ಶಿವಮೊಗ್ಗ: ಪ್ರವಾಸಿಗರ ಸುರಕ್ಷತೆ ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಂಡಿರುವ ಜಿಲ್ಲಾಡಳಿತ, ಜಿಲ್ಲೆಯಾದ್ಯಂತ ಇರುವ ಎಲ್ಲಾ ಹೋಂಸ್ಟೇ, ಹೋಟೇಲ್, ರೆಸಾರ್ಟ್ ಹಾಗೂ ಇತರೆ ವಸತಿ ಘಟಕಗಳಲ್ಲಿ ತುರ್ತು ಸಂಪರ್ಕ ಮಾಹಿತಿ ಫಲಕಗಳನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಿದೆ.➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಈ ಕುರಿತು ಆದೇಶ ನೀಡಿರುವ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ವಸತಿ ಘಟಕಗಳ ಮಾಲೀಕರು ತಮ್ಮ ಸಂಸ್ಥೆಗಳನ್ನು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಅಧಿಕೃತ ವೆಬ್‌ಸೈಟ್ http://portal.karnatakatourisum.org ನಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.

ಫಲಕದಲ್ಲಿ ಏನೇನೆಲ್ಲ ಮಾಹಿತಿ ಇರಬೇಕು?
ಪ್ರವಾಸಿಗರಿಗೆ ತುರ್ತು ಸಂದರ್ಭದಲ್ಲಿ ತಕ್ಷಣಕ್ಕೆ ನೆರವು ದೊರೆಯುವಂತಾಗಲು, ವಸತಿ ಘಟಕಗಳಲ್ಲಿ ಸ್ಪಷ್ಟವಾಗಿ ಕಾಣುವ ಸ್ಥಳಗಳಲ್ಲಿ ಮಾಹಿತಿಯುಳ್ಳ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಫಲಕದಲ್ಲಿ ಸಿಂಗಲ್ ಎಮರ್ಜೆನ್ಸಿ ಹೆಲ್ಪ್ ಲೈನ್: 112, ನ್ಯಾಷನಲ್ ಟೂರಿಸ್ಟ್ ಹೆಲ್ಪ್ ಲೈನ್: 1800-11-1363 / 1363, ವುಮೆನ್ ಸೇಫ್ಟಿ ಹೆಲ್ಪ್ ಲೈನ್: 181, ಚೈಲ್ಡ್ ಹೆಲ್ಪ್ ಲೈನ್: 1098, ಸಖಿ ಒನ್ ಸ್ಟಾಪ್ ಸೆಂಟರ್: 08182-223055, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ: 08182-221010 / 1077, ಜಿಲ್ಲಾಧಿಕಾರಿಗಳ ಕಚೇರಿ: 08182-271101, ಸಹಾಯಕ/ಉಪನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಶಿವಮೊಗ್ಗ: 08182-251444, ಸಮೀಪದ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಯ ಸಂಪರ್ಕ ಸಂಖ್ಯೆಗಳು ಇರಬೇಕು.
ಪ್ರವಾಸಿಗರ ಭದ್ರತೆ ಮತ್ತು ತುರ್ತು ನೆರವಿಗಾಗಿ ಈ ಕ್ರಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ, ಎ ಬ್ಲಾಕ್, 3ನೇ ತಿರುವು, ಗೋಪಾಲಗೌಡ ಬಡಾವಣೆ, ಶಿವಮೊಗ್ಗ, ದೂರವಾಣಿ ಸಂಖ್ಯೆ 08182-251444 ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದೆ.