ಯುವತಿಯ ಫೇಸ್‌ಬುಕ್‌ ರಿಕ್ವೆಸ್ಟ್‌ ಒಪ್ಪಿದ ಶಿವಮೊಗ್ಗದ ಉದ್ಯಮಿಗೆ ಮುಂದೆ ಕಾದಿತ್ತು ಶಾಕ್

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ: ಫೇಸ್‌ಬುಕ್‌ನಲ್ಲಿ ಯುವತಿಯೊಬ್ಬಳ ಫ್ರೆಂಡ್‌ (friend) ರಿಕ್ವೆಸ್ಟ್‌ ಒಪ್ಪಿಕೊಂಡು ಶಿವಮೊಗ್ಗದ ಉದ್ಯಮಿಯೊಬ್ಬರು 14.48 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಫೇಸ್‌ಬುಕ್‌ನಲ್ಲಿ ಅಂಜಲಿ ಶರ್ಮಾ ಎಂಬ ಹೆಸರಿನಲ್ಲಿ ಫ್ರೆಂಡ್‌ (friend) ರಿಕ್ವೆಸ್ಟ್‌ ಬಂದಿತ್ತು. ಅದಕ್ಕೆ ಶಿವಮೊಗ್ಗದ ಉದ್ಯಮಿ ಒಪ್ಪಿಗೆ ನೀಡಿದ್ದರು. ಆಕೆ ಉದ್ಯಮಿಗೆ ಮೆಸೇಜ್‌ ಮಾಡಿ, ಮುಂಬೈನಲ್ಲಿ ತಮ್ಮದು ಚಿನ್ನದ ಉದ್ಯಮವಿದೆ. ಹೂಡಿಕೆ ಮಾಡಿ ಅಧಿಕ ಲಾಭ ಗಳಿಸಬಹುದು ಎಂದು ತಿಳಿಸಿದ್ದಳು. ಅಲ್ಲದೆ ವಾಟ್ಸಪ್‌ನಲ್ಲಿ ಲಿಂಕ್‌ ಕೂಡ ರವಾನಿಸಿದ್ದಳು.

ಲಕ್ಷ ಲಕ್ಷ ರೂ. ಹೂಡಿಕೆ

ಆಕೆಯ ಮಾತು ನಂಬಿದ ಉದ್ಯಮಿ ಲಿಂಕ್‌ ಕ್ಲಿಕ್‌ ಮಾಡಿ, ಹೂಡಿಕೆ ಮಾಡಿದ್ದರು. ತನ್ನ ಪುತ್ರ ಮತ್ತು ಸ್ನೇಹಿತನ ಬ್ಯಾಂಕ್‌ ಖಾತೆಯಿಂದಲು ಹಣ ವರ್ಗಾಯಿಸಿದ್ದರು. ಒಟ್ಟು 14.48 ಲಕ್ಷ ರೂ. ಹೂಡಿಕೆ ಮಾಡಿದ್ದಾಗಿ ಆರೋಪಿಸಿದ್ದಾರೆ. ಬಳಿಕ ತಮ್ಮ ಹಣವನ್ನು ವಿತ್‌ ಡ್ರಾ ಮಾಡಲು ಯತ್ನಿಸಿದಾಗ 23 ಲಕ್ಷ ರೂ. ತೆರಿಗೆ ಪಾವತಿಸುವಂತೆ ಸೂಚಿಸಲಾಯಿತು.

Arya-PU-College-Shimoga.

ಅನುಮಾನಗೊಂಡು ವಿಚಾರಿಸಿದಾಗ ತಾನು ವಂಚನೆಗೊಳಗಾಗಿರುವುದು ಉದ್ಯಮಿಗೆ ಅರಿವಾಯಿತು. ಸಿ.ಇ.ಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ರಾತ್ರಿ ನಾಯಿಗಳು ಬೊಗಳಿದವು ಅಂತಾ ಕಿಟಕಿಯಲ್ಲಿ ಇಣುಕಿದಾಗ ಕಾಣಿಸಿತು ಚಿರತೆ, ಸಿಸಿಟಿವಿಯಲ್ಲಿ ದೃಶ್ಯೆ ಸೆರೆ

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment