ಜಲಾಶಯದ ಸುದ್ದಿ: ಮಲೆನಾಡು ಭಾಗದಲ್ಲಿ ಮಳೆ ಸಂಪೂರ್ಣ ಕುಸಿತವಾಗಿದ್ದು ಶಿವಮೊಗ್ಗ ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳ ಒಳ ಹರಿವು ಮತ್ತು ನೀರಿನ ಮಟ್ಟ ಸಂಪೂರ್ಣ ಕುಸಿತ ಕಂಡಿದೆ. ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ತಳ ಮುಟ್ಟಿದೆ.
ಸುದ್ದಿಯ ಮುಂದಿನ ಭಾಗ ಕೆಳಗಿದೆ
ಇದನ್ನೂ ಓದಿ:➤ ಬ್ಯಾಂಕ್ನಲ್ಲಿ ಉದ್ಯೋಗವಕಾಶ, ಜೂನ್ 20ಕ್ಕೆ ಶಿವಮೊಗ್ಗದಲ್ಲಿ ನೇರ ಸಂದರ್ಶನ, ಯಾರೆಲ್ಲ ಪಾಲ್ಗೊಳ್ಳಬಹುದು?
ಲಿಂಗನಮಕ್ಕಿ ಜಲಾಶಯ
- ಗರಿಷ್ಠ ಮಟ್ಟ: 1819.00 ಅಡಿ
- ಇಂದಿನ ಜಲಮಟ್ಟ: 1748.20 ಅಡಿ (ಕಳೆದ ವರ್ಷ ಇದೇ ದಿನ 1769.70 ಅಡಿ ಇತ್ತು)
- ಪ್ರಸ್ತುತ ಲಭ್ಯವಿರುವ ನೀರು: 16.78 ಟಿಎಂಸಿ (ಶೇ 11.07)
- ಇಂದಿನ ಒಳಹರಿವು: 184 ಕ್ಯೂಸೆಕ್
- ಇಂದಿನ ಹೊರಹರಿವು: 2404.48 ಕ್ಯೂಸೆಕ್
ಭದ್ರಾ ಜಲಾಶಯ
- ಗರಿಷ್ಠ ಮಟ್ಟ: 186’0″ ಅಡಿ
- ಇಂದಿನ ಜಲಮಟ್ಟ: 136.7 ಅಡಿ (ಕಳೆದ ವರ್ಷ ಇದೇ ದಿನ 145.5 ಅಡಿ ಇತ್ತು)
- ಪ್ರಸ್ತುತ ನೀರಿನ ಸಂಗ್ರಹ: 24.620 ಟಿಎಂಸಿ
- ಇಂದಿನ ಒಳಹರಿವು: 291 ಕ್ಯೂಸೆಕ್
- ಇಂದಿನ ಹೊರಹರಿವು: 291 ಕ್ಯೂಸೆಕ್ (ಆರ್‌ಬಿಸಿ, ಎಲ್‌ಬಿಸಿ ಮತ್ತು ರಿವರ್ ಸ್ಲೂಯಿಸ್ ಸೇರಿ)
ತುಂಗಾ ಜಲಾಶಯ
- ಗರಿಷ್ಠ ಮಟ್ಟ: 588.24 ಮೀಟರ್
- ಇಂದಿನ ಜಲಮಟ್ಟ: 587.37 ಮೀಟರ್ (ಕಳೆದ ವರ್ಷ ಇದೇ ದಿನ 587.93 ಮೀಟರ್ ಇತ್ತು)
- ಪ್ರಸ್ತುತ ನೀರಿನ ಸಂಗ್ರಹ: 2.760 ಟಿಎಂಸಿ
- ಇಂದಿನ ಒಳಹರಿವು: 435.0 ಕ್ಯೂಸೆಕ್
- ಇಂದಿನ ಹೊರಹರಿವು: 123.0 ಕ್ಯೂಸೆಕ್

