ಒಂದೇ ಸ್ಥಳದಲ್ಲಿ ಎರಡು ಬಾರಿ ಹೆಜ್ಜೇನು ದಾಳಿ, 7 ಮಂದಿಗೆ ಗಾಯ

HOSANAGARA NEWS, 27 OCTOBER 2024 : ಒಂದೇ ಸ್ಥಳದಲ್ಲಿ ಎರಡು ಬಾರಿ ಹೆಜ್ಜೇನುಗಳು (Bee Attack) ದಾಳಿ ನಡಿಸಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಹೊಸನಗರ ತಾಲೂಕು ಬಿದನೂರು ನಗರದಲ್ಲಿ ಶನಿವಾರ ಮಧ್ಯಾಹ್ನ ಮತ್ತು ಸಂಜೆ ಒಂದೇ ಸ್ಥಳದಲ್ಲಿ ಎರಡು ಬಾರಿ ಹೆಜ್ಜೇನುಗಳು ದಾಳಿ ನಡೆಸಿವೆ. (ಈ ಸುದ್ದಿಯನ್ನು ಇನ್ನು 54 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಮಧ್ಯಾಹ್ನದ ಘಟನೆ

ಚಿಕ್ಕಪೇಟೆಯ ಬಾಷಾ ಎಂಬುವವರ ಮನೆ ಸಮೀಪ ಜೇನು ದಾಳಿ ನಡೆಸಿವೆ. ಬಾಷಾ, ಪತ್ನಿ ಆಸ್ಮಾ ಬಾನು, ಮಕ್ಕಳಾದ ಆರೀಫ್, ಅನೀಫ್ ಎಂಬುವವರು ಗಾಯಗೊಂಡಿದ್ದರು. ನಗರ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು.

ಸಂಜೆ ಮತ್ತೆ ದಾಳಿ Bee

ಹೆಜ್ಜೇನುಗಳು ಸಂಜೆ ವೇಳೆಗೆ ಅದೇ ಸ್ಥಳದಲ್ಲಿ ಪುನಃ ದಾಳಿ ನಡೆಸಿದೆ. ಆಗ ಬಾಷಾ ಅವರ ಪುತ್ರ ಆರಿಫ್‌ ಮೇಲೆ ಮತ್ತೆ ದಾಳಿ ನಡೆಸಿವೆ. ಯಾಸಿನ್‌, ಹಾಸಿಗೆ ರಿಪೇರಿಗೆ ಬಂದಿದ್ದ ಶಿವಮೊಗ್ಗದ ಹುಸೇನ್‌ ಸಾಬ್‌ ಮತ್ತು ಅವರ ಪುತ್ರ ಬಾಬಾ ಸಾಬ್‌ ಎಂಬುವವರ ಮೇಲೆ ದಾಳಿ ನಡೆಸಿದ್ದವು. ಗಾಯಗೊಂಡಿದ್ದವರು ಕೂಡಲೆ ಗಾಯಾಳುಗಳನ್ನು ನಗರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

Hosanagara-News-Update

ಇದನ್ನೂ ಓದಿ » ಕುಂಸಿ ಠಾಣೆಗೆ ಹೋಮ್‌ ಮಿನಿಸ್ಟರ್‌ ದಿಢೀರ್‌ ಭೇಟಿ, ಏನೆಲ್ಲ ಚೆಕ್‌ ಮಾಡಿದರು?

ಹುಸೇನ್‌ ಸಾಬ್‌ ಅವರಿಗೆ ಗಂಭೀರ ಗಾಯವಾಗಿದ್ದು ಹೊಸನಗರದ ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಒಂದೇ ಸ್ಥಳದಲ್ಲಿ ಎರಡು ಬಾರಿ ಹೆಜ್ಜೇನುಗಳು ದಾಳಿ ನಡೆಸಿರುವ ಪ್ರಕರಣ ಸ್ಥಳೀಯಲ್ಲಿ ಆತಂಕ ಮೂಡಿಸಿದೆ.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Hosanagara-News-Update

Leave a Comment