರಾತ್ರಿ 11.30ರ ಹೊತ್ತಿಗೆ ಬಸ್ ಸ್ಟಾಂಡ್ಗೆ ಬಂದು ಊಟ ಮುಗಿಸಿ ತನ್ನ ರೂಮ್ಗೆ ಬೈಕ್ನಲ್ಲಿ ತೆರಳುತ್ತಿದ್ದರು. ಬಸ್ ನಿಲ್ದಾಣದ ಸಮೀಪ ಮಂಗಳಮುಖಿಯಂತಿದ್ದ ಒಬ್ಬಳು ತನಗೆ ಮೆಗ್ಗಾನ್ ಆಸ್ಪತ್ರೆಗೆ ಡ್ರಾಪ್ ನೀಡುವಂತೆ ಮನವಿ ಮಾಡಿದ್ದಳು. ಅದೇ ಮಾರ್ಗದಲ್ಲಿ ರೂಮ್ಗೆ ತೆರಳಬೇಕಿದ್ದರಿಂದ ಖಾಸಗಿ ಕಂಪನಿಯ ಉದ್ಯೋಗಿ ತೃತೀಯ ಲಿಂಗಿಯನ್ನು ತನ್ನ ಬೈಕ್ಗೆ ಹತ್ತಿಸಿಕೊಂಡಿದ್ದರು.
ಇದನ್ನೂ ಓದಿ » ಕುಂಸಿ ಠಾಣೆಗೆ ಹೋಮ್ ಮಿನಿಸ್ಟರ್ ದಿಢೀರ್ ಭೇಟಿ, ಏನೆಲ್ಲ ಚೆಕ್ ಮಾಡಿದರು?
ಮೆಗ್ಗಾನ್ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆ ತೃತೀಯ ಲಿಂಗಿ ಬೈಕ್ ಸವಾರನ ಮೈ ಮುಟ್ಟಲು ಶುರು ಮಾಡಿದ್ದಳು. ಬೈಕ್ ಸವಾರ ಇದನ್ನು ವಿರೋಧಿಸಿದ್ದಾಗಿ ಆರೋಪಿಸಲಾಗಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಡ್ರಾಪ್ ನೀಡಿ ರೂಮ್ಗೆ ತೆರಳಿ ಬಟ್ಟೆ ಬದಲಿಸುವಾಗ ಕೊರಳಲ್ಲಿದ್ದ ಚೈನ್ ನಾಪತ್ತೆ ಆಗಿರುವುದು ಅರಿವಿಗೆ ಬಂದಿದೆ. ಒಂದೂವೆರೆ ತಿಂಗಳು ತೃತೀಯ ಲಿಂಗಿಗಾಗಿ ಎಲ್ಲೆಡೆ ಹುಡುಕಿದರೂ ಆಕೆ ಪತ್ತೆಯಾಗಿರಲಿಲ್ಲ. ಅಲ್ಲದೆ ಮರ್ಯಾದೆಗೆ ಅಂಜಿ ದೂರು ನೀಡಿರಲಿಲ್ಲ ಎಂದು ಉಲ್ಲೇಖಿಸಿದ್ದಾರೆ. ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Transgender
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422