ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
SHIVAMOGGA LIVE NEWS | 8 FEBRURARY 2023
SHANKARAGHATTA : ಕುವೆಂಪು ವಿಶ್ವವಿದ್ಯಾಲಯದ (Kuvempu University) ಪ್ರಭಾರ ಕುಲಸಚಿವರಾಗಿ (ಆಡಳಿತ) ಸ್ನಾತಕೋತ್ತರ ವಿಭಾಗದ ಡೀನ್ ಪ್ರೊ. ಸಿ.ಗೀತಾ ಮತ್ತು ಪ್ರಭಾರ ಹಣಕಾಸು ಅಧಿಕಾರಿಯಾಗಿ ಸ್ನಾತಕೋತ್ತರ ಜೈವಿಕ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ವೈ.ಎಲ್.ರಾಮಚಂದ್ರ ಅವರನ್ನು ನೇಮಕ ಮಾಡಲಾಗಿದೆ.

ಕುಲಸಚಿವೆಯಾಗಿದ್ದ ಜಿ.ಅನುರಾಧ ಅವರನ್ನು ಜ.9ರಂದು ವಿಜಯನಗರ ಅಪರ ಜಿಲ್ಲಾಧಿಕಾರಿಯಾಗಿ ಸರ್ಕಾರ ವರ್ಗಾಯಿಸಿತ್ತು. ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್.ಕೆ.ನವೀನ್ ಕುಮಾರ್ ಅವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿತ್ತು. ಹಣಕಾಸು ಅಧಿಕಾರಿಯಾಗಿದ್ದ ರಾಮಕೃಷ್ಣ ಅವರನ್ನು ಮಾತೃ ಇಲಾಖೆಗೆ ವರ್ಗಾಯಿಸಲಾಗಿತ್ತು. ಈ ಜವಾಬ್ದಾರಿಯನ್ನು ಪ್ರೊ. ಎಸ್.ಕೆ.ನವೀನ್ ಕುಮಾರ್ ಅವರಿಗೆ ವಹಿಸಲಾಗಿತ್ತು.
ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣ, ಕೆಲಸದ ಹೆಸರಲ್ಲಿ ಮಹಾ ಮೋಸ, ದಾಖಲಾಯಿತು ಮೊದಲ ಕೇಸ್

CLICK HERE TO JOIN SHIVAMOGGA LIVE WHATSAPP GROUP