ಕಾನೂನು ಕಾಲೇಜಿನಲ್ಲಿ ರಕ್ತದಾನ ಶಿಬಿರ
EDUCATION NEWS : ಶಿವಮೊಗ್ಗದ ಸಿ.ಬಿ.ಆರ್ ರಾಷ್ಟ್ರೀಯ ಕಾನೂನು ಕಾಲೇಜು ಮತ್ತು ಸೆಂಟರ್ ಫಾರ್ ಪೋಸ್ಟ್ ಗ್ರಾಜುಯೇಟ್ ಸ್ಟಡೀಸ್ ಇನ್ ಲಾ ಸಂಸ್ಥೆ ವತಿಯಿಂದ ಕಾನೂನು ಕಾಲೇಜಿನಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ದಿವಂಗತ ಪ್ರೊ. ಜಿ.ಆರ್.ಜಗದೀಶ್ ಅವರ ಹುಟ್ಟುಹಬ್ಬದ ಅಂಗವಾಗಿ ರಕ್ತದಾನ ಶಿಬಿರ ನಡೆಸಲಾಯಿತು. ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿ ಸುಮಾರು 50 ಮಂದಿ ರಕ್ತದಾನ ಮಾಡಿದರು. ಸಿಮ್ಸ್ನ ಸಹಾಯಕ ಪ್ರಾಧ್ಯಾಪಕಿ ಡಾ. ಗೀತಾ ಲಕ್ಷ್ಮಿ ಶಿಬಿರಕ್ಕೆ ಚಾಲನೆ ನೀಡಿದರು. ಡಾ. ಬಿ.ಸಿ.ಬಸಪ್ಪ, ಡಾ. ಕಾಂತರಾಜ, ಡಾ. ಆದರ್ಶ, ಅನುಪಮಾ, ಕಾನೂನು ಕಾಲೇಜು ಪ್ರಾಂಶುಪಾಲರಾದ ಡಾ. ಎ.ಅನಲ ಅಧ್ಯಕ್ಷತೆ ವಹಿಸಿದ್ದರು.
ಮುಂದಿನ ಸುದ್ದಿ ಓದಲು ಕೆಳಗಿರುವ NEXT ಬಟನ್ ಕ್ಲಿಕ್ ಮಾಡಿ