ಜಲಾಶಯದ ಮಾಹಿತಿ: ಮಲೆನಾಡು ಭಾಗದಲ್ಲಿ ಮಳೆ ಪ್ರಮಾಣ ಪುನಃ ಕಡಿಮೆಯಾಗಿದೆ. ಅದ್ದರಿಂದ ಶಿವಮೊಗ್ಗ ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳಾದ ತುಂಗಾ, ಭದ್ರಾ ಮತ್ತು ಲಿಂಗನಮಕ್ಕಿ ಡ್ಯಾಮ್‌ಗಳ ಒಳ ಹರಿವು ಪ್ರಮಾಣ ತಗ್ಗಿದೆ. ಇವತ್ತು ಯಾವ್ಯಾವ ಡ್ಯಾಮ್‌ನ ನೀರಿನ ಮಟ್ಟ ಎಷ್ಟಿದೆ? ಇಲ್ಲಿದೆ ಡಿಟೇಲ್ಸ್.
ಲಿಂಗನಮಕ್ಕಿ ಜಲಾಶಯ
- ಗರಿಷ್ಠ ಮಟ್ಟ: 1819.00 ಅಡಿ
- ಇಂದಿನ ನೀರಿನ ಮಟ್ಟ: 1797.20 ಅಡಿ
- ಒಟ್ಟು ಸಾಮರ್ಥ್ಯ: 151.64 ಟಿಎಂಸಿ
- ಲಭ್ಯವಿರುವ ನೀರು: 89.21 ಟಿಎಂಸಿ
- ಒಳಹರಿವು: 9,245 ಕ್ಯೂಸೆಕ್
- ಹೊರಹರಿವು: 3,685.70 ಕ್ಯೂಸೆಕ್
ಆಗಸ್ಟ್ 26ರಂದು ಲಿಂಗನಮಕ್ಕಿ ಜಲಾಶಯದ ಜಲಮಟ್ಟ 1797 ಅಡಿ ಇತ್ತು. ಇಂದು 0.20 ಅಡಿ ಹೆಚ್ಚಳವಾಗಿದೆ. ನಿನ್ನೆ 10,451 ಕ್ಯೂಸೆಕ್ ಇದ್ದ ಒಳಹರಿವು ಇದ್ದಿದ್ದು ಇಂದು 9,245 ಕ್ಯೂಸೆಕ್‌ಗೆ ತಗ್ಗಿದೆ. ಇನ್ನು, ಹೊರ ಹರಿವು ಪ್ರಮಾಣವು ಇಳಿಕೆಯಾಗಿದೆ. ನಿನ್ನೆ 3,998.99 ಕ್ಯೂಸೆಕ್ ಇದ್ದ ಹೊರಹರಿವು ಇಂದು 3,685.70 ಕ್ಯೂಸೆಕ್‌ಗೆ ಇಳಿಕೆಯಾಗಿದೆ.

ಭದ್ರಾ ಜಲಾಶಯ
- ಗರಿಷ್ಠ ಮಟ್ಟ: 186 ಅಡಿ
- ಇಂದಿನ ನೀರಿನ ಮಟ್ಟ: 176 ಅಡಿ 8 ಇಂಚು
- ಒಟ್ಟು ಸಾಮರ್ಥ್ಯ: 71.535 ಟಿಎಂಸಿ
- ಲಭ್ಯವಿರುವ ನೀರು: 60.280 ಟಿಎಂಸಿ
- ಒಳಹರಿವು: 4,628 ಕ್ಯೂಸೆಕ್
- ಹೊರಹರಿವು: 207 ಕ್ಯೂಸೆಕ್
ಆಗಸ್ಟ್ 26ರಂದು ಭದ್ರಾ ಜಲಾಶಯದ ಜಲಮಟ್ಟ 176 ಅಡಿ 4 ಇಂಚು ಇತ್ತು. ನಿನ್ನೆ 5,739 ಕ್ಯೂಸೆಕ್ ಇದ್ದ ಒಳಹರಿವು ಇಂದು 4,628 ಕ್ಯೂಸೆಕ್‌ಗೆ ಇಳಿಕೆಯಾಗಿದೆ. ಹೊರಹರಿವು ನಿನ್ನೆ 206 ಕ್ಯೂಸೆಕ್ ಇದ್ದದ್ದು, ಇಂದು 207 ಕ್ಯೂಸೆಕ್ ಇದೆ.
ತುಂಗಾ ಜಲಾಶಯ
- ಗರಿಷ್ಠ ಮಟ್ಟ: 588.24 ಮೀಟರ್
- ಇಂದಿನ ನೀರಿನ ಮಟ್ಟ: 588.24 ಮೀಟರ್
- ಒಟ್ಟು ಸಾಮರ್ಥ್ಯ: 3.24 ಟಿಎಂಸಿ
- ಲಭ್ಯವಿರುವ ನೀರು: 2.411 ಟಿಎಂಸಿ
- ಒಳಹರಿವು: 12,577 ಕ್ಯೂಸೆಕ್
- ಹೊರಹರಿವು: 12,577 ಕ್ಯೂಸೆಕ್
ಆಗಸ್ಟ್ 26ರಂದು ತುಂಗಾ ಜಲಾಶಯದ ಒಳ ಮತ್ತು ಹೊರ ಹರಿವು 14,393 ಕ್ಯೂಸೆಕ್ ಇತ್ತು. ಹಿನ್ನೀರು ಭಾಗದಲ್ಲಿ ಮಳೆ ಕಡಿಮೆಯಾದ ಹಿನ್ನೆಲೆ ಒಳಹರಿವು 12,577 ಕ್ಯೂಸೆಕ್‌ಗೆ ಇಳಿಕೆಯಾಗಿದೆ. ಜಲಾಶಯ ಭರ್ತಿ ಆಗಿರುವುದರಿಂದ ಒಳ ಹರಿವಿನಷ್ಟೇ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ.