ಬೆಂಗಳೂರು : ದ್ವಿತೀಯ ಪಿ.ಯು. ಪರೀಕ್ಷೆ ಫಲಿತಾಂಶ (Result) ಪ್ರಕಟಗೊಂಡಿದೆ. ಈ ಬಾರಿ ಶಿವಮೊಗ್ಗ ಜಿಲ್ಲೆ 7ನೇ ಸ್ಥಾನ ಪಡೆದಿದೆ.
ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಪಿ.ಯು.ಸಿ ಫಲಿತಾಂಶ ಪ್ರಕಟಿಸಿದೆ. ಉಡುಪಿ ಜಿಲ್ಲೆ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ, ಬೆಂಗಳೂರು ದಕ್ಷಿಣ ತೃತೀಯ ಸ್ಥಾನ ಪಡೆದಿದೆ.
ಇಲ್ಲಿದೆ ಫಲಿತಾಂಶದ ಹೈಲೈಟ್ಸ್
» ಕಲಾ, ವಾಣಿಜ್ಯ ಮತ್ತು ವಿಜ್ಞಾನದ ವಿಭಾಗದಿಂದ ರಾಜ್ಯದಲ್ಲಿ ಒಟ್ಟು 6.37 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. 4.68 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಶೇ.73.45ರಷ್ಟು ಫಲಿತಾಂಶ ಬಂದಿದೆ.
ಇದನ್ನೂ ಓದಿ » ಶಿವಮೊಗ್ಗ ಈದ್ಗಾ ಮೈದಾನಕ್ಕೆ ಸಿಸಿಟಿವಿ ಕ್ಯಾಮರಾ ಕಣ್ಗಾವಲು, ಎಷ್ಟು ಕ್ಯಾಮರಾ ಅಳವಡಿಸಲಾಗಿದೆ?
» 2.92 ಲಕ್ಷ ಬಾಲಕರ ಪೈಕಿ 1.99 ಲಕ್ಷ ಬಾಲಕರು ಪಾಸಾಗಿದ್ದಾರೆ. 3.45 ಲಕ್ಷ ಬಾಲಕಿಯರ ಪೈಕಿ 2.69 ಲಕ್ಷ ಬಾಲಕಿಯರು ಪಾಸಾಗಿದ್ದಾರೆ. ಶೇ.77.88ರಷ್ಟು ಬಾಲಕಿಯರು ಪಾಸಾಗಿದ್ದು, ಮೇಲುಗೈ ಸಾಧಿಸಿದ್ದಾರೆ.
» ಉತ್ತೀರ್ಣರಾದ ಒಟ್ಟು ವಿದ್ಯಾರ್ಥಿಗಳ ಪೈಕಿ 1,00,571 ವಿದ್ಯಾರ್ಥಿಗಳು ಉನ್ನತ ಶ್ರೇಣಿ (ಶೇ.85ಕ್ಕು ಅಧಿಕ), 2,78,054 ವಿದ್ಯಾರ್ಥಿಗಳು ಪ್ರಥಮ ದರ್ಜೆ (ಶೇ.65ಕ್ಕಿಂತಲು ಹೆಚ್ಚು ಅಂಕ), 70,969 ವಿದ್ಯಾರ್ಥಿಗಳು ದ್ವಿತೀಯ ದರ್ಜೆ (ಶೇ.50ಕ್ಕಿಂತಲು ಅಧಿಕ ಅಂಕ), 18,845 ವಿದ್ಯಾರ್ಥಿಗಳು ತೃತೀಯ ದರ್ಜೆ (ಶೇ.50ಕ್ಕಿಂತಲು ಕಡಿಮೆ ಅಂಕ) ಪಡೆದಿದ್ದಾರೆ.
» ಉಡುಪಿ ಜಿಲ್ಲೆಯಲ್ಲಿ ಶೇ.93.90ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ದಕ್ಷಿಣ ಕನ್ನಡ ಶೇ.93.57, ಬೆಂಗಳೂರು ದಕ್ಷಿಣ ಶೇ.85.36, ಕೊಡಗು ಶೇ.83.84, ಬೆಂಗಳೂರು ಉತ್ತರ ಶೇ.83.31ರಷ್ಟು ಫಲಿತಾಂಶ ಪಡೆದಿವೆ.
» ಯಾದಗಿರಿ ಜಿಲ್ಲೆಯ ಶೇ.48.45ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದು ಕೊನೆಯ ಸ್ಥಾನ ಪಡೆದಿದೆ.
» ಶಿವಮೊಗ್ಗ ಜಿಲ್ಲೆಯಲ್ಲಿ ಶೇ.79.91ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200