ಕುವೆಂಪು ವಿವಿ ಸ್ನಾತಕೋತ್ತರ ಪದವಿ ಕೌನ್ಸಿಲಿಂಗ್ ಡಿ.17ರ ಬದಲಿಗೆ ಡಿ.19ಕ್ಕೆ, ಮುಂದೂಡಲು ಕಾರಣವೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 16 DECEMBER 2022

ಶಂಕರಘಟ್ಟ : ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ, ಸ್ನಾತಕೋತ್ತರ ಡಿಪ್ಲೋಮಾ ಕೋರ್ಸ್ ಗಳ ಪ್ರವೇಶಕ್ಕೆ (admission) ಡಿ.17ರಂದು ನಿಗದಿಯಾಗಿದ್ದ ಕೌನ್ಸಿಲಿಂಗ್ ಮುಂದೂಡಲಾಗಿದೆ. ಡಿ.19 ಮತ್ತು ಡಿ.20ರಂದು ಕೌನ್ಸಿಲಿಂಗ್ ನಡೆಯಲಿದೆ ಎಂದು ವಿಶ್ವವಿದ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

Shimoga Nanjappa Hospital

2022-23 ನೇ ಶೈಕ್ಷಣಿಕ ಸಾಲಿನ ಎಲ್ಲ ಸ್ನಾತಕೋತ್ತರ ಕೇಂದ್ರಗಳು ಮತ್ತು ವಿಭಾಗಗಳ ಸ್ನಾತಕೋತ್ತರ ಪದವಿ ಮತ್ತು ಡಿಪ್ಲೊಮಾ ಕೋರ್ಸುಗಳ ಪ್ರವೇಶಾತಿಗಾಗಿ ಡಿ. 16ರಂದು ಮೆರಿಟ್ ಆಧರಿತ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಡಿ.19 ರಂದು ಮೆರಿಟ್ ಹಾಗೂ ಸ್ಪೆಷಲ್ ಕೆಟಗರಿ ಸೀಟುಗಳ ಪ್ರವೇಶಾತಿ (admission) ನಡೆಯಲಿದೆ. ಡಿ. 20 ರಂದು ಮೆರಿಟ್ ಕಮ್ ಪೇಮೆಂಟ್ ಸೀಟುಗಳ ಪ್ರವೇಶಾತಿ ನಡೆಯಲಿದೆ.

ಇದನ್ನೂ ಓದಿ – ಶಿವಮೊಗ್ಗದ ಕಥೆ ಈಗ ಅಮೆಜಾನ್ ಪ್ರೈಮ್‌ನಲ್ಲಿ ವೆಬ್ ಸೀರಿಸ್, ಡಿ.16ಕ್ಕೆ 8 ಎಪಿಸೋಡ್ ರಿಲೀಸ್

ಈ ಸಾಲಿನ ಪ್ರವೇಶಾತಿಯನ್ನು ಡಿಸೆಂಬರ್ 17ರಂದು ನಡೆಸುವುದಾಗಿ ಈ ಮೊದಲು ತಿಳಿಸಲಾಗಿತ್ತು. ಡಿ.17ರಂದು ರಾಜ್ಯಾದ್ಯಂತ ಎನ್.ಎಸ್.ಯು.ಐ ಸಂಘಟನೆ ವತಿಯಿಂದ ವಿದ್ಯಾರ್ಥಿಗಳ ಮುಷ್ಕರ ನಡಸಲಾಗುತ್ತಿದೆ. ಆದ್ದರಿಂದ ಕೌನ್ಸಿಲಿಂಗ್ ದಿನಾಂಕಗಳನ್ನು ಮುಂದೂಡಲಾಗಿದೆ ಎಂದು ಕುವೆಂಪು ವಿವಿ ಪ್ರಕಟಣೆ ತಿಳಿಸಿದೆ.

Shimoga Nanjappa Hospital

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment