ಶಿವಮೊಗ್ಗದ ಸೇಕ್ರೆಡ್‌ ಹಾರ್ಟ್‌ ಶಾಲೆ ವಜ್ರಮಹೋತ್ಸವ, ಯಾವಾಗ? ಏನೇನಿರುತ್ತೆ ಕಾರ್ಯಕ್ರಮ?

ಶಿವಮೊಗ್ಗ: ಸೇಕ್ರೆಡ್ ಹಾರ್ಟ್ ಪ್ರೌಢ ಶಾಲೆಯ 60ನೇ ವರ್ಷದ ವಜ್ರಮಹೋತ್ಸವದ ಆಚರಣೆಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗುವುದು ಎಂದು ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಮಾಜಿ ಸಚಿವ ಕುಮಾ‌ರ್ ಬಂಗಾರಪ್ಪ ತಿಳಿಸಿದರು. (ಈ ಸುದ್ದಿಯನ್ನು ಇನ್ನು 60 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಮಾರ ಬಂಗಾರಪ್ಪ, ನಗರದ ಹೃದಯ ಭಾಗದಲ್ಲಿರುವ ಸೇಕ್ರೆಡ್ ಹಾರ್ಟ್ ಪ್ರೌಢಶಾಲೆ 1965ರಲ್ಲಿ ಚಿಕ್ಕದಾಗಿ ಪ್ರಾರಂಭಗೊಂಡು ಇಂದು ಹೆಮ್ಮರವಾಗಿ ಬೆಳೆದಿದೆ. 1990ರಲ್ಲಿ ಬೆಳ್ಳಿ ಮಹೋತ್ಸವವನ್ನು ಆಚರಿಸಿಕೊಂಡಿತ್ತು. ಈಗ ವಜ್ರ ಮಹೋತ್ಸವ ಆಚರಣೆಗೆ ಸಿದ್ಧತೆ ನಡೆಸಿದ್ದೇವೆ ಎಂದರು.

Kumar-Bangarappa-at-Shivamogga-Press-Trust

ಡಿ.20 ಮತ್ತು 21ರಂದು ವಜ್ರಮಹೋತ್ಸವ ಆಚರಣೆ ಮಾಡಲಾಗುವುದು. ಡಿ.20ರಂದು ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಏರ್ಪಡಿಸಲಾಗಿದೆ ಮತ್ತು ಹಳೆಯ ವಿದ್ಯಾರ್ಥಿಗಳಿಗಾಗಿ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಶಾಲಾ ಆವರಣದಲ್ಲಿ ಸಂಜೆ ಮನೋರಂಜನೆ ಹಾಗೂ ಔತಣಕೂಟ ಕಾರ್ಯಕ್ರಮವಿದೆ ಎಂದು ಕುಮಾ‌ರ್ ಬಂಗಾರಪ್ಪ ತಿಳಿಸಿದರು.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ

ಜಿಲ್ಲಾಧಿಕಾರಿಗಳಾದ ಸುಹಾಸ್‌.ಎಲ್.ವೈ, ಡಾ.ದಯಾನಂದ, ರಾಜಕಾರಣಿಗಳಾದ ಡಾ. ಧನಂಜಯ ಸರ್ಜಿ, ಕುಮಾರ್ ಬಂಗಾರಪ್ಪ, ವಿಜ್ಞಾನಿಗಳಾದ ಗಣೇಶ್ ನಾಯರ್, ಐಎಎಸ್ ಪದವಿ ಪಡೆದ ಮಂಜುನಾಥ್ ನಾಯಕ್ ಸೇರಿದಂತೆ ಹಲವರು ಈ ಶಾಲೆಯಲ್ಲಿಯೇ ಓದಿದ್ದಾರೆ. ನಾಡಿಗೆ ಹೆಸರು ತಂದಿದ್ದಾರೆ.ಫಾ.ಸ್ವಾನಿ ಡಿಸೋಜಾ, ಸೇಕ್ರೆಡ್‌ ಹಾರ್ಟ್‌ನ ಧರ್ಮಗುರು

sacred heart school shimoga

ಪತ್ರಿಕಾಗೋಷ್ಠಿಯಲ್ಲಿ ಹಳೆಯ ವಿದ್ಯಾರ್ಥಿಗಳಾದ ಡಾ. ಧನಂಜಯ ಸರ್ಜಿ, ಹೆಚ್.ಸಿ. ಯೋಗೀಶ್, ಬಳ್ಳೇಕೆರೆ ಸಂತೋಷ್, ಹರ್ಷಾ, ರಾಕೇಶ್ ಡಿಸೋಜಾ, ಕಿರಣ್, ಮರಿಯಪ್ಪ, ವಿಲಿಯಂ ಡಿಸೋಜಾ, ವಿನ್ಸೆಂಟ್, ಫ್ಯಾಟ್ರಿಕ್, ಸೆಕ್ರೇಡ್ ಹಾರ್ಟ್‌ನ ಫಾ. ಕ್ಲಿಫರ್ಡ್‌ ರೋಷನ್ ಪಿಂಟೋ, ಫಾ. ಸ್ಪ್ಯಾನಿ ಡಿಸೋಜಾ, ಫಾ. ಫ್ರಾನ್ಸಿಸ್ ನರೋನ, ಕಿರಣ್ ಫೆರ್ನಾಂಡಿಸ್, ಮುಖ್ಯ ಶಿಕ್ಷಕ ಹೂಬರ್ಟ್ ಮಿರಾಂಡಾ ಸೇರಿದಂತೆ ಹಲವರಿದ್ದರು.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Kumar-Bangarappa-at-Shivamogga-Press-Trust

Leave a Comment