ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 12 DECEMBER 2020
ಮೊದಲ ಹಂತದಲ್ಲಿ ಕರೋನ ಲಸಿಕೆ ವಿತರಣೆಗೆ ಶಿವಮೊಗ್ಗದಲ್ಲಿ ಪಟ್ಟಿ ಸಿದ್ಧವಾಗಿದೆ. ಮೊದಲಿಗೆ 20 ಸಾವಿರ ಜನರನ್ನು ಗುರುತಿಸಲಾಗಿದ್ದು, ಇವರಿಗೆ ಲಸಿಕೆ ನೀಡಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.
RELATED NEWS | ಶಿವಮೊಗ್ಗಕ್ಕೆ ಮೊದಲು ಬರುತ್ತೆ ಕರೋನ ಲಸಿಕೆ, ಅಕ್ಕಪಕ್ಕದ ಜಿಲ್ಲೆಗೆ ಇಲ್ಲಿಂದಲೇ ಪೂರೈಕೆ, ಹೇಗಿದೆ ಗೊತ್ತಾ ಲಸಿಕೆ ಸಂಗ್ರಹಕ್ಕೆ ವ್ಯವಸ್ಥೆ?
ಭಾರತದಲ್ಲಿ ಕರೋನ ಲಸಿಕೆ ಕೊನೆ ಹಂತದ ಪರೀಕ್ಷೆಯಲ್ಲಿದೆ. ಲಸಿಕೆ ವಿತರಣೆಗೆ ಸರ್ಕಾರಗಳು ಸಿದ್ಧತೆ ಆರಂಭಿಸಿವೆ. ಶಿವಮೊಗ್ಗದಲ್ಲಿಯು ಲಸಿಕೆ ಸಂಗ್ರಹ ಕೇಂದ್ರ ಸ್ಥಾಪಿಸಲಾಗುತ್ತಿದೆ. ಮೊದಲ ಹಂತದಲ್ಲಿ ಲಸಿಕೆ ವಿತರಣೆಗೆ ಪಟ್ಟಿ ಸಿದ್ಧಪಡಿಸಲಾಗಿದೆ.
ಮೊದಲಿಗೆ ಯಾರಿಗೆ ಸಿಗುತ್ತೆ ಲಸಿಕೆ?
ಕರೋನ ವ್ಯಾಪಕವಾಗಿದ್ದ ಸಂದರ್ಭ, ಜೀವದ ಹಂಗು ತೊರೆದು, ರೋಗಿಗಳಿಗೆ ಚಿಕಿತ್ಸೆ ನೀಡಿದ ಕರೋನ ವಾರಿಯರ್ಸ್‍ಗೆ ಮೊದಲ ಹಂತದಲ್ಲಿ ಲಸಿಕೆ ಸಿಗಲಿದೆ. ಕರೋನ ಸಂದರ್ಭ ಚಿಕಿತ್ಸೆ ನೀಡಿದ್ದ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತರಿಗೆ ಲಸಿಕೆ ಸಿಗಲಿದೆ. ಕೋವಿಡ್ ಸಂದರ್ಭದ ಯಾರೆಲ್ಲ ಡ್ಯೂಟಿ ಮಾಡಿದ್ದರು ಅನ್ನುವ ಆನ್‍ಲೈನ್ ಡೇಟಾದ ಆಧಾರದಲ್ಲಿ ಲಸಿಕೆ ನೀಡಲಾಗುತ್ತದೆ.
20,549 ಮಂದಿಗೆ ಲಸಿಕೆ, ಪೂರೈಕೆ ಹೇಗೆ? ಎಲ್ಲದರ ವಿಡಿಯೋ ರಿಪೋರ್ಟ್

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
LATEST NEWS
- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 27 ಮಾರ್ಚ್ 2026

- ಆಗುಂಬೆ ಘಾಟಿಯಲ್ಲಿ ರಸ್ತೆಗೆ ಬಿದ್ದ ಮರ, ಕೆಲ ಹೊತ್ತು ಟ್ರಾಫಿಕ್ ಜಾಮ್

- ಕುಟುಂಬದ ಜೊತೆ ಊಟ ಮುಗಿಸಿ, ಮಾತನಾಡಿ ಮಲಗಲು ತೆರಳಿದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

- ಶಿವಮೊಗ್ಗದಲ್ಲಿ ಶ್ರೀಕಾಂತಣ್ಣ ಕಪ್ ಕ್ರಿಕೆಟ್ ಪಂದ್ಯಾವಳಿ, ಟ್ರೋಫಿ, ಟೀ ಶರ್ಟ್‌ಗಳ ಅನಾವರಣ

- ಸರ್ವೆಗೆ ಹೋದಾಗ ಇಂಜಿನಿಯರ್, ಸರ್ವೇಯರ್ ಮೇಲೆ ಕೋಲು, ಕಲ್ಲುಗಳಿಂದ ದಾಳಿ

About The Editor
ನಿತಿನ್ ಆರ್.ಕೈದೊಟ್ಲು
















