EDUCATION NEWS : ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದೆ. ವಿವಿಧ ಶಾಲೆಗಳ 12 ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಟಾಪರ್‌ಗಳಾಗಿದ್ದಾರೆ.
ಶಿವಮೊಗ್ಗದ ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರದ ಗುರುಚರಣ್ ಶೆಟ್ಟಿ, ಸೊರಬದ ಸ್ಯಾನ್ ಥೋಮ್ ಶಾಲೆಯ ಚಿನ್ಮಯ್ ಅನಂತ ಶಾನುಭೋಗ್, ಸೊರಬದ ಸ್ವಾಮಿ ವಿವೇಕಾನಂದ ಶಾಲೆಯ ಬಿಂದು ಪಿ.ಗೌಡ, ಹಳೆ ಸೊರಬದ ಸರ್ಕಾರಿ ಪ್ರೌಢಶಾಲೆಯ ರಕ್ಷಶ್ರೀ.ಯು 622 ಅಂಕ ಗಳಿಸಿ ಜಿಲ್ಲೆಯ ಟಾಪರ್‌ಗಳಾಗಿದ್ದಾರೆ.
ಶಿಕಾರಿಪುರದ ಶ್ರೀ ಕೊಟ್ಟೂರೇಶ್ವರ ಪ್ರೌಢಶಾಲೆಯ ಲತಾ.ಪಿ.ಬಿ, ಶಿವಮೊಗ್ಗ ಕಸ್ತೂರಬಾ ಪ್ರೌಢ ಶಾಲೆಯ ಆಲಿಯಾ ಮೆಹರೂಶ್, ತೀರ್ಥಹಳ್ಳಿಯ ವಾಗ್ದೇವಿ ಪ್ರೌಢ ಶಾಲೆಯ ಕೃತಿಕಾ.ಕೆ 621 ಅಂಕ ಪಡೆದಿದ್ದಾರೆ.
ಹೊಸನಗರದ ಶ್ರೀ ಗುರೂಜಿ ಇಂಟರ್‌ನ್ಯಾಷನಲ್ ರೆಸಿಡೆನ್ಷಿಯಲ್ ಶಾಲೆಯ ಸಮೀಕ್ಷಾ ಆರ್.ನಾಯಕ್, ತೀರ್ಥಹಳ್ಳೀ ವಾಗ್ದೇವಿ ಪ್ರೌಢ ಶಾಲೆಯ ಛಾಯಾ.ಎಸ್, ಭದ್ರಾವತಿ ಪೂರ್ಣಪ್ರಜ್ಞಾ ವಿದ್ಯಾ ಸಂಸ್ಥೆಯ ಜಿ.ಎಸ್.ಮೋಹಿತ್, ಹೊಸನಗರದ ಸರ್ಕಾರಿ ಪ್ರೌಢ ಶಾಲೆಯ ನಿಹಾಲ್.ಹೆಚ್.ಜಿ, ಶಿವಮೊಗ್ಗದ ಶ್ರೀ ಮಹಾವೀರ ವಿದ್ಯಾಲಯದ ಜಿಯಾ ಎಸ್.ಶೇಟ್ 620 ಅಂಕಗಳನ್ನು ಪಡೆದಿದ್ದಾರೆ.
ಇದನ್ನೂ ಓದಿ – ATNCCಯಲ್ಲಿ ಮ್ಯಾನೇಜ್‌ಮೆಂಟ್ ಫೆಸ್ಟ್, ಲೋಗೋ ಬಿಡುಗಡೆ ವೇಳೆ ವಿದ್ಯಾರ್ಥಿಗಳ ಫ್ಲ್ಯಾಶ್ ಮಾಬ್ ಡ್ಯಾನ್ಸ್