ಮಾರುಕಟ್ಟೆ ಮಾಹಿತಿ: ಶಿವಮೊಗ್ಗ, ಸಾಗರ, ತೀರ್ಥಹಳ್ಳಿ, ಶಿಕಾರಿಪುರ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ (Adike Rate). ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.
ಶಿವಮೊಗ್ಗ ಮಾರುಕಟ್ಟೆ
ಸರಕು ಅಡಿಕೆ ಕನಿಷ್ಠ ₹55,559 ಹಾಗೂ ಗರಿಷ್ಠ ₹96,296 ರವರೆಗೆ ಮಾರಾಟವಾಗಿದೆ. ಬೆಟ್ಟೆ ಅಡಿಕೆಯು ಕನಿಷ್ಠ ₹50,999 ರಿಂದ ಗರಿಷ್ಠ ₹60,069 ರವರೆಗೆ ದರ ಪಡೆದುಕೊಂಡಿದೆ. ಇನ್ನು ರಾಶಿ ಇಡಿ ತಳಿಯ ಅಡಿಕೆಯು ಕನಿಷ್ಠ ₹44,366 ಹಾಗೂ ಗರಿಷ್ಠ ₹52,719 ರವರೆಗೆ ಮಾರಾಟವಾಗಿದೆ. ಗೊರಬಲು ತಳಿಯು ಕನಿಷ್ಠ ₹19,000 ಹಾಗೂ ಗರಿಷ್ಠ ₹41,786 ರವರೆಗೆ ದರ ಪಡೆದಿದೆ.

ಸಾಗರ ಮಾರುಕಟ್ಟೆ
ರಾಶಿ ಅಡಿಕೆಯು ಕನಿಷ್ಠ ₹47,189 ಹಾಗೂ ಗರಿಷ್ಠ ₹50,869 ರವರೆಗೆ ಮಾರಾಟವಾಗಿದೆ. ಚಾಲಿ ಕನಿಷ್ಠ ₹38,111 ರಿಂದ ಗರಿಷ್ಠ ₹40,111 ರವರೆಗೆ ದರ ಪಡೆದಿದೆ. ಕೆಂಪುಗೋಟು ಕನಿಷ್ಠ ₹33,899 ಹಾಗೂ ಗರಿಷ್ಠ ₹37,300, ಬಿಳಿ ಗೋಟು ಕನಿಷ್ಠ ₹20,199 ಹಾಗೂ ಗರಿಷ್ಠ ₹28,501. ಸಿಪ್ಪೆಗೋಟು ಕನಿಷ್ಠ ಮತ್ತು ಗರಿಷ್ಠ ₹21,889 ಕ್ಕೆ ಮಾರಾಟವಾಗಿದೆ.
ಶಿಕಾರಿಪುರ ಮಾರುಕಟ್ಟೆ
ರಾಶಿ ಅಡಿಕೆಯು ಕನಿಷ್ಠ ಮತ್ತು ಗರಿಷ್ಠ ₹52,690 ರವರೆಗೆ ದರ ಪಡೆದುಕೊಂಡಿದೆ.
ತೀರ್ಥಹಳ್ಳಿ ಮಾರುಕಟ್ಟೆ
ಸಿಪ್ಪೆಗೋಟು ಅಡಿಕೆ ಕನಿಷ್ಠ ಮತ್ತು ಗರಿಷ್ಠ ₹14,000 ಕ್ಕೆ ವಹಿವಾಟು ನಡೆಸಿದೆ.
