ಶಿವಮೊಗ್ಗ ಲೈವ್.ಕಾಂ | SHIMOGA NEWS | 23 MAY 2021
ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಕರೋನ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಇವತ್ತು 960 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದ ಎಂದು ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್‍ನಲ್ಲಿ ತಿಳಿಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಇವತ್ತು ಶಿವಮೊಗ್ಗ ಮತ್ತು ಸಾಗರ ತಾಲೂಕಿನಲ್ಲಿ ಇನ್ನೂರಕ್ಕಿಂತಲೂ ಹೆಚ್ಚು ಮಂದಿಗೆ ಪಾಸಿಟಿವ್ ಬಂದಿದೆ. ಶಿವಮೊಗ್ಗದಲ್ಲಿ 224, ಸಾಗರದಲ್ಲಿ 211 ಮಂದಿಗೆ ಪಾಸಿಟಿವ್ ಬಂದಿದೆ. ಭದ್ರಾವತಿಯಲ್ಲಿ 121, ಶಿಕಾರಿಪುರದಲ್ಲಿ 127, ಸೊರಬದಲ್ಲಿ 125, ತೀರ್ಥಹಳ್ಳಿಯಲ್ಲಿ 75, ಹೊಸನಗರದಲ್ಲಿ 60 ಇತರೆ ಜಿಲ್ಲೆಯಿಂದ ಬಂದಿರುವ 17 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಕರೋನದಿಂದ ಸಾವನ್ನಪ್ಪುವವರ ಸಂಖ್ಯೆಯು ಹೆಚ್ಚಳವಾಗುತ್ತಲೆ ಇದೆ. ಜಿಲ್ಲೆಯಲ್ಲಿ ಇವತ್ತು 13 ಮಂದಿ ಸಾವಿಗೀಡಾಗಿದ್ದಾರೆ. ಇದರಿಂದ ಈವರೆಗೂ ಮೃತಪಟ್ಟವರ ಸಂಖ್ಯೆ 699ಕ್ಕೆ ತಲುಪಿದೆ.
ಇದನ್ನೂ ಓದಿ | ಲಸಿಕಾ ಕೇಂದ್ರದ ಮುಂದೆ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ಮಾತಿನ ಚಕಮಕಿ, ಫೇಸ್‌ಬುಕ್‌ನಲ್ಲಿ ವಿಡಿಯೋ, ಫೋಟೊ ವೈರಲ್
ಇನ್ನೊಂದೆಡೆ ಇವತ್ತು ಪಾಸಿಟಿವ್‍ಗಿಂತಲೂ ಗುಣವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರ ಸಂಖ್ಯೆ ಹೆಚ್ಚಾಗಿದೆ. 978 ಮಂದಿ ಕೋವಿಡ್‍ನಿಂದ ಗುಣವಾಗಿದ್ದಾರೆ. ಹಾಗಾಗಿ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 7103ಕ್ಕೆ ತಲುಪಿದೆ.
ಕೋರನ ಬಗ್ಗೆ ನಿರ್ಲಕ್ಷ್ಯ ಬೇಡ. ಈಗಲೆ ಪರೀಕ್ಷಿಸಿಕೊಳ್ಳಿ. ಚಿಕಿತ್ಸೆ ಪಡೆದು ಮಹಾಮಾರಿಯಿಂದ ಪಾರಾಗಿ. ಸುರಕ್ಷಿತವಾಗಿ ಪರೀಕ್ಷಿಸಿಕೊಳ್ಳಲು ಈ ಫೋಟೊದಲ್ಲಿರುವ ನಂಬರ್‍ಗೆ ಕರೆ ಮಾಡಿ.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]