ಶಿವಮೊಗ್ಗ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಮೇ 15 ರಿಂದ ಜೂನ್ 13ರವರೆಗೆ ಬೇಕರಿ ಘಟಕದಲ್ಲಿ ವಿವಿಧ ಉತ್ಪನ್ನಗಳ (bakery products) ತಯಾರಿಕೆ ಕುರಿತು ತರಬೇತಿ ನೀಡಲು ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಏನೆಲ್ಲ ತರಬೇತಿ ಇರಲಿದೆ?
ವಿವಿಧ ಮಾದರಿಯ ಬಿಸ್ಕತ್ತುಗಳು, ಕೇಕ್ ಮತ್ತು ಇತರೆ ಬೇಕರಿ ಉತ್ಪನ್ನಗಳ ತಯಾರಿ ಕುರಿತು ತರಬೇತಿ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

- ಬಿಸ್ಕತ್ತುಗಳು: ಬೆಣ್ಣೆ ಬಿಸ್ಕತ್ತು, ಕೋಕೊನಟ್ ಕುಕಿಸ್, ಮಸಾಲ ಬಿಸ್ಕತ್ತು, ಪೀನಟ್ ಕುಕಿಸ್ ಹಾಗೂ ವೆನಿಲ್ಲಾ ಬಟನ್.
- ಕೇಕ್ ವಿಧಗಳು: ಬನಾನಾ ಕೇಕ್, ಫ್ರೂಟ್ ಕೇಕ್, ಸ್ಪಾಂಜ್ ಕೇಕ್, ಚಾಕಲೇಟ್ ಕೇಕ್, ಪೇಸ್ಟ್ರೀ ಕೇಕ್ ಮತ್ತು ಜೆಲ್ ಕೇಕ್.
- ಇತರೆ ಉತ್ಪನ್ನ: ಮಿಲ್ಕ್ ಬ್ರೆಡ್, ಬನ್, ರಸ್ಕ್, ಪಿಜ್ಜಾ, ಪಪ್ ಪೇಸ್ಟ್ರೀ, ದಿಲ್ ಪಸಂದ್, ಡೋ ನಟ್ ಹಾಗೂ ಬಾಂಬೆ ಖಾರ.

ತರಬೇತಿಯ ಪ್ರಮುಖ ಮಾಹಿತಿಗಳು
ತರಬೇತಿಯು ಮೇ 15 ರಿಂದ ಜೂನ್ 13 ರವರೆಗೆ ನಡೆಯಲಿದೆ. ನವುಲೆಯಲ್ಲಿರುವ ಕೃಷಿ ಮಹಾವಿದ್ಯಾಲಯ ಆವರಣದಲ್ಲಿ ತರಬೇತಿ ನಡೆಯಲಿದೆ. ಇದಕ್ಕೆ ₹4,500 ಶುಲ್ಕ ಇರಲಿದೆ. ಮೇ 14 ನೋಂದಣಿಗೆ ಕೊನೆಯ ದಿನಾಂಕವಾಗಿದೆ. ಇನ್ನು, ತರಬೇತಿಯ ಸಮಯದಲ್ಲಿ ಅಭ್ಯರ್ಥಿಗಳಿಗೆ ಊಟ ಮತ್ತು ವಸತಿ ಸೌಲಭ್ಯ ಇರುವುದಿಲ್ಲ.
ಇದನ್ನೂ ಓದಿ : ಸಿಗಂದೂರಿನಲ್ಲಿ ಅಗ್ನಿವೀರ್, ಪ್ಯಾರಾ ಮಿಲಿಟರಿ, ಪೊಲೀಸ್ ಹುದ್ದೆಗಳ ಆಕಾಂಕ್ಷಿಗಳಿಗೆ ಉಚಿತ ತರಬೇತಿ
ನೋಂದಣಿ ಮಾಡಿಕೊಳ್ಳುವುದು ಹೇಗೆ?
ಆಸಕ್ತರು ಖುದ್ದಾಗಿ ಕೃಷಿ ಮಹಾವಿದ್ಯಾಲಯವನ್ನು ಸಂಪರ್ಕಿಸಬಹುದು. ಈ ಮೊಬೈಲ್ ಸಂಖ್ಯೆಗಳ ಮೂಲಕವು ಮಾಹಿತಿ ಪಡೆಯಬಹುದಾಗಿದೆ. ಡಾ. ಜಯಶ್ರೀ ಎಸ್, ಮೊಬೈಲ್ ಸಂಖ್ಯೆ: 9449187763, ಜಯಶಂಕರ, ಮೊಬೈಲ್ ಸಂಖ್ಯೆ 9686555897 ಸಂಪರ್ಕಿಸಬಹುದು.
