ಜಲಾಶಯ ವರದಿ: ಮಲೆನಾಡು ಭಾಗದಲ್ಲಿ ಮಳೆ ಮುಂದುವರೆದಿದ್ದು ಶಿವಮೊಗ್ಗ ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳ ಒಳ ಹರಿವು ಹೆಚ್ಚಳವಾಗಿದೆ. ಕಳೆದ 24 ಗಂಟೆಯಲ್ಲಿ ಲಿಂಗನಮಕ್ಕಿ ಡ್ಯಾಮ್‌ನ ನೀರಿನ ಮಟ್ಟ 2.85 ಅಡಿ ಹೆಚ್ಚಳವಾಗಿದೆ. ಇನ್ನು, ತುಂಗಾ ಜಲಾಶಯದ ಒಳ ಹರಿವು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಇಲ್ಲಿದೆ ಇಂದಿನ ಜಲಾಶಯದ ಮಟ್ಟ.➤ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.
ಲಿಂಗನಮಕ್ಕಿ ಜಲಾಶಯ
- ಗರಿಷ್ಠ ಮಟ್ಟ: 1819.00 ಅಡಿ
- ಇಂದಿನ ಜಲಮಟ್ಟ: 1784.70 ಅಡಿ (24 ಗಂಟೆಯಲ್ಲಿ 2.85 ಅಡಿ ಏರಿಕೆ)
- ಒಟ್ಟು ಜಲಸಾಮರ್ಥ್ಯ: 151.64 ಟಿಎಂಸಿ
- ಲಭ್ಯವಿರುವ ನೀರು: 62.85 ಟಿಎಂಸಿ
- ಒಳಹರಿವು: 59,203 ಕ್ಯೂಸೆಕ್
- ಹೊರಹರಿವು: 761 ಕ್ಯೂಸೆಕ್
ತುಂಗಾ ಜಲಾಶಯ
- ಗರಿಷ್ಠ ಮಟ್ಟ: 588.24 ಮೀಟರ್
- ಇಂದಿನ ಜಲಮಟ್ಟ: 586.83 ಮೀಟರ್
- ಒಟ್ಟು ಜಲಸಾಮರ್ಥ್ಯ: 3.24 ಟಿಎಂಸಿ
- ಲಭ್ಯವಿರುವ ನೀರು: 1.634 ಟಿಎಂಸಿ
- ಒಳಹರಿವು: 86,123 ಕ್ಯೂಸೆಕ್
- ಹೊರಹರಿವು: 89,503 ಕ್ಯೂಸೆಕ್
ಭದ್ರಾ ಜಲಾಶಯ
- ಗರಿಷ್ಠ ಮಟ್ಟ: 186 ಅಡಿ
- ಇಂದಿನ ಜಲಮಟ್ಟ: 163 ಅಡಿ 6 ಇಂಚು
- ಒಟ್ಟು ಜಲಸಾಮರ್ಥ್ಯ: 71.535 ಟಿಎಂಸಿ
- ಲಭ್ಯವಿರುವ ನೀರು: 46.250 ಟಿಎಂಸಿ
- ಒಳಹರಿವು: 36,103 ಕ್ಯೂಸೆಕ್
- ಹೊರಹರಿವು: 189 ಕ್ಯೂಸೆಕ್

ಇದನ್ನೂ ಓದಿ:➤ ಲಿಂಗನಮಕ್ಕಿ ಡ್ಯಾಮ್ ನೀರಿನ ಮಟ್ಟ 3.90 ಅಡಿ ಹೆಚ್ಚಳ, ತುಂಗಾ ಡ್ಯಾಮ್ ಒಳಹರಿವು ಏರಿಕೆ, ಭದ್ರಾ ಸ್ಥಿತಿ ಹೇಗಿದೆ?