ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 2 FEBRUARY 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಕುವೆಂಪು ವಿಶ್ವವಿದ್ಯಾಲಯದ ಆಡಳಿತ ಕುಲಸಚಿವರನ್ನು ನೇಮಿಸಿದ್ದ ಸರ್ಕಾರ ಎರಡನೇ ದಿನದಲ್ಲಿ ಆದೇಶ ಬದಲಿಸಿದೆ. ಮತ್ತೊಬ್ಬ ಅಧಿಕಾರಿಯನ್ನು ಆ ಸ್ಥಾನಕ್ಕೆ ನೇಮಿಸಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಕುವೆಂಪು ವಿಶ್ವವಿದ್ಯಾಲಯದ ನೂತನ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ವಿಜಯ ಕುಮಾರ್.ಹೆಚ್.ಬಿ ಅವರನ್ನು ನೇಮಿಸಲಾಗಿದೆ.
ಎರಡೆ ದಿನದಲ್ಲಿ ಆದೇಶ ಬದಲು
ಜ.31ರಂದು ಕೆಎಎಸ್ ಅಧಿಕಾರಿ ಶಿವರಾಜು.ಪಿ ಅವರನ್ನು ಕುವೆಂಪು ವಿವಿ ಆಡಳಿತ ಕುಲಸಚಿವರಾಗಿ ನೇಮಿಸಿ ಸರ್ಕಾರ ಆದೇಶಿಸಿತ್ತು. ಶಿವರಾಜು ಅವರು ಅವರು ಇನ್ನೂ ಅಧಿಕಾರ ಸ್ವೀಕರಿಸಿಲ್ಲ. ಆಗಲೆ ಅವರ ಆದೇಶ ಬದಲಿಸಿರುವ ಸರ್ಕಾರ, ವಿಜಯಕುಮಾರ್ ಅವರನ್ನು ನೇಮಿಸಿದೆ. ಜ.31ರ ಆದೇಶದಲ್ಲಿ ವಿಜಯ ಕುಮಾರ್ ಅವರನ್ನು ಯಾದಗಿರಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿ ಆಗಿ ನೇಮಿಸಲಾಗಿತ್ತು.
ಡಿವೈಎಸ್ಪಿ ವಿಚಾರದಲ್ಲು ಹೀಗೆ ಆಗಿದೆ
ಶಿವಮೊಗ್ಗ ಉಪ ವಿಭಾಗದಲ್ಲಿ ಖಾಲಿ ಇದ್ದ ಡಿವೈಎಸ್ಪಿ ಹುದ್ದೆಗೆ ಲೋಕಾಯುಕ್ತ ಡಿವೈಎಸ್ಪಿ ಜೆ.ಜೆ.ತಿರುಮಲೇಶ್ ಅವರನ್ನು ಸರ್ಕಾರ ನೇಮಿಸಿತ್ತು. ಆದರೆ ಎರಡೆ ದಿನದಲ್ಲಿ ತಿರುಮಲೇಶ್ ಅವರ ವರ್ಗಾವಣೆ ಆದೇಶವನ್ನು ರದ್ದುಗೊಳಿಸಲಾಗಿತ್ತು. ಆ ಸ್ಥಾನಕ್ಕೆ ರಾಜ್ಯ ಗುಪ್ತವಾರ್ತೆ ಡಿವೈಎಸ್ಪಿ ಬಾಬು ಆಂಜನಪ್ಪ ಅವರನ್ನು ನೇಮಿಸಲಾಗಿದೆ. ಈ ಬೆಳವಣಿಗೆ ಬೆನ್ನಿಗೆ ಕುವೆಂಪು ವಿವಿ ಆಡಳಿತ ಕುಲಸಚಿವರ ನೇಮಕಾತಿ ಆದೇಶವು ಎರಡೆ ದಿನಕ್ಕೆ ಬದಲಾಗಿದೆ.
ಇದನ್ನೂ ಓದಿ – ಡಿವೈಎಸ್ಪಿಗಳ ವರ್ಗಾವಣೆ, ಜಿಲ್ಲೆಯಲ್ಲಿ ಯಾರೆಲ್ಲರ ವರ್ಗವಾಗಿದೆ? ತಿರುಮಲೇಶ್ ವರ್ಗಾವಣೆ ರದ್ದಾಗಿದ್ದೇಕೆ?