ಜಲಾಶಯದ ಮಾಹಿತಿ: ಶಿವಮೊಗ್ಗದ ಮೂರು ಪ್ರಮುಖ ಜಲಾಶಯಗಳಾದ ಲಿಂಗನಮಕ್ಕಿ, ತುಂಗಾ ಮತ್ತು ಭದ್ರಾ ಜಲಾಶಗಳ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿದೆ. ಇದರಿಂದ ಜಲಾಶಯಗಳಿಗೆ ಒಳ ಹರಿವು ತುಸು ಏರಿಕೆಯಾಗಿದೆ.
ಇವತ್ತು ಜಲಾಶಯಗಳಿಗೆ ಎಷ್ಟಿದೆ ಒಳ ಹರಿವು?
ಲಿಂಗನಮಕ್ಕಿ ಜಲಾಶಯ
ಜಲಾಶಯಕ್ಕೆ ಸದ್ಯ 2,080 ಕ್ಯೂಸೆಕ್ ಒಳಹರಿವು ಇದೆ. ಡ್ಯಾಂನ ಇಂದಿನ ನೀರಿನ ಮಟ್ಟ 1749.50 ಅಡಿ ದಾಖಲಾಗಿದೆ. ಪ್ರಸ್ತುತ 17.87 ಟಿಎಂಸಿ ನೀರು ಸಂಗ್ರಹವಿದೆ. ವಿದ್ಯುತ್ ಉತ್ಪಾದನೆಗಾಗಿ ಪೆನ್‌ಸ್ಟಾಕ್ ಮತ್ತು ಸ್ಲೂಯಿಸ್ ಗೇಟ್‌ಗಳ ಮೂಲಕ ಒಟ್ಟು 2905.11 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ ನೀರಿನ ಮಟ್ಟ 1763.05 ಅಡಿ ಇತ್ತು.

ಭದ್ರಾ ಜಲಾಶಯ
ಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ 136 ಅಡಿ 9 ಇಂಚು ದಾಖಲಾಗಿದೆ. ಒಟ್ಟು 71.535 ಟಿಎಂಸಿ ಸಂಗ್ರಹ ಸಾಮರ್ಥ್ಯದ ಈ ಜಲಾಶಯದಲ್ಲಿ ಪ್ರಸ್ತುತ 24.754 ಟಿಎಂಸಿ ನೀರಿನ ಸಂಗ್ರಹವಿದೆ. ಜಲಾಶಯಕ್ಕೆ ಸದ್ಯ 128 ಕ್ಯೂಸೆಕ್ ಒಳಹರಿವು ಇದೆ. ನಾಲೆಗಳು, ನದಿ ಹಾಗೂ ಆವಿಯಾಗುವಿಕೆ ಸೇರಿ ಒಟ್ಟು 441 ಕ್ಯೂಸೆಕ್ ನೀರು ಹೊರಗೆ ಹೋಗುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದ ಮಟ್ಟ 143 ಅಡಿ 3 ಇಂಚು ಇತ್ತು. 968 ಕ್ಯೂಸೆಕ್ ಒಳಹರಿವು ಇತ್ತು.

ತುಂಗಾ ಜಲಾಶಯ
ಗಾಜನೂರಿನ ತುಂಗಾ ಜಲಾಶಯದ ಇಂದಿನ ನೀರಿನ ಮಟ್ಟ 586.90 ಮೀಟರ್ ತಲುಪಿದೆ. ಒಟ್ಟು 3.24 ಟಿಎಂಸಿ ಸಂಗ್ರಹ ಸಾಮರ್ಥ್ಯದ ಡ್ಯಾಂನಲ್ಲಿ 2.411 ಟಿಎಂಸಿ ನೀರಿನ ಸಂಗ್ರಹವಿದೆ. ಜಲಾಶಯಕ್ಕೆ ಪ್ರಸ್ತುತ 336 ಕ್ಯೂಸೆಕ್ ಒಳಹರಿವು ಇದೆ. ನದಿ, ನಾಲೆ ಹಾಗೂ ಕುಡಿಯುವ ನೀರಿಗಾಗಿ ಒಟ್ಟು 463 ಕ್ಯೂಸೆಕ್ ನೀರನ್ನು ಹೊರಗೆ ಹರಿಸಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದ ಮಟ್ಟ 587.81 ಮೀಟರ್ ಇತ್ತು.