ಶಿವಮೊಗ್ಗ ಲೈವ್
ಶಿವಮೊಗ್ಗ: ಸಂಸದ ಬಿ.ವೈ.ರಾಘವೇಂದ್ರ ಕೇಂದ್ರ ಆಯುಷ್ ಸಚಿವರಾದ ಪ್ರತಾಪ್ ರಾವ್ ಗಣಪತ ರಾವ್ ಜಾದವ್ ಅವರನ್ನು ಭೇಟಿ ಮಾಡಿ ಜಿಲ್ಲೆಯಲ್ಲಿ ಅಖಿಲ ಭಾರತ ಆಯುರ್ವೇದ (Ayurveda) ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಸ್ಥೆ ಸ್ಥಾಪಿಸುವಂತೆ ಮನವಿ ಸಲ್ಲಿಸಿದರು.
ಸಂಸದ ರಾಘವೇಂದ್ರ ಮನವಿಯಲ್ಲಿ ಏನೇನಿದೆ?

ಜಿಲ್ಲೆಯಲ್ಲಿ ಸುಮಾರು 700 ಕ್ಕೂ ಹೆಚ್ಚು ಔಷಧಿ ಸಸ್ಯವರ್ಗವು ಅಳಿವಿನ ಅಂಚಿನಲ್ಲಿ ಇವೆ. ಇಂತಹ ಔಷಧಿಯ ಸಸ್ಯ ವರ್ಗಗಳನ್ನು ರಕ್ಷಿಸಿ ಪೋಷಿಸಿದಾಗ ಆಯುರ್ವೇದ ಹಾಗೂ ಪ್ರಾಕೃತಿಕ ಚಿಕಿತ್ಸೆಗೆ ಅನುಕೂಲಕರವಾಗುತ್ತದೆ.
ಈ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯಲ್ಲಿ ಅಖಿಲ ಭಾರತ ಆಯುರ್ವೇದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಸ್ಥೆಯನ್ನು ಸ್ಥಾಪಿಸಬೇಕು.
ಮನವಿ ಸ್ವೀಕರಿಸಿದ ಸಚಿವರು ಈ ಬಗ್ಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಇದನ್ನೂ ಓದಿ » ಶಿವಮೊಗ್ಗದ ATNCCಯಲ್ಲಿ ನಶಾ ಮುಕ್ತ ಭಾರತ, ಜಿಲ್ಲಾ ರಕ್ಷಣಾಧಿಕಾರಿ ಸಲಹೆಗಳೇನು? ಇಲ್ಲಿದೆ ಪಾಯಿಂಟ್ಸ್
Shimoga MP BY Raghavnendra memorandum to Ayurveda center
