ಶಿವಮೊಗ್ಗ ಲೈವ್.ಕಾಂ | SHIMOGA NEWS | 27 ಜುಲೈ 2021
ನಾಲ್ಕು ತಿಂಗಳ ಬಳಿಕ ಪದವಿ ಕಾಲೇಜುಗಳು ಪುನಾರಂಭವಾಗಿದೆ. ಮೊದಲ ದಿನ ಶೇ.60ರಷ್ಟು ಹಾಜರಾತಿ ಇತ್ತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕರೋನಾ ಲಾಕ್ ಡೌನ್ ಹಿನ್ನೆಲೆ ಪದವಿ ಕಾಲೇಜುಗಳು ಬಂದ್ ಆಗಿದ್ದವು. ನಾಲ್ಕು ತಿಂಗಳ ಬಳಿಕ ಆರಂಭವಾಗಿದ್ದು, ವಿದ್ಯಾರ್ಥಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ತರಗತಿಗಳಲ್ಲಿ ಪಾಠಗಳು ಶುರುವಾಗಿದೆ.
ಹೇಗಿತ್ತು ಮೊದಲ ದಿನ?
ಜಿಲ್ಲೆಯಲ್ಲಿ 8 ಅನುದಾನಿತ ಕಾಲೇಜು, 16 ಸರ್ಕಾರಿ ಪದವಿ ಕಾಲೇಜು, 60ಕ್ಕೂ ಅಧಿಕ ಖಾಸಗಿ ಕಾಲೇಜುಗಳಿವೆ. ಅನುದಾನಿತ ಕಾಲೇಜುಗಳಲ್ಲಿ 6,552 ವಿದ್ಯಾರ್ಥಿಗಳಿದ್ದಾರೆ. ಸರ್ಕಾರಿ ಕಾಲೇಜಿನಲ್ಲಿ 13,531 ವಿದ್ಯಾರ್ಥಿಗಳು, ಖಾಸಗಿ ಕಾಲೇಜಿನಲ್ಲಿ 40 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ ಶೇ.60ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು.
ವಿದ್ಯಾರ್ಥಿಗಳು, ಉಪನ್ಯಾಸಕರಿಗೆ ಮಾಸ್ಕ್ ಕಡ್ಡಾಯವಿತ್ತು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗಿತ್ತು. ಸ್ಯಾನಿಟೈಸರ್ ಬಳಕೆಯು ಇತ್ತು.
ಕುವೆಂಪು ವಿವಿ ತರಗತಿ ಶುರು
ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ತರಗತಿಗಳು ಪುನಾರಂಭವಾಗಿವೆ. ಕೋವಿಡ್ ಮಾರ್ಗಸೂಚಿ ಅನ್ವಯ ತರಗತಿ ಆರಂಭಿಸಲಾಯಿತು. ಶಂಕರಘಟ್ಟದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್, ಕಡೂರು ಮತ್ತು ಚಿಕ್ಕಮಗಳೂರಿನ ಪಿಜಿ ಸೆಂಟರ್‍ಗಳಲ್ಲಿ ತರಗತಿ ನಡೆದವು. ಅಧ್ಯಾಪಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳಿಗೆ ಪ್ರವೇಶ ದ್ವಾರದಲ್ಲೇ ಸ್ಯಾನಿಟೈಸ್ ಮಾಡಲಾಯಿತು. ಮೊದಲ ಡೋಸ್ ಲಸಿಕೆ ಪಡೆಯದ ವಿದ್ಯಾರ್ಥಿಗಳಿಗೆ ಲಸಿಕೆಯನ್ನು ನೀಡಲಾಯಿತು.
ಶೇ.40 ವಿದ್ಯಾರ್ಥಿಗಳು ಗೈರು, ಕಾರಣವೇನು?
ಪದವಿ ಕಾಲೇಜುಗಳಿಗೆ ಶೇ.40ರಷ್ಟು ವಿದ್ಯಾರ್ಥಿಗಳು ಗೈರಾಗಿದ್ದಾರೆ. ತರಗತಿಗೆ ಬರುವ ವಿದ್ಯಾರ್ಥಿಗಳಿಗೆ ಲಸಿಕೆ ಕಡ್ಡಾಯವಿತ್ತು. ಲಸಿಕೆ ಸಿಗದ ಕಾರಣ ಕೆಲವರು ಗೈರಾಗಿದ್ದರು. ಇನ್ನು, ಗ್ರಾಮೀಣ ಭಾಗದಲ್ಲಿ ಬಸ್ ಸಂಪರ್ಕ ವ್ಯವಸ್ಥೆ ಇನ್ನೂ ಸರಿಯಾಗಿಲ್ಲ. ಹಾಗಾಗಿ ಹಲವರು ಕಾಲೇಜಿಗೆ ತಲುಪಲು ಸಾಧ್ಯವಾಗದೆ ಇರಬಹುದು.
ಲಾಕ್ ಡೌನ್ ನಂತರ ಶಿಕ್ಷಣ ಕ್ಷೇತ್ರ ನಿಧಾನಕ್ಕೆ ಹಳಿಗೆ ಬರುತ್ತಿದೆ. ಇದು ತುಸು ಸಮಾಧಾನಕರ ಸಂಗತಿಯಾಗಿದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200