ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 20 APRIL 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
RAIN REPORT : ಜಿಲ್ಲೆಯಾದ್ಯಂತ ರಾತ್ರಿಯಿಂದ ಗುಡುಗ ಸಹಿತ ನಿರಂತರವಾಗಿ ಜೋರು ಮಳೆಯಾಗುತ್ತಿದೆ. ಇದರಿಂದ ತಾಪಮಾನ ತಗ್ಗಿದ್ದು , ವಾತಾವರಣ ತಂಪಾಗಿದೆ. ಶುಕ್ರವಾರ ಸಂಜೆ ಕೆಲವು ಹೊತ್ತು ಜೋರು ಮಳೆಯಾಗಿತ್ತು. ಆದರೆ ಮಧ್ಯರಾತ್ರಿಯಿಂದ ಮಳೆ ಅಬ್ಬರ ಜೋರಾಗಿದೆ. ಗುಡುಗು, ಮಿಂಚು ಕೂಡ ಹೆಚ್ಚಾಗಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ತೀರ್ಥಹಳ್ಳಿಯಲ್ಲಿ ಬೆಳಗಿನ ಜಾವದಿಂದ ಮಳೆಯಾಗುತ್ತಿದೆ. ಇನ್ನು ಕೆಲವು ಹೊತ್ತು ಮಳೆಯಾಗುವ ಸಾಧ್ಯತೆ ಇದೆ. ಮತ್ತೆ ಮಧ್ಯಾಹ್ನದ ವೇಳೆ ಪುನಃ ಮಳೆ ಮುಂದುವರೆಯುವ ಸಂಭವವಿದೆ. ಹೊಸನಗರದಲ್ಲಿಯು ಮಳೆಯಾಗುತ್ತಿದೆ. ಸಂಜೆ ಪುನಃ ಮಳೆ ಮುಂದುವರೆಯುವ ಸಂಭವವಿದೆ. ಸಾಗರ, ಸೊರಬ, ಭದ್ರಾವತಿ, ಶಿಕಾರಿಪುರದಲ್ಲಿಯು ಗುಡುಗು ಸಹಿತ ಮಳೆಯಾಗುತ್ತಿದೆ. ನಿರಂತರ ಮಳೆಯಿಂದಾಗಿ ಎಲ್ಲೆಡೆ ವಾತಾವರಣ ತಂಪಾಗಿದೆ.
ಇದನ್ನೂ ಓದಿ – ಶಿವಮೊಗ್ಗ ಸದ್ಯಕ್ಕೆ ಕೂಲ್, ಇಡೀ ದಿನ ಮುಂದುವರೆಯಲಿದೆ ಮಳೆ, ಇವತ್ತು ಎಷ್ಟು ತಾಪಮಾನವಿರುತ್ತೆ?