ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ
ಶಿವಮೊಗ್ಗ: ಏಡ್ಸ್ ವಿರುದ್ಧ ಜಾಗೃತಿಗೆ ನಗರದ ATNCC ವಿದ್ಯಾರ್ಥಿಗಳು ಪಥ ಸಂಚಲನ ನಡೆಸಿ, ಬೀದಿ ನಾಟಕ ಮಾಡಿದರು. ಎಟಿಎನ್‌ಸಿ ಕಾಲೇಜು ಆವರಣದಿಂದ ಬಸವೇಶ್ವರ ವೃತ್ತದವರೆಗೆ ಪಥ ಸಂಚಲನ ಮಾಡಿದರು.
ಗಾಂಧಿ ಪಾರ್ಕ್ ಮುಂಭಾಗ ಬಸವೇಶ್ವರ ಪ್ರತಿಮೆ ಎದುರು ಹೆಚ್‌ಐವಿ, ಏಡ್ಸ್ ಪೀಡಿತರ ವಿರುದ್ಧದ ತಾರತಮ್ಯ ತೊಡೆದು ಹೋಗುವುದಾಗಿ ಪ್ರಮಾಣವಚನ ಬೋಧಿಸಲಾಯಿತು.
ಯಾರೆಲ್ಲ ಏನೆಲ್ಲ ಹೇಳಿದರು?
ಹೆಚ್‌ಐವಿ, ಏಡ್ಸ್‌ಗೆ ಯುವಜನರು ಬಲಿ ಆಗುತ್ತಿದ್ದಾರೆ. ಇದು ಅತ್ಯಂತ ಕಳವಳಕಾರಿಯಾಗಿದೆ. ಜಾಗೃತಿಯಿಂದ ಮಾತ್ರ ಇದನ್ನು ತಡೆಯಲು ಸಾಧ್ಯ. ಸೊಳ್ಳೆ ಕಚ್ಚುವುದು, ಗಾಳಿ, ನೀರಿನಿಂದ, ಕೈ ಕುಲುಕುವುದರಿಂದ ಈ ರೋಗ ಹರಡುವುದಿಲ್ಲ.
- ಪ್ರೊ. ಮಮತಾ.ಪಿ.ಆರ್, ಎಟಿಎನ್‌ಸಿ ಕಾಲೇಜು ಪ್ರಾಂಶಪಾಲರು
![]()
ಏಡ್ಸ್ ಕುರಿತು ಅರಿವಿನ ಕೊರತೆಯೆ ಹೆಚ್ಚು ಯುವಕರು ಈ ಕಾಯಿಲೆ ತುತ್ತಾಗಿ ಬಲಿಯಾಗುತ್ತಿದ್ದಾರೆ. ಆದ್ದರಿಂದ ಕಾಲೇಜು ಹಂತದಲ್ಲಿಯೇ ಹೆಚ್‌ಐವಿ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಏಡ್ಸ್ ರೋಗಿ ಬಳಸಿದ ಚುಚ್ಚುಮದ್ದನ್ನು ಮತ್ತೊಬ್ಬರು ಬಳಸಿದರೆ ಹೆಚ್‌ಐವಿ ಸೋಂಕು ಹರಡಲಿದೆ. ಅವರನ್ನು ಮುಟ್ಟುವುದರಿಂದ, ಮಾತನಾಡವುದರಿಂದ ರೋಗ ಹರಡುವುದಿಲ್ಲ.
- ಮಂಗಳಾ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದ ಅಧಿಕಾರಿ
![]()

ಎಟಿಎನ್‌ಸಿ ಕಾಲೇಜಿನ ಎನ್‌ಎಸ್‌ಎಸ್ ಘಟಕ ಮತ್ತು ರೆಡ್ ರಿಬ್ಬನ್ ಕ್ಲಬ್‌ನ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು. ಎನ್‌ಎಸ್‌ಎಸ್ ಅಧಿಕಾರಿಗಳಾದ ಮಂಜುನಾಥ್.ಎನ್, ಪ್ರವೀಣ್.ಬಿ.ಎನ್, ಗಾಯತ್ರಿ.ಟಿ ಹಾಗೂ ರೆಡ್ ಕ್ರಾಸ್ ವಿಭಾಗದ ಸಂಚಾಲಕಿ ಸೌಪರ್ಣಿಕ ಉಮೇಶ್, ಶ್ರುತಿ.ಕೆ ಉಪಸ್ಥಿತರಿದ್ದರು.

ಇದನ್ನೂ ಓದಿ » ಜಾತಿ ಸಮೀಕ್ಷೆ, ಹಿಂದೂ ಧರ್ಮಿಯರಿಗೆ ಶಾಸಕ ಚನ್ನಬಸಪ್ಪ ಸಲಹೆ, ಏನದು? ಇಲ್ಲಿದೆ ಸುದ್ದಿಗೋಷ್ಠಿಯ ಹೈಲೈಟ್ಸ್


