ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 3 ಜನವರಿ 2020
ತಿರುಪತಿಗೆ ಸಂಪರ್ಕ ಕಲ್ಪಿಸುವ ಶಿವಮೊಗ್ಗ – ರೇಣಿಗುಂಟ ರೈಲು ಒಂದು ದಿನದ ಬದಲು ಇನ್ಮುಂದೆ ಎರಡು ದಿನ ಶಿವಮೊಗ್ಗದಿಂದ ಸಂಚರಿಸಲಿದೆ. ಈ ಕುರಿತು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ನವೆಂಬರ್’ನಲ್ಲಿ ಶಿವಮೊಗ್ಗ – ರೇಣಿಗುಂಟ – ಶಿವಮೊಗ್ಗ ರೈಲು ಸೇವೆ ಆರಂಭವಾಗಿತ್ತು. ವಾರದಲ್ಲಿ ಒಂದು ದಿನಕ್ಕಷ್ಟೇ ರೈಲು ಸಂಚಾರ ಸೀಮಿತವಾಗಿತ್ತು. ಪ್ರತಿ ಬುಧವಾರ ಶಿವಮೊಗ್ಗದಿಂದ ರೇಣಿಗುಂಟಕ್ಕೆ ತೆರಳಿ ಬುಧವಾರ ಬೆಳಗ್ಗೆ ಹಿಂತಿರುಗುತಿತ್ತು. ಈಗ ಇದನ್ನು ಎರಡು ದಿನಕ್ಕೆ ವಿಸ್ತರಿಸಲಾಗಿದೆ.
ಇನ್ಮುಂದೆ ಬುಧವಾರ ಮತ್ತು ಗುರುವಾರ ಎರಡು ದಿನವು ಶಿವಮೊಗ್ಗದಿಂದ ರೈಲುಗಳು ತೆರಳಲಿವೆ. ಈ ಸೇವೆ ಜನವರಿ 9ರಿಂದ ಆರಂಭವಾಗಲಿದೆ ಎಂದು ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 2020ರ ಆಗಸ್ಟ್ 20ರವರೆಗೆ ಈ ಸೇವೆ ಇರಲಿದೆ ಎಂದು ತಿಳಿಸಲಾಗಿದೆ.
ಶಿವಮೊಗ್ಗದಿಂದ ಎಷ್ಟೊತ್ತಿಗೆ ಹೊರಡುತ್ತೆ?
ಶಿವಮೊಗ್ಗ ಬೆಳಗ್ಗೆ 6.15ಕ್ಕೆ, ಭದ್ರಾವತಿ ಬೆಳಗ್ಗೆ 6.28, ತರೀಕೆರೆ ಬೆಳಗ್ಗೆ 6.49, ಬೀರೂರು ಬೆಳಗ್ಗೆ 7.15, ಅಜ್ಜಂಪುರ ಬೆಳಗ್ಗೆ 7.46, ಹೊಸದುರ್ಗ ರೋಡ್ ಬೆಳಗ್ಗೆ 8.16, ಚಿಕ್ಕಜಾಜೂರು ಬೆಳಗ್ಗೆ 8.43, ಚಿತ್ರದುರ್ಗ ಬೆಳಗ್ಗೆ 9.26, ಮೊಳಕಾಲ್ಮೂರು ಬೆಳಗ್ಗೆ 11, ರಾಯದುರ್ಗ ಬೆಳಗ್ಗೆ 11.29, ಬಳ್ಳಾರಿ ಮಧ್ಯಾಹ್ನ 1.10, ಗುಂಟಕಲ್ ಮಧ್ಯಾಹ್ನ 2.05, ಗೂಟಿ ಮಧ್ಯಾಹ್ನ 2.25, ತಡಿಪಾತ್ರಿ ಮಧ್ಯಾಹ್ನ 3.24, ಕೊಂಡಾಪುರಂ ಸಂಜೆ 4, ಯರ್ರಾಗುಂಟ್ಲಾ ಸಂಜೆ 4.40, ಕುಡ್ಡಾಪ ಸಂಜೆ 5.28, ರಾಜಂಪೇಟಾ ಸಂಜೆ 6.30, ರೇಣಿಗುಂಟಾ ರಾತ್ರಿ 8.05.
ರೇಣಿಗುಂಟಾದಿಂದ ಹಿಂತಿರುವುದು ಎಷ್ಟೊತ್ತಿಗೆ?
ರೇಣಿಗುಂಟಾ 9.45, ರಾಜಂಪೇಟಾ 10.56, ಕುಡ್ಡಾಪ 11.50, ಯರ್ರಾಗುಂಟ್ಲಾ 12.25, ಕೊಂಡಾಪುರಂ 1.07, ತಡಿಪಾತ್ರಿ 1.35, ಗೂಟಿ 2.25, ಗುಂಟಕಲ್ 3.10, ಬಳ್ಳಾರಿ 4.450, ರಾಯದುರ್ಗ 6.15, ಮೊಳಕಾಲ್ಮೂರು 6.31, ಚಿತ್ರದುರ್ಗ 8, ಚಿಕ್ಕಜಾಜೂರು 8.45, ಹೊಸದುರ್ಗ ರೋಡ್ 9.02, ಅಜ್ಜಂಪುರ 9.19, ಬೀರೂರು 9.40, ತರೀಕೆರೆ 10.39, ಭದ್ರಾವತಿ 11, ಶಿವಮೊಗ್ಗ ಬೆಳಗ್ಗೆ 11.45ಕ್ಕೆ ತಲುಪಲಿದೆ.
ಶಿವಮೊಗ್ಗ ರೇಣಿಗುಂಟ ರೈಲಿನಲ್ಲಿ 2 ಟೈರ್ ಒಂದು ಎಸಿ ಕೋಚ್, 3 ಟೈರ್ ಒಂದು ಎಸಿ ಕೋಚ್, ಏಳು ಸೆಕೆಂಡ್ ಕ್ಲಾಸ್ ಸ್ಲೀಪರ್ ಕೋಚ್, ಮೂರು ಸೆಕೆಂಡ್ ಕ್ಲಾಸ್ ಜನರಲ್ ಕೋಚ್, ಎರಡು ಲಗೇಜ್ ಮತ್ತು ಸೆಕೆಂಡ್ ಕ್ಲಾಶ್ ಬ್ರೇಕ್ ವ್ಯಾನ್ ಕೋಚ್ ಇರಲಿದೆ.
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422